ಕರ್ನಾಟಕ ಸರ್ಕಾರದ ಆದೇಶ: ರಾಜ್ಯೋತ್ಸವ ಆಚರಿಸದ ಸಿ.ಬಿ.ಎಸ್.ಸಿ/ಐ.ಸಿ.ಎಸ್.ಸಿ. ಶಾಲೆಗಳಿಗೆ ಭಾರಿ ದಂಡ!!

0
543

ನವೆಂಬರ್ 1 ರಂದು ನಾಡಿನಎಲ್ಲೆಡೆ ಅದ್ದೂರಿಯಾಗಿ ರಾಜ್ಯೋತ್ಸವ ಆಚರಣೆ ಮಾಡಲು ತಯಾರಿ ನಡೆದಿದೆ. ಈ ಹಿನ್ನೆಲೆಯಲ್ಲಿ ಸರ್ಕಾರಿ ಕಛೇರಿ, ಶಾಲಾ ಕಾಲೇಜುಗಳಲ್ಲಿ ಆಚರಣೆ ಮಾಡುವುದು ಕಡ್ಡಾಯವಾಗಿದೆ. ಆದರೆ ಕೆಲವೊಂದು ಸರ್ಕಾರಿ ಅನುದಾನಿತ ಶಾಲೆಗಳಲ್ಲಿ ಕನ್ನಡ ಮೇಲೆ ವ್ಯಾಮೋಹ ವಿಲ್ಲದೆ ನಾಡಹಬ್ಬವಾಗಿ ಆಚರಣೆ ಮಾಡುವ ಕನ್ನಡ ರಾಜ್ಯೋತ್ಸವನ್ನು ಬರಿ ಕಾಟಾಚಾರಕ್ಕಾಗಿ ಆಚರಣೆ ಮಾಡುತ್ತಿವೆ ಆದರಿಂದ ಸಿಬಿಎಸ್ಇ, ಹಾಗೂ ಐಸಿಎಸ್ಇ ಶಾಲೆಗಳಲ್ಲಿ ಕನ್ನಡ ರಾಜ್ಯೋತ್ಸವನ್ನು ಕಡ್ಡಾಯವಾಗಿ ಆಚರಣೆ ಮಾಡಬೇಕು ಎಂದು ರಾಜ್ಯ ಸರಕಾರ ಆದೇಶಿಸಿದೆ.


Also read: ಮೋದಿ ಸರ್ಕಾರ ಬಂದಮೇಲೆ ಕನ್ನಡಿಗರಿಗೆ ಅನ್ಯಾಯದ ಮೇಲೆ ಅನ್ಯಾಯ; ಐ.ಬಿ.ಪಿ.ಎಸ್.ನಲ್ಲಿ ಕರ್ನಾಟಕದಲ್ಲಿ ಕನ್ನಡಿಗರು 20% ಅನ್ಯರು 80%!!

ಕನ್ನಡ ಭಾಷೆಯ ಅಭಿವೃದಿಯನ್ನು ನೋಡಿದರೆ, ಖಾಸಗಿ ಶಾಲೆಗಳಲ್ಲಿ ಕನ್ನಡ ಮಾತನಾಡಿದರೆ ದಂಡ ಹಾಕುತ್ತಾರೆ ಇಂತಹ ಶಾಲೆಗಳು ಕರ್ನಾಟಕದಲ್ಲೇ ಇದ್ದು ಕನ್ನಡಿಗರಿಂದಲೇ ಲಕ್ಷಾಂತರ ಹಣವನ್ನು ಫೀಜ್ ರೂಪದಲ್ಲಿ ಸುಲಿಗೆ ಮಾಡುತ್ತಿವೆ ಇಂತಹ ಶಾಲೆಗಳಿಗೆ ಕನ್ನಡದ ಮೇಲೆ ಸ್ವಲ್ಪವು ಪ್ರೀತಿನೆ ಇಲ್ಲ ಇದರ ಬಗ್ಗೆ ಹಲವಾರು ಹೋರಾಟಗಳು ನೆಡೆದಿವೆ. ಈ ಹಿನ್ನೆಲೆಯಾಗಿ ಭಾಷಾ ಮಾಧ್ಯಮ ನೀತಿಗೆ ಸುಪ್ರೀಂಕೋರ್ಟ್‌ನಲ್ಲಿ ಸೋಲುಂಟಾದ ನಂತರ, ಖಾಸಗಿ ಅನುದಾನಿತ ಶಾಲೆಗಳು ಮಾತ್ರವಲ್ಲದೆ ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಶಾಲೆಗಳಲ್ಲೂ ಕನ್ನಡವನ್ನು ಒಂದು ಭಾಷೆಯನ್ನಾಗಿ ಕಲಿಸಲು ಕಾಯ್ದೆ ರೂಪಿಸಬೇಕು ಎಂಬ ಪ್ರಬಲ ಒತ್ತಾಯ ಕೇಳಿಬಂತು. ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಶಾಲೆಗಳ ಒಕ್ಕೂಟ ತೀವ್ರ ವಿರೋಧದ ಹೊರತಾಗಿಯೂ ಸರಕಾರ, ಕನ್ನಡದ ಭಾಷೆ ಬಗೆಗಿನ ತನ್ನ ಬದ್ಧತೆಯನ್ನು ಪ್ರದರ್ಶಿಸಲು ವಿಧೇಯಕವನ್ನು ಸಿದ್ಧಪಡಿಸಿತ್ತು. ವಿಧಾನಮಂಡಲದ ಉಭಯ ಸದನಗಳಲ್ಲಿ ಸಾಕಷ್ಟು ಚರ್ಚೆಯ ನಂತರ ಆ ವಿಧೇಯಕಕ್ಕೆ ಅನುಮೋದನೆ ನೀಡಲಾಗಿತ್ತು. ಆದರು ಈ ಖಾಸಗಿ ಶಾಲೆಯಲ್ಲಿ ಕನ್ನಡ ವಿಷಯವನ್ನು ತೆಗಳುತ್ತಿರುವುದು ನಡಿತ್ತಾನೆ ಇದೆ.


Also read: Nokia 6.1 ಪ್ಲಸ್’ 15.999 ರೂ. ಬೆಲೆಯುಳ್ಳ ಮೊಬೈಲ್; ಮೇಲೆ ಭರ್ಜರಿ ಆಫರ್; ಕೇವಲ ರೂ. 999 ಗೆ ಖರೀದಿಸಿ..
ಈ ಎಲ್ಲ ವಿಚಾರವನ್ನು ಗಮನದಲ್ಲಿಟ್ಟುಕೊಂಡು ಸರಕಾರ ಈ ಬಾರಿ ಎಲ್ಲಾ ಖಾಸಗಿ ಶಾಲೆಗಳು ಸೇರಿದಂತೆ ಸಿಬಿಎಸ್ಇ ಐಸಿಎಸ್ಇ ಶಾಲೆಗಳು ರಾಜ್ಯೋತ್ಸವ ಆಚರಣೆ ಮಾಡುವುದು ಕಡ್ಡಾಯ ಮಾಡಿದೆ.

ಶಾಲೆಗಳಲ್ಲಿ ರಾಜ್ಯೋತ್ಸವ ಆಚರಣೆ ಪ್ರಯೋಜ?
ರಾಜ್ಯೋತ್ಸವನ ಆಚರಣೆಯಿಂದ ಮಕ್ಕಳಲ್ಲಿ ಕನ್ನಡ ನಾಡಿನ ಅಭಿಮಾನ ಹೆಚ್ಚುತ್ತೆ, ಹಸಿ ಮನಸ್ಸಿನ ಮಕ್ಕಳಲ್ಲಿ ಕನ್ನಡ ಭಾಷೆ, ಇತಿಹಾಸವನ್ನು ತಿಳಿಸಿದರೆ ಕನ್ನಡ ಭಾಷೆ ಉಳಿಯಲು ಸಾದ್ಯ. ಒಂದು ವೇಳೆ ನಾಡಹಬ್ಬವನ್ನು ಆಚರಣೆ ಮಾಡದೆ ಬರಿ ಬೇರೆ ಭಾಷೆಗಳ ಬಗ್ಗೆ ವ್ಯಾಮೋಹ ತೋರಿಸಿದರೆ ಮುಂದಿನ ದಿನಗಳಲ್ಲಿ ಕನ್ನಡ ನಾಡಿಗೆ ಕುತ್ತು ಬರುವುದು ಗ್ಯಾರಂಟಿನೆ, ಆದಕಾರಣ ಮಕ್ಕಳು ಶಾಲೆಯಲ್ಲಿರುವಾಗ ಕನ್ನಡ ನಾಡಿನ ಸಾಧನೆಯನ್ನು ಕುರಿತು ತಿಳಿವಳಿಕೆ ಮತ್ತು ರಾಜ್ಯೋತ್ಸವದ ದಿನ ನಾಡಿಗಾಗಿ ಹೋರಾಡಿದ ಮಹನಿಯರ ನೆನೆಯಲ್ಲೂ ಮಕ್ಕಳಿಗೆ ವೇಷಭೂಷಣ ತೊಡಸಿ ಕಾರ್ಯಕ್ರಮಗಳನ್ನು ಮಾಡಿದರೆ ಮುಂದೆ ಈ ಆಚರಣೆ ಶಾಸ್ವತವಾಗಿ ಉಳಿಯಲ್ಲೂ ಸಾದ್ಯ.


Also read: ದೀಪಾವಳಿ ಹಬ್ಬಕ್ಕೆ ಟ್ರೈನ್-ನಲ್ಲಿ ಪ್ರಯಾಣ ಮಾಡುವವರಿಗೆ ಸಿಹಿ ಸುದ್ದಿ..

ಇನ್ನೊದು ವಿಶೇಷ ವೆಂದರೆ ರಾಜ್ಯೋತ್ಸವವನ್ನು ಕರ್ನಾಟಕದಲ್ಲಿರುವ ಬಹುತೇಕ ಹಿಂದೂಗಳು, ಮುಸ್ಲಿಮರು ಮತ್ತು ಕ್ರಿಶ್ಚಿಯನ್ನರು ಧರ್ಮಬೇಧವಿಲ್ಲದೆ ಆಚರಿಸುತ್ತಾರೆ,ಇದರಿಂದ ಮುಂದಿನ ದಿನಗಳಲ್ಲಿ ನಾಡಿನ ಪ್ರಜೆಗಳು ಜಾತಿ, ಧರ್ಮದ ಗೋಡೆಯಿಂದ ಹೊರಬಂದು ಕನ್ನಡ ನಾಡಿನ ಬಾವುಟವು ಅಜರಾಮರವಾಗಿರುತ್ತೆ, ಎಂಬುದು ಸರಕಾರದ ಮತ್ತು ಕನ್ನಡ ಪರ ಹೋರಾಟಗಾರರ ಅಭಿಪ್ರಾಯವಾಗಿದೆ.