ಮತ್ತೆ ಶುರುವಾಯಿತು ರೆಸಾರ್ಟ್ ರಾಜಕೀಯ ಪ್ರವಾಸದ ಆಟ ಆವಾಗೆ ಕೈ- ಹೊರೆ ಶಾಸಕರ ಪ್ರವಾಸ ಈಗ ಹೂವಿನ ಶಾಸಕರ ಪ್ರವಾಸ..!!

0
488

ರಾಜ್ಯದ ರಾಜಕೀಯ ಪರಿಸ್ಥಿತಿ ನೋಡಿದರೆ ಈ ರಾಜಕೀಯ ಹುಚ್ಚಾಟದಲ್ಲಿ ಪ್ರಜೆಗಳು ಎಲ್ಲಿ ಬೀದಿಗೆ ಬರುತ್ತಾರೋ ಎಂಬ ಭಯ ಮೂಡುತ್ತಿದೆ. ಏಕೆಂದರೆ ಒಂದು ಯಾವದೋ ಪಕ್ಷ ಆಡಳಿತಕ್ಕೆ ಬಂದು ಸರಾಗವಾಗಿ ರಾಜ್ಯದ ಅಭಿವೃದ್ಧಿ ಕೆಲಸ ಮಾಡಬೇಕು ಹಾಗೆಯೇ ಹೊಸ ಹೊಸ ಯೋಜನೆ ತಂದು ಜನರ ಕಷ್ಟಕೆ ನೇರವಾಗಬೇಕು ಇದರಿಂದ ಸಮೃದ ರಾಜ್ಯವಾಗಲು ಸಾದ್ಯ, ಅದನ್ನು ಬಿಟ್ಟು ವರ್ಷದಲ್ಲಿ ಎರಡು-ಮೂರು ರಾಜಕೀಯ ಕುಸ್ತಿಗಳು ನಡೆದು ರಾಜ್ಯದ ಅಭಿವೃದ್ಧಿ  ಮೇಲೆ ಪರಿಣಾಮ ಬೀರುತ್ತದೆ, ಹಾಗೆಯೇ ಜನರ ನೆಮ್ಮದಿಯನ್ನು ಹಾಳು ಮಾಡುತ್ತಿದೆ ಇದು ಸುಮಾರು 15 ವರ್ಷಗಳಿಂದ ನೆಡೆಯಿತ್ತಿದೆ ಇದರಿಂದ ಆದ ಪರಿಣಾಮವನ್ನು ಲೆಕ್ಕಿಸದೆ ಮತ್ತೆ ಹುಚ್ಚು ಕುಸ್ತಿಗೆ ತಯಾರಿ ನಡೆಸಿದ್ದಾರೆ ಅದು ಹೇಗೆ ಅಂದ್ರೆ ಇಲ್ಲಿದೆ ನೋಡಿ.

ಯಡಿಯೂರಪ್ಪ ಅವರು ಪಕ್ಷದ ಎಲ್ಲಾ ಶಾಸಕರಿಗೆ ಕರೆ ಮಾಡಿ ಮಂಗಳವಾರ ಬೆಂಗಳೂರಿಗೆ ಬರುವಂತೆ ಸೂಚನೆ ನೀಡಿ ತರಾತುರಿಯಲ್ಲಿ ಶಾಸಕಾಂಗ ಪಕ್ಷದ ಸಭೆ ಕರೆದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರವನ್ನು ಉರುಳಿಸಲು ಟೊಂಕ ಕಟ್ಟಿ ನಿಂತಂತಿರುವ ಬಿಜೆಪಿ, ಅದಕ್ಕಾಗಿ ಭಾರೀ ಯೋಜನೆಯನ್ನು ರೂಪಿಸಿಕೊಂಡಿದೆ.ಸಭೆಯ ನಂತರ ಶಾಸಕರನೆಲ್ಲಾ ರೆಸಾರ್ಟ್​ಗೆ ಶಿಫ್ಟ್​ ಮಾಡಲು ಬಿ.ಎಸ್​.ಯಡಿಯೂರಪ್ಪ ಮುಂದಾಗಿದ್ದಾರೆ ಎನ್ನಲಾಗಿದೆ. ಅದಕ್ಕಾಗಿ ಸಕಲ ತಯಾರಿಯನ್ನು ಮಾಡಿಕೊಳ್ಳುತ್ತಿದ್ದಾರೆ.

ಆಪರೇಷನ್ ಹಸ್ತ, ಆಪರೇಷನ್ ತೆನೆಗೆ ಬಿಜೆಪಿ ಶಾಸಕರು ಒಳಗಾದದಂತೆ ನೋಡಿಕೊಳ್ಳಲು ಎಚ್ಚರಿಕೆ ವಹಿಸಿರುವ ಬಿ.ಎಸ್​.ಯಡಿಯೂರಪ್ಪ ಅವರು ಅದಕ್ಕಾಗಿ ಬಿಜೆಪಿಯ ಎಲ್ಲ ಶಾಸಕರೂ ರೆಸಾರ್ಟ್​ಗೆ ಹೋಗಲು ರೆಡಿಯಾಗಿ ಬರುವಂತೆ ಸೂಚನೆ ನೀಡಿದ್ದಾರೆ. ಮೈತ್ರಿ ಸರ್ಕಾರ ಪತನವಾದ ಬಳಿಕ ಬಿಜೆಪಿ ಸರ್ಕಾರ ರಚನೆಗೆ ತಯಾರಿ ನಡೆಸುತ್ತಿದೆ ಅಂತೆ. ಇದೇ ವಿಚಾರವಾಗಿ ಬಿಜೆಪಿ ಮಂಗಳವಾರ ಶಾಸಕಾಂಗ ಪಕ್ಷದ ಸಭೆ, ಬಿಜೆಪಿ ಜಿಲ್ಲಾ ಪ್ರಮುಖರು ಮತ್ತು ಜಿಲ್ಲಾಧ್ಯಕ್ಷರ ಸಭೆ ನಡೆಸಲು ನಿರ್ಧರಿಸಿತ್ತು. ಆದರೆ, ಆ ಸಭೆಯನ್ನು ಮಂಗಳವಾರದ ಬದಲಿಗೆ ಬುಧವಾರ ನಡೆಸಲು ತೀರ್ಮಾನಿಸಲಾಗಿದೆ. ಸಭೆ ಮುಗಿದ ನಂತರ ನೇರವಾಗಿ ರೆಸಾರ್ಟ್​ಗೆ ಶಿಫ್ಟ್​ ಆಗುವ ಸಾಧ್ಯತೆ ಇದೆ.

ಮತ್ತೊಂಡದೆ ಇದೆ ವಿಷಯವಾಗಿ ಮಾತನಾಡಿದ ಲೋಕೋಪಯೋಗಿ ಸಚಿವ ಎಚ್.ಡಿ.ರೇವಣ್ಣ ಯಡಿಯೂರಪ್ಪ ಸಿಎಂ ಆಗುವುದು ಸಾದ್ಯವಿಲ್ಲ, ಸಮ್ಮಿಶ್ರ ಸರ್ಕಾರ ಪತನಗೊಂಡರೂ ರಾಷ್ಟ್ರಪತಿ ಆಳ್ವಿಕೆ ಜಾರಿಗೆ ಬರುತ್ತದೆ. ಈ ವಿಷಯವನ್ನು ಬಿಜೆಪಿ ಯ ನಾಯಕರೇ ನನಗೆ ತಿಳಿಸಿದ್ದಾರೆ ಎಂದು ಹೇಳಿದರು. ಈ ಎಲ್ಲಾ ಬೆಳವಣಿಗೆಗಳ ನಡುವೆ ನಾಳೆ ಬೆಳಗ್ಗೆ ಬೆಂಗಳೂರಿಗೆ ಕೇಂದ್ರ ಗೃಹ ಸಚಿವ ರಾಜನಾಥ್ ಸಿಂಗ್ ಆಗಮಿಸುತ್ತಿದ್ದು, ರಾಜ್ಯ ರಾಜಕೀಯದಲ್ಲಿ ಕುತೂಹಲ ಕೆರಳುವಂತೆ‌ ಮಾಡುತ್ತಿದ್ದಾರೆ. ರಾಜ್ಯದಲ್ಲಿ ನಾಳೆ ಯಾವುದೇ ಅಧಿಕೃತ ಸರ್ಕಾರಿ ಕಾರ್ಯಕ್ರಮ ಇಲ್ಲ. ಆದರೂ ರಾಜ್ಯಕ್ಕೆ ಕೇಂದ್ರ ಗೃಹ ಸಚಿವರ ಆಗಮನ ರಾಜಕೀಯ ವಲಯದಲ್ಲಿ ಸಂಚಲನ ಮೂಡಿಸುತ್ತಿದೆ. ಈ ಎಲ್ಲಾ ವಲಯದಲ್ಲಿ ನಡೆಯುತ್ತಿರುವ ರಾಜ್ಯ ರಾಜಕೀಯ ಬೆಳವಣಿಗೆಗೂ ರಾಜನಾಥ್ ಸಿಂಗ್ ಆಗಮನಕ್ಕೂ ಯಾವ ರೀತಿಯ ಸಂಬಂಧವಿದೆಯೇ ಎನ್ನುವ ಮಾತುಗಳು ಕೇಳಿಬರುತ್ತಿವೆ.