ಇಡಿ ದೇಶವೇ ಈರುಳ್ಳಿ ಕಣ್ಣಿರಲ್ಲಿ; ಕೆ.ಜಿಗೆ 200 ರೂ. ದಾಟಲಿದೆ ಈರುಳ್ಳಿ, ಬಂಗಾರದ ರೀತಿಯಲ್ಲಿ ಲೋಕಾಯುಕ್ತದಿಂದ ಈರುಳ್ಳಿ ದಾಸ್ತಾನು ಪರಿಶೀಲನೆ.!

0
236

ದೇಶದಲ್ಲಿ ಇದೇ ಮೊದಲ ಭಾರಿಗೆ ಈರುಳ್ಳಿ ಕೆ.ಜಿ 200 ದಾಟಲಿದ್ದು ಇತಿಹಾಸ ಸೃಷ್ಟಿಸಿದರೆ, ಇತ್ತ ಈರುಳ್ಳಿಗಾಗಿ ದೇಶದಲ್ಲಿ ಚರ್ಚೆಗಳು ನಡೆಯುತ್ತಿದ್ದು. ದಿನೇ ದಿನೇ ಈರುಳ್ಳಿ ಬೆಲೆ ಗಗನಕ್ಕೇರುತ್ತಿದೆ. ದೇಶದ ಮೆಟ್ರೋ ಸಿಟಿಗಳಾದ ರಾಷ್ಟ್ರ ರಾಜಧಾನಿ ನವದೆಹಲಿ, ಮುಂಬೈ, ಬೆಂಗಳೂರು, ಚೆನ್ನೈ, ಕೊಲ್ಕತ್ತಾ, ಹೈದರಾಬಾದ್​, ಪುಣೆ ಮತ್ತು ಅಹಮದಾಬಾದ್​ಗಳಲ್ಲಿ ಈರುಳ್ಳಿ ಬೆಲೆ 180ರ ಗಡಿ ದಾಟಿದೆ. ಹೀಗಾಗಿ ಈರುಳ್ಳಿ ಗ್ರಾಹಕರ ಕಣ್ಣಲ್ಲಿ ನೀರು ತರಿಸುತ್ತಿದೆ. ಹಾಪ್ ಕಾಮ್ಸ್ ನಲ್ಲಿ ಕೆ.ಜಿ ಈರುಳ್ಳಿಗೆ 160 ರೂಪಾಯಿ ಇದ್ದರೆ, ಶುಕ್ರವಾರದವರೆಗೂ ಕೆ.ಜಿ ಈರುಳ್ಳಿಗೆ 142 ರೂ ಇತ್ತು. ಎಪಿಎಂಸಿ ಯಾರ್ಡ್‍ನಲ್ಲೇ ಕೆ.ಜಿ ಫೈನ್ ಈರುಳ್ಳಿಗೆ 180 ರೂಪಾಯಿಗೆ ಏರಿಕೆಯಾಗಿದೆ.

ಹೌದು ಅಂತರರಾಷ್ಟ್ರೀಯ ಮಟ್ಟದಲ್ಲಿ ಸುದ್ದಿ ಮಾಡಿದ ಇರುಳ್ಳಿ ಬೆಲೆ, ಜನರಿಗೆ ತಲೆನೋವು ತಂದಿದ್ದು ಹೋಟೆಲ್ ಉದ್ಯಮಗಳ ಮೇಲೆ ಹೊಡೆತವಾಗಿದ್ದು, ಗದಗ, ಬಾಗಲಕೋಟೆಯಿಂದ ಟನ್ ಗಟ್ಟಲೆ ಈರುಳ್ಳಿಯನ್ನ ಲಾರಿಗೆ ರೈತರು ತುಂಬಿಸಿಕೊಂಡು ಬರುತ್ತಿದ್ದಾರೆ. ಆದರೆ ರೈತರಿಗೆ ಕ್ವಿಂಟಾಲ್ ಈರುಳ್ಳಿಗೆ ಸಿಗೋದು 8 ರಿಂದ 14 ಸಾವಿರ ಮಾತ್ರ. ಆದರೆ ಮಧ್ಯವರ್ತಿಗಳ ಹಾವಳಿಯಿಂದ ಅಂಗಡಿಗಳಲ್ಲಿ ಈರುಳ್ಳಿ ದರ ದುಪ್ಪಟ್ಟು ಬೆಲೆಗೆ ಮಾರಾಟವಾಗುತ್ತಿದೆ. 1-2 ಕೆ.ಜಿ ಈರುಳ್ಳಿ ತೆಗೆದುಕೊಳ್ಳುತ್ತಿರುವವರು, ಈಗ ಕಾಲು ಕೆಜಿ ಖರೀದಿಸುವ ಪರಸ್ಥಿತಿ ನಿರ್ಮಾಣವಾಗಿದೆ.

ಬೆಂಗಳೂರು ನಗರಕ್ಕೆ ಈರುಳ್ಳಿ ಪೂರೈಕೆಯಲ್ಲಿ ಗಣನೀಯ ಕಡಿತವಾಗಿದೆ. ದಾವಣಗೆರೆ, ಗದಗ, ಹುಬ್ಬಳ್ಳಿಯಿಂದ ಈರುಳ್ಳಿ ಬರುತ್ತಿಲ್ಲ. ಇದರಿಂದ ನಗರದಲ್ಲಿ ಮುಂದಿನ ವಾರ ಈರುಳ್ಳಿ ಬೆಲೆ 200 ರೂ. ಗಡಿ ದಾಟಿದರೂ ಅಚ್ಚರಿ ಪಡಬೇಕಿಲ್ಲ. ಅತ್ತ ಮಂಗಳೂರಿಗೆ ಟರ್ಕಿ ಈರುಳ್ಳಿ ಬಂದಿಳಿದಿದ್ದರೆ ಇತ್ತ ಸಿಲಿಕಾನ್ ಸಿಟಿಗೆ ಈಜಿಪ್ಟ್ ದೇಶದ ಈರುಳ್ಳಿ ಲಗ್ಗೆಯಿಟ್ಟಿದೆ. ನಗರದಲ್ಲಿ ಈರುಳ್ಳಿಗೆ ಬೇಡಿಕೆ ಹೆಚ್ಚಾದ ಹಿನ್ನೆಲೆಯಲ್ಲಿ ಈಜಿಪ್ಟ್ ನಿಂದ ಬೆಂಗಳೂರಿಗೆ ಈರುಳ್ಳಿಯನ್ನು ಆಮದು ಮಾಡಿಕೊಳ್ಳಲಾಗಿದೆ. ಆದರು ಇರುಳ್ಳಿ ಬೆಲೆ ಗಗನಕ್ಕೇರುತ್ತಿದೆ.

ಲೋಕಾಯುಕ್ತದಿಂದ ಈರುಳ್ಳಿ ಅಕ್ರಮ ಪರಿಶೀಲನೆ?

ಅಕ್ರಮ ಹಣ, ಅಸ್ತಿ ಹೊಂದಿದವರನ್ನು ಪರಿಶೀಲಿಸುವಂತೆ ಅಕ್ರಮವಾಗಿ ಇರುಳ್ಳಿ ದಾಸ್ತಾನು ಮಾಡಿಕೊಳ್ಳುವ ವರ್ತಕರಿಗೆ ಲೋಕಾಯುಕ್ತ ಪೊಲೀಸರು ಖಡಕ್‌ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ರೈತರಿಂದ ನ್ಯಾಯಯುತ ಬೆಲೆಗೆ ಈರುಳ್ಳಿ ಖರೀದಿಸಿ ಮಾರಾಟ ಮಾಡುವಂತೆ ತಾಕೀತು ಮಾಡಿದ್ದಾರೆ. ಕೃತಕ ಅಭಾವ ಆರೋಪ ಕೇಳಿ ಬಂದಿರುವ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆಯ ಎಪಿಎಂಸಿಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುವಂತೆ ಲೋಕಾಯುಕ್ತ ನ್ಯಾಯಮೂರ್ತಿ ಪಿ.ವಿಶ್ವನಾಥ ಶೆಟ್ಟಿ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿಲೋಕಾಯುಕ್ತ ಪೊಲೀಸರ ತಂಡ ಶುಕ್ರವಾರ ಎಪಿಎಂಸಿ ಯಾರ್ಡ್‌ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

70ರಷ್ಟು ಕಡಿಮೆ ಈರುಳ್ಳಿ?

ಪ್ರತಿನಿತ್ಯ ಬೆಂಗಳೂರಿಗೆ 1.39 ಲಕ್ಷ ಟನ್‌ ಈರುಳ್ಳಿ ಬರುತ್ತಿತ್ತು. ಕೊರತೆಯ ಕಾರಣ ಈಗ ಸುಮಾರು 36 ಸಾವಿರ ಟನ್‌ ಮಾತ್ರ ಬರುತ್ತಿದೆ. ಅಂದರೆ ಪ್ರತಿದಿನ ಸರಾಸರಿ 70ರಷ್ಟು ಕಡಿಮೆ ಈರುಳ್ಳಿ ಬೆಂಗಳೂರಿನ ಮಾರುಕಟ್ಟೆಗೆ ಬರುತ್ತಿದೆ. ಇದರಿಂದ ಬೆಲೆ ಏರಿಕೆ ಆಗಿದೆ. ಬೆಂಗಳೂರಿಗೆ ರಾಜ್ಯ ಮತ್ತು ನೆರೆಯ ಮಹಾರಾಷ್ಟ್ರದಿಂದ ಈರುಳ್ಳಿ ಬರುತ್ತದೆ. ಆದರೆ, ಎಲ್ಲೆಡೆ ಈರುಳ್ಳಿ ಕೊರತೆ ಕಾರಣ ಸಮೀಪದ ಮಾರುಕಟ್ಟೆಗಳಿಗೆ ಹೋಗುತ್ತಿದೆ ಎಂದು ಎಪಿಎಂಸಿ ಅಧಿಕಾರಿಗಳು ಮತ್ತು ವರ್ತಕರು ಲೋಕಾಯುಕ್ತ ಪೊಲೀಸರಿಗೆ ವಿವರಣೆ ನೀಡಿದರು.