ನಿಮಗೆ ಗೊತ್ತೇ ಈರುಳ್ಳಿಯಲ್ಲಿ ನಮ್ಮ ಉತ್ತಮ ಆರೋಗ್ಯಕ್ಕೆ ಅಗತ್ಯವಾದ ಎಷ್ಟು ಗುಣಗಳಿವೆ ಅಂತ…?

0
1157

ಈರುಳ್ಳಿಯನ್ನು ನಾವು ಅಡುಗೆ ಮನೆಯಲ್ಲಿ ಸಾಮಾನ್ಯವಾಗಿ ಆಹಾರ ತಯಾರಿಸಲು ಮಾತ್ರ ಬಳಸುತ್ತೇವೆ.ಆದರೆ ಈರುಳ್ಳಿ ತಿನ್ನೋದ್ರಿಂದ ಏನೆಲ್ಲಾ ಲಾಭ ಇದೆ ಗೊತ್ತಾ? ಈರುಳ್ಳಿ ಕಣ್ಣಿಗೆ ತುಂಬಾ ಒಳ್ಳೆಯ ಔಷಧಿ. ಇದು ಸಾಕಷ್ಟು ಪ್ರಮಾಣದಲ್ಲಿ ಕ್ಯಾಲ್ಸಿಯಂ ಮತ್ತು ರಿಬೊಫ್ಲೇವಿನ್ (Riboflavin) ಅಂಶವನ್ನು ಹೊಂದಿದೆ.

ಈರುಳ್ಳಿಯಲ್ಲಿ ಅಡಗಿರುವ ಆರೋಗ್ಯಕರ ಗುಣಗಳು:

 • ಈರುಳ್ಳಿ ರಸಕ್ಕೆ ಸ್ವಲ್ಪ ಬೆಲ್ಲ ಅಥವಾ ಜೇನುತುಪ್ಪ ಬೆರೆಸಿ ಸೇವಿಸಿದರೆ ಕೆಮ್ಮು ನಿವಾರಣೆಯಾಗುತ್ತದೆ.ಇದಲ್ಲದೆ, ಈರುಳ್ಳಿಯನ್ನು ಹಾಗೆಯೇ ತಿನ್ನುವುರಿಂದ ಗಂಟಲು ನೋವು ಕಡಿಮೆಯಾಗುತ್ತದೆ.
 • ಈರುಳ್ಳಿಯನ್ನು ಕತ್ತರಿಸಿ ಬೆಲ್ಲ, ತುಪ್ಪ ಬೆರೆಸಿ ಸೇವಿಸಿದರೆ ದೇಹದ ತೂಕ ವೃದ್ಧಿಯಾಗುತ್ತದೆ. ಇದು ಜೀರ್ಣಶಕ್ತಿಯನ್ನು ಹೆಚ್ಚಿಸುತ್ತದೆ.
 • ಈರುಳ್ಳಿಯನ್ನು ಕತ್ತರಿಸಿ ಹಸಿಯಾಗಿ ಊಟಕ್ಕೆ ಮೊದಲು ಸೇವಿಸಿದರೆ ಜೀರ್ಣಶಕ್ತಿ ಮತ್ತು ಪಚನಶಕ್ತಿ
  ವೃದ್ಧಿಯಾಗುತ್ತದೆ.
 • ಪುಟ್ಟ ಈರುಳ್ಳಿಯನ್ನು ಸೇವಿಸಿದರೆ ಋತುಚಕ್ರ ಸಮಸ್ಯೆ ಇರಲ್ಲ.
 • ಈರುಳ್ಳಿಯನ್ನು ನಿಯಮಿತವಾಗಿ ಸೇವಿಸುತ್ತಿದ್ದರೆ ದೇಹದಲ್ಲಿನ ಸಕ್ಕರೆ ಪ್ರಮಾಣ ನಿಯಂತ್ರಣದಲ್ಲಿರುತ್ತದೆ, ಮತ್ತು ಇದು ಮಧುಮೇಹ ಬರುವುದನ್ನು ತಡೆಗಟ್ಟುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ದೇಹದಲ್ಲಿರುವ ಇನ್ಸುಲಿನ್ ಪ್ರಮಾಣವನ್ನು ಹೆಚ್ಚಿಸುವ ಕೆಲಸವನ್ನೂ ಈರುಳ್ಳಿ ಮಾಡುತ್ತದೆ.
 • ಈರುಳ್ಳಿ ರಸವನ್ನು ಸ್ವಲ್ಪ ಬಿಸಿ ಮಾಡಿ ಕಿವಿಯ ಒಳಗಡೆ ಹಾಕಿದರೆ ಕಿವಿನೋವು ಅಥವಾ ಕಿವಿ ಸೋರುವಿಕೆ ಕಡಿಮೆಯಾಗುತ್ತದೆ.
 • ಈರುಳ್ಳಿಯಲ್ಲಿ ಅತೀ ಹೆಚ್ಚಿನ ಪ್ರಮಾಣದಲ್ಲಿ ರೋಗನಿರೋಧಕ, ನಂಜುನಿರೋಧಕ ಗುಣಗಳಿವೆ. ಇದು ದೇಹಕ್ಕೆ ಬರುವ ಸೂಕ್ಷ್ಮಾಣುಜೀವಿಗಳನ್ನು ತಡೆದು ದೇಹದಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ.
 • ನಿಮಗೆ ಅಸ್ತಮಾ ಇದ್ದರೆ, ಒಂದು ಲೋಟ ನೀರಿಗೆ ಸ್ವಲ್ಪ ಈರುಳ್ಳಿ ರಸ, ಇಂಗು ಮತ್ತು ಕಪ್ಪು ಉಪ್ಪು ಸೇರಿಸಿ ಕುಡಿದರೆ ತುಂಬಾ ಆರಾಮ ಸಿಗುತ್ತದೆ.
 • ಮೂತ್ರದಲ್ಲಿ ಸೋಂಕು ಇರುವಾಗ ಈರುಳ್ಳಿ ಜ್ಯೂಸ್‌ ನಿತ್ಯ ಸೇವಿಸಿದರೆ ಮೂತ್ರದ ಸೋಂಕು ಮೂತ್ರದಲ್ಲಿ ಉರಿ, ಮೂತ್ರದಲ್ಲಿನ ಕಲ್ಲು ನಿವಾರಣೆಯಾಗುತ್ತದೆ.