ದಿನ ತಿನ್ನೋ ಈರುಳ್ಳಿಯಲ್ಲಿ ಎಷ್ಟೆಲ್ಲ ಆರೋಗ್ಯಕರ ಗುಣಗಳಿವೆ ಗೊತ್ತಾ??

0
1099

ಪ್ರತಿನಿತ್ಯ ಸೇವಿಸುವ ಆಹಾರದಲ್ಲಿ ಈರುಳ್ಳಿಯನ್ನು ಉಪಯೋಗಿಸುವುದರಿಂದ ನಮ್ಮ ದೇಹಕ್ಕೆ ಅನೇಕ ಪ್ರಯೋಜನಗಳು ಉಂಟು. ಈರುಳ್ಳಿಯಲ್ಲಿ ಅಧಿಕ ಕಬ್ಬಿಣದಂಶವಿದ್ದು ಇದನ್ನು ಸೇವಿಸಿದ್ದಲ್ಲಿ ರಕ್ತ ವೃದ್ಧಿಯಾಗುತ್ತದೆ. ಈರುಳ್ಳಿ ಸೇವಿಸುವುದರಿಂದ ಆಯು ವೃದ್ಧಿಯಾಗುವುದು. ಈರುಳ್ಳಿಯಲ್ಲಿ ಕ್ರಿಮಿನಾಶಕ ಗುಣವಿರುವುದರಿಂದ ಜಠರ ಮತ್ತು ಕರುಳಿಗೆ ಸಂಬಂಧಿಸಿದ ಅನೇಕ ರೋಗಗಳಿಂದ ಮುಕ್ತರಾಗಬಹುದು.ಪ್ರತಿದಿನ ಈರುಳ್ಳಿ ಸೇವಿಸಿದರೆ ಹೃದ್ರೋಗ ಸಮಸ್ಯೆ ಕಾಣಿಸಿಕೊಳ್ಳುವುದಿಲ್ಲ.

-ಈರುಳ್ಳಿಯನ್ನು ನುಣ್ಣಗೆ ಅರೆದು ವಸಡಿಗೆ ಹಚ್ಚಿ ಮೆದುವಾಗಿ ತಿಕ್ಕಿದರೆ ವಸಡಿನಿಂದಾಗುವ ರಕ್ತಸ್ರಾವ ನಿಲ್ಲುವುದು.

-ಈರುಳ್ಳಿ ತಿನ್ನುವುದರಿಂದ ರೋಗಾಣುಪೂರಿತ ಆಮಶಂಕೆ ಗುಣವಾಗುವುದು.

-ಸುಟ್ಟ ಹಸಿ ಈರುಳ್ಳಿಯನ್ನು ಅಗೆದು ತಿನ್ನುವುದರಿಂದ ದಂತಕ್ಷಯ ನಿವಾರಣೆಯಾಗುವುದು.

-ಜಜ್ಜಿದ ಈರುಳ್ಳಿಯನ್ನು ಜೇನು ಅಥವಾ ಚೇಳು ಕಚ್ಚಿದ ಬಾಗಕ್ಕೆ ಹಚ್ಚಿದರೆ ನೋವು ಶಮನವಾಗುವುದು.

-ಜಜ್ಜಿದ ಈರುಳ್ಳಿಯನ್ನು ಒಡೆದಿರುವ ಅಂಗಾಲಿಗೆ ಕಟ್ಟಿದರೆ ಬಿರುಕು ಕಡಿಮೆಯಾಗುತ್ತದೆ.

-ಜಜ್ಜಿದ ಈರುಳ್ಳಿಯನ್ನು ಮೂಸುತ್ತಿದ್ದರೆ ವಾಂತಿ, ನೆಗಡಿ ತಲೆನೋವು ಗುಣವಾಗುವುದು.

-ದೇಹದ ತೂಕ ಹೆಚ್ಚಲು ಈರುಳ್ಳಿಯನ್ನು ಬೆಲ್ಲದ ಸಮೇತ ತಿನ್ನಬೇಕು.

-ಅರಿಶಿನ ಕಾಮಾಲೆ, ಮೂಲವ್ಯಾಧಿ ಇರುವ ರೋಗಿಗಳು ಈರುಳ್ಳಿ ಎಲೆಯನ್ನು ತಿಂದಲ್ಲಿ ಉತ್ತಮ ಗುಣ ಕಂಡುಬರುವುದು.

-ಕಣ್ಣು ನೋವು, ಕಣ್ಣುರಿ, ಕಣ್ಣು ಚುಚ್ಚುವಿಕೆ, ತಲೆನೋವು ಇವುಗಳ ನಿವಾರಣೆಗೆ ಪ್ರತಿದಿನ ಊಟದ ಜೊತೆ ಒಂದು ಈರುಳ್ಳಿ ಗಡ್ಡೆ ಸೇವಿಸಬೇಕು.

-ಪ್ರತಿದಿನವೂ ಹಸಿ ಈರುಳ್ಳಿಯನ್ನು ತಿನ್ನುವುದರಿಂದ ಸ್ನಾಯು ಮಂಡಲಕ್ಕೆ ಚೈತನ್ಯ ಒದಗಿ ನಿದ್ರೆ ವಿಶೇಷವಾಗಿ ಬರುತ್ತದೆ.