ಕೂದಲಿನ ಸಮಸ್ಯೆಗೆ ಈರುಳ್ಳಿಯ ಚಮತ್ಕಾರ.

0
996

ಕೂದಲು ಉದುರುವ ಸಮಸ್ಯೆ ಯಾರಿಗಿಲ್ಲ ಹೇಳಿ? ಇದು ಪ್ರತಿಯೊಬ್ಬರನ್ನೂ ಬಿಡದೇ ಕಾಡುತ್ತಿರುವ ಸಾಮಾನ್ಯ ಸಮಸ್ಯೆ. ಕೂದಲು ಉದುರುವುದನ್ನು ನಿಲ್ಲಿಸಲು ಏನೆಲ್ಲಾ ವಿಧಾನಗಳನ್ನು ಅನುಸರಿಸಿರುತ್ತೀರಿ. ಅವರಿವರ ಅಭಿಪ್ರಾಯಗಳನ್ನು ಕೇಳಿ ಅದರಂತೆ ಅನುಸರಿಸಿರುತ್ತೀರಿ. ಆದರೂ ಸಹ ಕೂದಲು ಉದುರುವುದನ್ನು ತಡೆಯಲು ಸಾಧ್ಯವಾಗಿರುವುದಿಲ್ಲ. ನಾವು ತಿಳಿಸುವ ನೈಸರ್ಗಿಕ ವಿಧಾನವನ್ನು ಬಳಸಿದರೆ ಸಾಕು. ನಿಮ್ಮ ಸಮಸ್ಯೆಯು ನಿವಾರಣೆಯಾಗುವುದರಲ್ಲಿ ಎರಡು ಮಾತೇ ಇಲ್ಲ.

Image result for Hair loss problem

ಈರುಳ್ಳಿಯಲ್ಲಿ ಸಲ್ಫರ್ ಅಂಶವು ಯಥೇಚ್ಛವಾಗಿದ್ದು, ಸುಗಮ ರಕ್ತ ಸಂಚಲನಕ್ಕೆ ನೆರವಾಗುತ್ತದೆ. ಅಲ್ಲದೇ ಕೂದಲ ಬೆಳವಣಿಗೆಗೆ ಉಪಯುಕ್ತವಾಗುವ ಕೊಲಾಜೆನ್ ಅಂಶವನ್ನು ಉತ್ಪತ್ತಿ ಮಾಡಲು ಹೆಚ್ಚು ಸಹಕಾರಿಯಾಗಲಿದೆ. ಕೇಶದ ಸಮರ್ಪಕ ಬೆಳವಣಿಗೆಗೆ ಕೊಲಾಜೆನ್ ಸತ್ವ ತುಂಬಾ ಅವಶ್ಯಕ. ಈರುಳ್ಳಿಯ ರಸ ಕೂದಲ ಬೇರುಗಳನ್ನು ಸದೃಢಗೊಳಿಸಿ, ಅದರಲ್ಲಿರುವ ಮೈಕ್ರೋಬ್ ನಿರೋಧಕ ಲಕ್ಷಣದಿಂದ ಕೇಶ ಉದುರುವುದನ್ನು ನಿಲ್ಲಿಸಿ, ನೆತ್ತಿಯ ಚರ್ಮದ ಸೋಂಕನ್ನು ನಿವಾರಿಸುತ್ತದೆ. ತಲೆಹೊಟ್ಟು ನಿವಾರಣೆಗೆ ಈರುಳ್ಳಿ ರಸವನ್ನು ವ್ಯಾಪಕವಾಗಿ ಬಳಸಲಾಗುತ್ತಿದೆ. ಸೊಂಪಾದ ಕೂದಲು ಪಡೆಯಲು ಈರುಳ್ಳಿ ರಸ ಬಳಸಿ.

 

ವಿಧಾನ 1 :
1) ಈರುಳ್ಳಿಯನ್ನು ಚಿಕ್ಕ ಚಿಕ್ಕ ತುಂಡುಗಳನ್ನಾಗಿ ಕತ್ತರಿಸಿ ಬಿಸಿ ನೀರಿನಲ್ಲಿ ಚೆನ್ನಾಗಿ ಕುಧಿಸಿ.( 15 -20 ನಿಮಿಷ))
2) ನಂತರ ನೀರನ್ನು ಸ್ವಲ್ಪ ಆರಿಸಿ ಕೂದಲಿನ ಬೇರಿಗೆ ಹಚ್ಚಿ.
3) 45 ನಿಮಿಷಗಳ ನಂತರ ತಲೆ ಸ್ನಾನ ಮಾಡಿ
4) ವಾರದಲ್ಲಿ 2 ಬಾರಿ ಈ ವಿಧಾನ ಅನುಸರಿಸಿ, ದಟ್ಟ ಮತ್ತು ಉದ್ದವಾದ ಕೇಶರಾಶಿ ನಿಮ್ಮದಾಗಿಸಿ.

Related image

ವಿಧಾನ 2 :
1) ಈರುಳ್ಳಿಯನ್ನು ಚಿಕ್ಕ ಚಿಕ್ಕ ತುಂಡುಗಳಾಗಿ ಕತ್ತರಿಸಿ ಮಿಕ್ಸಿಯಲ್ಲಿ ಚೆನ್ನಾಗಿ ರುಬ್ಬಿ.
2) ಈರುಳ್ಳಿಯ ಪೇಸ್ಟನ್ನು ಕೂದಲಿನ ಬೇರಿಗೆ ಹಚ್ಚಿ 45 ಮಿನಿಷಗಳ ನಂತರ ತಲೆ ಸ್ನಾನ ಮಾಡಿ
3) ವಾರದಲ್ಲಿ 1 – 2 ಬಾರಿ ಈ ವಿಧಾನ ಅನುಸರಿಸಿ ಕೂದಲು ಉದುರುವಿಕೆ ತಡೆಗಟ್ಟಿ.

Image result for Put the onion paste into the hair of the hair

ವಿಧಾನ 3 :
ಈರುಳ್ಳಿ ರಸ ಮತ್ತು ಜೇನುತುಪ್ಪದ ಮಿಶ್ತ್ರಣವನ್ನು ಕೂದಲಿಗೆ ಹಚ್ಚಿ 1 ಘಂಟೆ ನಂತರ ತಲೆ ಸ್ನಾನ ಮಾಡುವುದರಿಂದ ತಲೆಹೊಟ್ಟು ಕಡಿಮೆಯಾಗುವುದರ ಜೊತೆ ಕೂದಲಿನ ಮರುಬೆಳವಣಿಗೆಗೆ ಸಹಾಯಕಾರಿಯಾಗಿದೆ.

Related image

ವಿಧಾನ 4 :
2 ಚಮಚ ತೆಂಗಿನ ಎಣ್ಣೆಯನ್ನು 1 ಚಮಚ ಈರುಳ್ಳಿಯ ರಸದೊಂದಿಗೆ ಬೆರೆಸಿ ಕೇಶಕ್ಕೆಹಚ್ಚಿಕೊಳ್ಳುವುದರಿಂದ ಕೂದಲು ಉದುರುವಿಕೆಯನ್ನು ಕಡಿಮೆ ಮಾಡಬಹುದು.

Related image