ರುಚಿಕರವಾದ ಹಾಗು ಬಾಯಲ್ಲಿ ನೀರೂರಿಸುವ ಈರುಳ್ಳಿ ದೋಸೆ ಮಾಡುವ ಸಿಂಪಲ್ ವಿಧಾನ..!!

0
2332

Kannada News | Recipe tips in Kannada

ದೋಸೆ ಒಂದು ದಕ್ಷಿಣ ಭಾರತೀಯ ತಿನಿಸು. ಇದು ಬೆಳಗಿನ ತಿಂಡಿಯಾಗಿ ಸರ್ವೇಸಾಮಾನ್ಯ. ಮನೆಯಲಿ ಸಾಮಾನ್ಯವಾಗಿ ಪ್ಲೇನ್ ದೋಸೆ ಅಥವಾ ಮಸಾಲಾ ದೋಸೆಯನ್ನು ಮಾಡಿ ನೀವು ಸವಿಯುತ್ತೀರಾ..ಹಾಗಾದರೆ ಬನ್ನಿ ಮನೆಯಲ್ಲಿ ರುಚಿರುಚಿಕರವಾದ ಮತ್ತು ಗರಿಗರಿಯಾದ ಈರುಳ್ಳಿ ದೋಸ ಹೇಗೆ ಮಾಡುವುದು ಎಂದು ತಿಳಿಯೋಣ. ಆರೋಗ್ಯಕ್ಕೂ ಒಳ್ಳೆಯದು ಮತ್ತು ತುಂಬಾ ರುಚಿಕರವಾಗಿರುತ್ತದೆ.

ಬೇಕಾಗುವ ಸಾಮಗ್ರಿಗಳು

 • ಹುಳಿ ಬಂದ ದೋಸೆ ಹಿಟ್ಟು 02 ಕಪ್
 • ಈರುಳ್ಳಿ 02
 • ಹಸಿಮೆಣಸಿನ ಕಾಯಿ 04
 • ಕರಿಬೇವು
 • ಕೊತ್ತಂಬರಿ ಸೊಪ್ಪು
 • ತುರಿದ ಕ್ಯಾರೇಟ್ 02 ಸ್ಪೂನ್
 • ಉಪ್ಪುರುಚಿಗೆ ತಕ್ಕಷ್ಟು
 • ಎಣ್ಣೆ 02 ಸ್ಪೂನ್

ಮಾಡುವ ವಿಧಾನ:

 • ಹುಳಿ ಬಂದ ದೋಸೆ ಹಿಟ್ಟಿಗೆ ಈರುಳ್ಳಿ, ಹಸಿಮೆಣಸು, ಕರಿಬೇವು, ಕೊತ್ತಂಬರಿ ಸೊಪ್ಪು, ತುರಿದ ಕ್ಯಾರೆಟ್, ಹಾಗೂ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ಚೆನ್ನಾಗಿ ಕಲಸಿ.
 • ಮೊದಲನೆಯದಾಗಿ ದೋಸಾ ಹಂಚನ್ನು ಒಲೆಯಮೇಲೆ ಇಟ್ಟು ಬಿಸಿಯಾಗಲು ಬಿಡಬೇಕು. ಬಿಸಿಯಾದ ನಂತರ ಒಂದು ಟೀಸ್ಪೂನ್ ಎಣ್ಣೆ ಯನ್ನು ದೋಸಾ ಹಂಚಿಗೆ ಸವರಬೇಕು.
 • ಹೆಂಚು ಕಾದ ಮೇಲೆ ದಪ್ಪವಾಗಿ ದೋಶೆ ಹುಯ್ಯಿರಿ. ಸುತ್ತಲೂ ಎಣ್ಣೆ ಹಾಕಿ ಹದವಾದ ಉರಿಯಲ್ಲಿ ಎರಡೂ ಕಡೆ ಬೇಯಿಸಿ.
 • ಈಗ ಗರಿಗರಿಯಾದ ಈರುಳ್ಳಿ ದೋಸ ಸಿದ್ಧವಾಗಿದೆ ಇದನ್ನು ತೆಂಗಿನಕಾಯಿ ಚಟ್ನಿ ಅಥವಾ ಬೆಣ್ಣೆಯೊಂದಿಗೆ ಸವಿಯಿರಿ.

Also Read: ಈ ಸಾರನ್ನ ವಾರಕ್ಕೊಮ್ಮೆಯಾದ್ರೂ ಮಾಡ್ಕೊಂಡು ತಿಂದ್ರೆ ಹೃದ್ರೋಗ ಬಾರದಂತೆ ತಡೆಗಟ್ಟಬಹುದು..ಹೃದ್ರೋಗಿಗಳ ಪಾಲಿನ ಅಮೃತ ದಾಳಿಂಬೆ ಸಾರು ಮಾಡುವ ವಿಧಾನ.