ಈರುಳ್ಳಿ ಕತ್ತರಿಸಿರಿ ಆದರೆ ಅಳಬೇಡಿ!

0
691

ನಮ್ಮಲ್ಲಿ ತುಂಬಾ ಜನಕ್ಕೆ ಈರುಳ್ಳಿ ಹಾಕಿದ ಅಡುಗೆ ಅಂದರೆ ತುಂಬಾ ಇಷ್ಟ, ಆದರೆ ಈರುಳ್ಳಿ ಕತ್ತರಿಸುವುದು ಎಷ್ಟು ಜನ ಇಷ್ಟಪಡುತ್ತಾರೆ? ಬಹುಷಃ ತುಂಬಾ ಜನ ಇಷ್ಟಪಡುವುದಿಲ್ಲ. ಏಕೆಂದರೆ, ಈರುಳ್ಳಿ ಕತ್ತರಿಸುವಾಗ ಮನಗೇ ಗೋತ್ತಿಲ್ಲದಂತೆ ಕಣ್ಣಲ್ಲಿ ನೀರು ಬರುವುದು ಬರುತ್ತದೆ. ನಾವು ಅಳುತ್ತೇವೆ, ಏನೂ ಕಾರಣವಿಲ್ಲದೆ!

ಇದು ಯಾಕೆ ಎಂದು ನಾವು ವಿಜ್ಞಾನಿಗಳನ್ನು ಪ್ರಶ್ನೆ ಕೇಳಿದರೆ ಅವರೊಂದು ರೀತಿ ಉತ್ತರಿಸುತ್ತಾರೆ.

ನಾವು ಈರುಳ್ಳಿಯನ್ನು ಕತ್ತರಿಸಿದಾಗ ಹಲವಾರು ಸೆಲ್’ಗಳನ್ನು ಕತ್ತರಿಸಿ ಓಪನ್ ಮಾಡುತ್ತೇವೆ. ಇಂಥ ಕೆಲವು ಸೆಲ್’ಗಳಲ್ಲಿ Enzymesಗಳು ಇರುತ್ತವೆ. ಈ  Enzymesಗಳು ನಾವು ಈರುಳಿಯನ್ನು ಕತ್ತರಿಸಿದಾಗ ಹೊಗೆ ಬಂದು, ಗಾಳಿಯನ್ನು ಸೇರುತ್ತವೆ. ಹೀಗೆ ಹೊರಗೆ ಬಂದ Enzymesಗಳು ಇತರ ಜಾತಿಯ ಕಣಗಳ ಜೊತೆ ಸೇರಿ sulfonic acid  ರಚನೆಯಾಗುತ್ತದೆ. ಕೆಲವೇ ಕ್ಷಣಗಳಲ್ಲಿ ಇದು volatile gas ಆಗಿ ಪರಿವರ್ತಯಾಗುತ್ತದೆ.

ಈ ಗ್ಯಾಸ್ ನಮ್ಮ ಕಣ್ಣಿಗೆ ಸೇರಿದಾಗ ನೀರಿನೊಡನೆ ಸೇರಿ ಪ್ರತಿಕ್ರಿಯಿಸಿತ್ತದೆ. ಇದರಿಂದ ರಾಸಾಯನಿಕ ಕ್ರಿಯೆ ಮತ್ತೆ ಬದಲಾಗಿ, sulfonic acid ರಚನೆಯಾಗುತ್ತದೆ. ಇದು ಕಣ್ಣಿಗೆ ಕಿರಿಕಿರಿ ಉಂಟುಮಾಡುತ್ತದೆ. ನಮ್ಮ ಕಣ್ಣಿನ ನರಗಳ ಉಂಟುಮಾಡುತ್ತದೆ. ನಮ್ಮ ಕಣ್ಣಿನ ನರಗಳು ತುಂಬಾ ಸೂಕ್ಷ್ಮವಾದ ಕಾರಣ. ಅವು ತಕ್ಷಣ ಕಿರಿಕಿರಿಯನ್ನು ಗ್ರಹಿಸಿ, ಮೆದುಳಿಗೆ ಸಂದೇಶ ರವಾನಿಸುತ್ತವೆ. ತಕ್ಷಣ ಮೆದುಳು ತನ್ನ ಕೆಲಸ ಪ್ರಾರಂಭಿಸುತ್ತದೆ. ಹೆಚ್ಚು ನೀರನ್ನು ಉತ್ಪಾದಿಸುವಂತೆ ಅದು fear ductಗೆ ತಿಳಿಸುತ್ತದೆ. ಅದರಂತೆ fear duct ಹೆಚ್ಚು ನೀರನ್ನು ಉತ್ಪಾದಿಸಿದಾಗ ನಿಮಗೆ ಕಣ್ಣೀರು ಬರುತ್ತದೆ. ಈ ನೀರು acidನ್ನು ಮೃದು ಮಾಡಿ, ಕಣ್ಣನ್ನು ರಕ್ಷಿಸುತ್ತದೆ.

ಕಣ್ಣೀರು ಬಂದ ಕೂಡಲೇ ನಾವು ತಕ್ಷಣ ಕೈಯಿಂದ ಕಣ್ಣನ್ನು ಉಜ್ಜಲು ಪ್ರಾರಂಭಿಸುತ್ತೇವೆ. ಆದರೆ ಇದರಿಂದ ಕಣ್ಣಿನ ಕಿರಿಕಿರಿ ಕಡಿಮೆ ಆಗುವ ಬದಲು ಮತ್ತಷ್ಟು ಹೆಚ್ಚಾಗುತ್ತದೆ/ ಹಾಗಾದರೆ ಈರುಳ್ಳಿ ಕತ್ತರಿಸುವಾಗ ಕಣ್ಣೀರು ಬರದಂತೆ ತಡೆಯುವುದು ಹೇಗೆ? ಒಬ್ಬೊಬ್ಬರು ಒಂದೊಂದು ರೀತಿಯ ವಿಧಾನ ಅನುಸರಿಸುತ್ತಾರೆ.

*ಕೆಲವರು ಈರುಳ್ಳಿ ಕತ್ತರಿಸುವಾಗ ತಲೆಯನ್ನು ಆದಷ್ಟು ದೂರ ಹಿಡಿದು ಕತ್ತರಿಸುತ್ತಾರೆ. ಇದರಿಂದ ಗ್ಯಾಸು ನೇರವಾಗಿ ಕಣ್ಣು ಸೇರುವುದು ತಪ್ಪುತ್ತದೆ.

*ಕೆಲವರು ಕಣ್ಣಿಗೆ ಕೂಲಿಂಗ್ ಗ್ಲಾಸ್ ಹಾಕಿಕೊಳ್ಳುತ್ತಾರೆ! ಏನಮ್ಮಾ  ಅಂತ ಯಾರಾದರೂ ಛೇಡಿಸಿದರೆ, ಅದು ಅವರಿಗೆ ಬಿಟ್ಟ ವಿಷಯ.

*ಈರುಳ್ಳಿ ಕತ್ತರಿಸುವ ಸ್ವಲ್ಪ ಮೊದಲು ಅದನ್ನು ಫ್ರಿಡ್ಜ್ ನಲ್ಲಿ ಇಟ್ಟರೆ ಸಹ ಕಣ್ಣೀರನ್ನು ಕಡಿಮೆ ಮಾಡಬಹುದು.

*ಈರುಳ್ಳಿಯನ್ನು ಸ್ವಲ್ಪ ಬೇಯಿಸಿ, ಆನಂತರ ಕತ್ತರಿಸಿದರೆ ಸ್ವಲ್ಪ ಕಡಿಮೆ ಅಳಬಹುದು!

*ನೀರಿನಲ್ಲಿಟ್ಟು ಈರುಳ್ಳಿಯನ್ನು ಕತ್ತರಿಸಿದರೆ, ಕಣ್ಣಿಗೆ ಕಿರಿಕಿರಿಯಾಗುವುದಿಲ್ಲ.

*ಇನ್ನೊಂದು ಕುತೂಹಲಕಾರಿ ವಿಧಾನವೂ ಇದೆ. ಈರುಳ್ಳಿ ಕತ್ತರಿಸುವ ಸಮಯದಲ್ಲಿ ನಿಂಬೆ ಹಣ್ಣಿನ ಚೂರು, ಬ್ರೆಡ್ ಚೂರು ಅಥವಾ ಕಲ್ಲುಸಕ್ಕರೆ ಚೂರನ್ನು ಬಾಯಲ್ಲಿ ಹಿಡಿದಿರಬೇಕು. ಹೀಗೆ ಮಾಡಿದಾಗ. ಗ್ಯಾಸು ಕಣ್ಣನ್ನು ತಲುಪುವುದಕ್ಕೆ ಮೊದಲೇ ಬಾಯಲ್ಲಿ ಹಿಡಿದ ಆಹಾರ, ಅದನ್ನು ಹೀರಿಕೊಳ್ಳುತ್ತದೆ.

 

Sulfonic acid