ಕರ್ನಾಟಕದ ರೈತರ ಜೀವನ ಅರಳಿಸಿದ ಸಾವಯವ ಕೃಷಿ!!

0
1183

ಬರ ಈಗ ಹಾವೇರಿ ಜಿಲ್ಲೆಯ ಪಾಲಿಗೆ ಯಾರಿಗೂ ಬೇಡವಾದ ಅಭ್ಯಾಗತ. ಸತತವಾಗಿ ಮೂರು ವರ್ಷಗಳಿಂದ ದಾಂಗುಡಿ ಇಡುತ್ತಲೇ ಇದೆ. ರೈತಾಪಿ ಬದುಕನ್ನು ಛಿದ್ರವಿಚ್ಛಿದ್ರಗೊಳಿಸುತ್ತಿದೆ. ಆದರೂ ಅಲ್ಲೊಬ್ಬ ಇಲ್ಲೊಬ್ಬ ರೈತರು ಬರದ ಬವಣೆಯ ನಡುವೆಯೂ ಅಂಜದೆ, ಅಳುಕದೆ ಬಹು ಸಮರ್ಥವಾಗಿ ಬರದ ಮಾರಿಗೆ ಸವಾಲು ಹಾಕುತ್ತಿದ್ದಾರೆ. ಬ್ಯಾಡಗಿ ತಾಲೂಕಿನ ಅಂಗರಗಟ್ಟಿ ಗ್ರಾಮದ ರೈತ ಶೇಕಪ್ಪ ಇಂಥವರ ಸಾಲಿನಲ್ಲಿ ವಿಭಿನ್ನವಾಗಿ ಕಾಣಿಸಿಕೊಳ್ಳುತ್ತಾರೆ. ಹಳ್ಳಿಯಿಂದಲೇ ದಿಲ್ಲಿ ಎಂಬ ವಾಡಿಕೆ ಮಾತಿದೆ. ಅಂತೆಯೇ ಹಳ್ಳಿಗಳು ಸಮೃದ್ಧವಾಗಿದ್ದರೆ ಇಡಿ ದೇಶವೇ ಸುಖವಾಗಿರುತ್ತದೆ. ರೈತನು ಕೂಡಾ ಸೈನಿಕನಂತೆ ಹಗಲಿರುಳೆನ್ನದೆ ಭೂಮಿಯನ್ನು ಉತ್ತಿ ಬಿತ್ತಿ ಬೆಳೆದ ಕಾಳು ಕಡಿಗಳನ್ನು ಮಾರುಕಟ್ಟೆಗೆ ತರದೆ ಹೋದರೆ ಕೋಟ್ಯಂತರ ಜನ ಹಸಿವಿನಿಂದ ಬಳಲುತ್ತಾರೆ ಎಂಬುದರಲ್ಲಿ ಸಂದೇಹವೇ ಇಲ್ಲ. ವಿಶ್ವದಲ್ಲಿಯೇ ಮೆಣಸಿನಕಾಯಿಗೆ ಹೆಸರುವಾಸಿಯಾಗಿರುವ ಬ್ಯಾಡಗಿ ನಗರದ ಹತ್ತಿರದಲ್ಲಿರುವ ಅಂಗರಗಟ್ಟಿ ಗ್ರಾಮದ ರೈತ `ಶೇಕಪ್ಪ ಗುಡ್ಡಪ್ಪ ಹಾದಿಮನಿ’ ಮೆಣಸಿನಕಾಯಿ, ಬೆಂಡಿ, ಹಾಗಲ ಕೃಷಿಗೆ ಸಾವಯವ ಗೊಬ್ಬರ ಬಳಸಿ ಸೈ ಎನಿಸಿಕೊಂಡಿದ್ದಾರೆ.

Image result for organic farming india
ಇದ್ದ 5 ಎಕರೆ ಜಮೀನನ್ನು ವಿವಿಧ ಬಗೆಯ ಪ್ಲಾಟ್‍ಗೆ ವಿಭಾಗ ಮಾಡಿದ್ದಾರೆ. ಮೆಣಸಿನಕಾಯಿನೆಲವನ್ನು ಹದ ಮಾಡಿಕೊಂಡು ಸಮತಟ್ಟಾಗಿ ಮಾಡಿಕೊಳ್ಳುವುದು. ಕೊಟ್ಟಿಗೆ ಗೊಬ್ಬರ, ಬೊರಾನ್, ಜಿಂಕ್, ಟೈಕೊರಾನ್ ಸಮ ಪ್ರಮಾಣದಲ್ಲಿ ಬೆರಸಿ ಹೆಂಡೆ ಇಲ್ಲದಂತೆ ಬೆಡ್ ತಯಾರಿಸಿಕೊಳ್ಳುವುದು. 2ನೇ ಹಂತದಲ್ಲಿ 10 ಕೆ.ಜಿ ಸಾರಜನಕ, 10 ಕೆ.ಜಿ ರಂಜಕ, 10 ಕೆ.ಜಿ ಪೊಟ್ಯಾಶ್, ಸಾವಯವ ಗೊಬ್ಬರ ಮಿಶ್ರಣ ಮಾಡಿ ಹೊಲಕ್ಕೆ ಚೆಲ್ಲುವುದು. ನಂತರ ಬೆಡ್ ಮುಚ್ಚುವುದು(ಕೆಳಗೆ ಡ್ರಿಪ್ ಇರಿಗೇಶನ್ ಮಾಡುವುದು).ಸಂಪೂರ್ಣವಾಗಿ ಬೆಡ್ ನೆಂದ ನಂತರ 4-5 ದಿವಸಕ್ಕೆ ಸಸಿ ಹಚ್ಚುವುದು. ಹಚ್ಚಿದ ನಂತರ ಸೂಪರ್ ಕಾನ್ಪಿಡರ್, 2ನೇ ಸಲಕ್ಕೆ ಸ್ಪ್ರೇಯರ್ ಪ್ರಿಂಚ್ ಬ್ಲೇಟೆಸ್ಟ 8 ದಿನಕೊಮ್ಮೆ ಸಿಂಪಡಣೆ ಮಾಡಬೇಕು. ಸಸಿ ಬೆಳೆದ 75ನೇ ದಿನಕ್ಕೆ ಸತತವಾಗಿ 20 ದಿವಸ ಕ್ರಾಸ್ ಮಾಡಬೇಕು.

Image result for drip irrigation

60-70 ಕೆ.ಜಿಗೆ ತಲಾ 3300 ರೂ ಸಿಗುತ್ತದೆ ಎಂದು ಶೇಕಪ್ಪ ಹೇಳುತ್ತಾರೆ.ಗೊಬ್ಬರದ ವಿಧಾನ ಟೊಮೆಟೋ, ಎಲೆಕೋಸು, ಚಿಲ್ಲಿ, ಬದನೆ, ಹಾಗಲ, ಚೆಂಡು ಹೂ, ತರಕಾರಿ, ಕಟಾವ್ ನಂತರ ಅವುಗಳನ್ನು ಕಿತ್ತು ಒಂದು ದೊಡ್ಡದಾದ ತೊಟ್ಟಿಯಲ್ಲಿ ಒಗ್ಗೂಡಿಸಿ ಅದಕ್ಕೆ ಮಣ್ಣು ಹಾಕಿ ನೀರು ಬಿಟ್ಟು ಕೊಳೆಸಿ ಗೊಬ್ಬರ ಮಾಡುತ್ತಾರೆ. ಅದೇ ತೊಟ್ಟಿಯಲ್ಲಿ ತಿಪ್ಪೆ ಗೊಬ್ಬರವನ್ನು ಹಾಕಿ ಚೆನ್ನಾಗಿ ಕಲಸಿದ ನೀರನ್ನು ಪೈಪ್ ಮೂಲಕ ಹೊಲಕ್ಕೆ ಹಾಯಿಸುತ್ತಾರೆ. ಇದರಿಂದ ಸಸ್ಯಗಳು ಯಾವುದೆ ರೋಗಕ್ಕೆ ತುತ್ತಾಗುವುದಿಲ್ಲ. ಅದರ ಜೊತೆಗೆ ಕೊಕೊಪಿಲ್ ಗೊಬ್ಬರವನ್ನು ಒಂದು ಸಲಕ್ಕೆ 10ಟನ್ ಖರೀದಿಸಿ ಹೊಲಕ್ಕೆ ಚೆಲ್ಲುತ್ತಾರೆ. ಇದರಿಂದ ಭೂಮಿಯು ಜೀವಸತ್ವವನ್ನು ಕಳೆದುಕೊಳ್ಳದೆ ಉತ್ತಮ ಇಳುವರಿಯನ್ನು ಕೊಡುತ್ತದೆ.

Image result for ladies finger farm

ಬೆಂಡೆಕಾಯಿ 1 ಎಕರೆಯಲ್ಲಿ ನೆಲ ಹದಗೊಳಿಸಿ ಸಾಲಿನಿಂದ ಸಾಲಿಗೆ 3ಅಡಿ, ಬೀಜದಿಂದ ಬೀಜಕ್ಕೆ 1ಅಡಿ ಅಂತರ ಕಾಯ್ದು ಸಾಲು ಮಾಡಬೇಕು. 45 ದಿನ ನಂತರ ಕ್ರಾಸ್ ಮಾಡಬೇಕು, (45 ದಿನ ಹಾರ್ವೆಸ್ಟಿಂಗ್ ಮಾಡಬೇಕು) ಸಸಿಯು ದೊಡ್ಡವಾದ ಸಮಯದಲ್ಲಿ ಪ್ರತಿ ಸಸಿಯು ಎತ್ತರಕ್ಕೆ ಬೆಳೆಯಲು ಕೋಲು ನಿಲ್ಲಿಸಿ ತಂತಿಯಿಂದ ಬಳ್ಳಿ ಹಬ್ಬುವಂತೆ ಮಾಡಬೇಕು. ಸಂಪೂರ್ಣವಾಗಿ ಕ್ರಾಸ್ ಮಾಡಿ ಹಣ್ಣಾದ ಬೀಜಕ್ಕೆ ಪ್ರತಿ ಕೆ.ಜಿಗೆ 2000ನಂತೆ 60-70 ಕೆ.ಜಿ ಬರುತ್ತದೆ. ಆರೋಗ್ಯಕ್ಕೆ ಉತ್ತಮ ಪೌಷ್ಟಿಕಾಂಶಗಳು ರಾಗಿಯಲ್ಲಿ ದೊರಕುತ್ತವೆ ಎಂದು ಅರಿತ ಶೇಕಪ್ಪನವರು 1ಎಕರೆಯಲ್ಲಿ ರಾಗಿಯನ್ನು ಬೆಳೆದಿದ್ದಾರೆ. ಅವರ ಮನೆಯಲ್ಲಿ ಪ್ರತಿ ದಿನ ರಾಗಿ ಮುದ್ದೆ ವಿಶೇಷ ಭೋಜನ. ನೀರನ್ನು ಸಂಗ್ರಹ ಮಾಡಲು 40 ಸಾವಿರ ಲೀ. ತೊಟ್ಟಿ ಮಾಡಲು ಪ್ರಾರಂಭಿಸಿದ್ದಾರೆ. ಪ್ರತಿದಿನ ಅವರ ಹೊಲದಲ್ಲಿ 10-15 ಜನರಿಗೆ ಕೆಲಸ ಸಿಕ್ಕಂತಾಗಿದೆ ಎನ್ನಬಹುದು.