ಗುಂಡಿಯಲ್ಲಿ ಬಿದ್ದ ಮರಿಯಾನೆಯನ್ನು ಹೆಗಲಮೇಲೆ ಹೊತ್ತುಕೊಂಡು ತಾಯಿಯ ಬಳಿಸೇರಿಸಿ ಮಾನವತ್ವವನ್ನು ಮೆರೆದ ಈ ವ್ಯಕ್ತಿ…

0
790

ಮನುಷ್ಯ ಮತ್ತು ಪ್ರಾಣಿಯ ಪ್ರೀತಿ ಎಂತಹುದು ಎಂದು ಈ ವ್ಯಕ್ತಿ ನೀರೂಪಿಸಿದ್ದಾನೆ, ಕಷ್ಟದಲ್ಲಿದ್ದ ಪ್ರಾಣಿಯನ್ನು ತನ್ನ ಸ್ವಂತ ಮಗುವಂತೆ ಕಾಪಾಡಿ ಹೆಗಲಮೇಲೆ ಹೊತ್ತುಕೊಂಡಿದ್ದಾನೆ, ಈತನ ಈ ಕಾರ್ಯಕ್ಕೆ ಎಲ್ಲೆಡೆ ಇಂದ ಅಭಿನಂದನೆಗಳ ಮಹಾಪೂರವೇ ಬರುತ್ತಿದೆ. ಏನು ಈ ಘಟನೆ ಅಂತ ತಿಳಿದುಕೊಳ್ಳುವ ಕುತೂಹಲವಿದ್ದರೆ ಮುಂದೆ ಓದಿ.

ಊಟಿಗೆ ಹತ್ತಿರವಿರುವ ಮೆಟ್ಟುಪಾಳ್ಯಂನಲ್ಲಿರುವ ವಾನಬದ್ರ ಕಾಳಿಯಮ್ಮ ದೇವಸ್ಥಾನದಿಂದ ತೆಕ್ಕಮ್ಮಪಟ್ಟಿಗೆ ವ್ಯಕ್ತಿಯೊಬ್ಬರು ತಮ್ಮ ಟ್ರಾಕ್ಟರ್-ನಲ್ಲಿ ಹೋಗುತ್ತಿದ್ದರು, ಆಗ ಕಾಡಾನೆಯ ಗುಂಪೊಂದು ಇವರನ್ನು ತಡೆದಿದೆ, ಆಗ ಇವರು ಹಾರ್ನ್ ಮಾಡಲು ಶುರು ಮಾಡಿದ್ದಾರೆ ಆದರೆ ಆನೆಗಳು ಸರಿಯುವ ಬದಲಾಗಿ ಇವರ ಮೇಲೆಯೇ ದಾಳಿ ಮಾಡಲು ಮುಂದಾಗಿವೆ, ಇದರಿಂದ ಗಾಬರಿಗೊಂಡ ಆತ ತಕ್ಷಣ ಅರಣ್ಯ ಸಿಬ್ಬಂದಿಗೆ ಕರೆ ಮಾಡಿದ್ದಾನೆ ಸ್ಥಳಕ್ಕಾಗಮಿಸಿದ ಅರಣ್ಯ ಸಿಬ್ಬಂದಿ ಪಟಾಕಿ ಹಚ್ಚಿ ಆನೆಗಳ ಗುಂಪನ್ನು ಕಾಡಿನೆಡೆಗೆ ಕಳಿಸಿದ್ದಾರೆ.

ಇದಾದ ಕೆಲ ಕ್ಷಣಗಳಲ್ಲಿಯೇ ಅವರಿಗೆ ಆನೆಮರಿಯೊಂದು ಕೂಗಿಕೊಳ್ಳುತ್ತಿದ್ದುದು ಕೇಳಿಸಿದೆ, ಆನೆಮರಿ ಹತ್ತಿರದಲ್ಲಿದ್ದ ಕಾಲುವೆಯಲ್ಲಿ ಕೆಸರಿನಲ್ಲಿ ಸಿಲುಕಿಕೊಂಡು ತಾಯಿಯಿಂದ ಬೇರ್ಪಟ್ಟಿತ್ತು ಮತ್ತು ಅದರ ತಾಯಿ ರಸ್ತೆಯ ಇನ್ನೊಂದು ಬದಿಯಲ್ಲಿ ತನ್ನ ಮರಿಗಾಗಿ ಕಾಯುತ್ತಿತ್ತು, ತಕ್ಷಣ ಅರಣ್ಯ ಸಿಬ್ಬಂದಿಯೊಬ್ಬರು ಅದನ್ನು ಮೇಲೆತ್ತಿದ್ದಾರೆ, ಆದರೆ ಕಾಲುವೆಯಲ್ಲಿ ಸಿಲುಕಿ ಗಾಯವಾದ ಅದಕ್ಕೆ ನಡೆಯಲು ಅಸಾಧ್ಯವಾಗಿತ್ತು ಇದನ್ನು ಗಮನಿಸಿ ಆ ಮರಿಯಾನೆಯನ್ನು ತನ್ನ ಹೆಗಲ ಮೇಲೆ ಹೊತ್ತುಕೊಂಡು ತಾಯಿಯ ಬಳಿ ಸೇರಿಸಿದ್ದಾರೆ.

ಆದರೆ ಆನೆಮರಿ ತನ್ನನ್ನು ಹೆಗಲ ಮೇಲೆ ಹೊತ್ತ ಸಿಬ್ಬಂದಿಯ ಬಳಿಯೇ ಹೋಗುತ್ತಿತ್ತು, ಅರಣ್ಯ ಸಿಬ್ಬಂದಿ ಎರಡು ದಿನಗಳ ಕಾಲ ಅದಕ್ಕೆ ಗ್ಲುಕೋಸ್ ಮತ್ತು ಎಳೆನೀರನ್ನು ನೀಡಿ ಅದು ಗುಣಮುಖವಾದ ನಂತರ ತಾಯಿಯ ಜೊತೆ ಬಿಟ್ಟಿದ್ದಾರೆ, ತಾಯಿ ಮತ್ತು ಮರಿಯಾನೆ ಈಗ ಕಾಡಿಗೆ ಸೇರಿವೆ.