ಜಾಹೀರಾತು ಮೂಲಕ ಬಯಲಾಯ್ತು ಪ್ರತಿಷ್ಠಿತ ಒರಾಯನ್ ಮಾಲ್’ನ ಭೂಗಳ್ಳತನ!

0
3761

ನಾವು ಸಾಚಾ, ನಮ್ಮಷ್ಟು ಪ್ರಾಮಾಣಿಕರು ಯಾರೂ ಇಲ್ಲಾ ಅಂತ ಫೋಸ್ ಕೊಟ್ಟವರರ ಸಚಾತನವನ್ನು ಸುವರ್ಣ ನ್ಯೂಸ್ ಬಯಲು ಮಾಡಿದೆ. ನಾವು ಬಹಳ ನ್ಯಾಯಸಮ್ಮತರು ಎಂದು ತಮ್ಮನ್ನು ತಾವು ಪ್ರತಿಕೆಯಲ್ಲಿ ಜಾಹಿರಾತು ನೀಡುವ ಮೂಲಕ ಪ್ರದರ್ಶನ ಮಾಡಿಕೊಂಡಿದ್ದವರ ಅಸಲಿಯತ್ತಿನ ನಿಜ ದರ್ಶನ ಇಲ್ಲಿದೆ ನೋಡಿ.

ಕಳಚಿಬಿತ್ತು ಸಾಚಾತನ ಪ್ರದರ್ಶಿಸಿದವರ ಮುಖವಾಡ:

ಇದು ಜಾಹೀರಾತು ನೀಡಿ ಸಾಚಾತನ ಮೆರೆದಿದ್ದವರ ಅಸಲಿಯತ್ತು ಒರಾಯನ್ ಮಾಲ್ ನೋಡುತ್ತಿದ್ದಂತೆಯೇ ನಮಗೆ ಸಿನಿಮಾ, ಶಾಂಪಿಗ್, ಟೈಂ ಪಾಸ್ ಎಲ್ಲವೂ ನೆನಪಾಗುತ್ತದೆ. ಆದರೆ ಇವರು ಸಾವಿರಗಟ್ಟಲೆ ದುಡ್ಡು ಪೀಕಿಸಿ ಮೋಜು ನೀಡುವ ಹಿಂದೆ ಎಂಥಾ ಕಳ್ಳಾಟ ಇದೆ ಗೊತ್ತಾ. ಮನೆ ಮಠ ಕಳೆದುಕೊಂಡವರು ಒಂದು ಕಡೆಯಾದರೆ, ಭೂಮಿ ಕದ್ದು ಮೆರೆಯುತ್ತಿರುವ ಇವರ ಕಳ್ಳತನ ಇನ್ನೊಂದು ಕಡೆ..

ಹೌದು ಬೆಂಗ್ಳೂರಿನ ಪ್ರತಿಷ್ಠಿತ ಒರಾಯನ್ ಮಾಲ್ ಮಳೆಗಾಲುವೆ, ಹಳ್ಳ, ಕಾಲು ದಾರಿ ಮೇಲೆ ನಿರ್ಮಾಣವಾಗಿರುವುದು ಇದೀಗ ಖಚಿತಪಟ್ಟಿದೆ. ನಾವು ಸಾಚಾಗಳು ಅಂತ ಯಾವಾಗ ಒರಾಯನ್‌ ಮಾಲ್‌ ಮ್ಯಾನೇಜ್‌ಮೆಂಟ್‌ ಕಂಪನಿ ಪತ್ರಿಕೆಯಲ್ಲಿ ಸ್ಪಷ್ಟೀಕರಣ ಕೊಡ್ತೋ ಆಗಲೇ ಸಿಕ್ಕಿದ ದಾಖಲೆ ಇದು. ಭೂ ದಾಖಲೆಗಳ ಇಲಾಖೆಯ ಜಂಟಿ ನಿರ್ದೇಶಕರು ಸೆಪ್ಟಂಬರ್ 2ರಂದು ಭೂ ಮಾಪನ ಇಲಾಖೆಯ ಆಯುಕ್ತರಿಗೆ ಕೊಟ್ಟಿರೋ ವರದಿಯ ಎಕ್ಸ್‌ಕ್ಲೂಸೀವ್ ಪ್ರತಿ ಸುವರ್ಣ ನ್ಯೂಸ್‌ಗೆ ಲಭ್ಯವಾಗಿದೆ.

ಆಯುಕ್ತರಿಗೆ ಸಲ್ಲಿಕೆಯಾಗಿರುವ ಜಂಟಿ ನಿರ್ದೇಶಕರ ವರದಿಯಲ್ಲಿ ಏನಿತ್ತು?

ಎಲ್ಲೆಲ್ಲಿ ಒರಾಯನ್ ಮಾಲ್ ಒತ್ತುವರಿ?

ಕೇತಮಾರನಹಳ್ಳಿಯ ಸರ್ವೆ ನಂಬರ್ 30ರಲ್ಲಿ

ಒಟ್ಟು 1 ಎಕರೆ 5 ಗುಂಟೆ ಖರಾಬು ಪ್ರದೇಶ ಒತ್ತುವರಿ

ಸರ್ವೆ ನಂಬರ್ 31ರಲ್ಲಿ ಒಟ್ಟು 1 ಎಕರೆ 37 ಗುಂಟೆ ಒತ್ತುವರಿ

ಸರ್ವೆ ನಂಬರ್ 179ರಲ್ಲಿ ಒಟ್ಟು 11 ಗುಂಟೆ ಭೂಮಿ ಒತ್ತುವರಿ

ಇದು ಒರಾಯನ್ ಮಾಲ್ ಸತ್ಯವಾದರೆ ಇನ್ನು ಇದೇ ಕಟ್ಟಡದ ಪಕ್ಕದಲ್ಲೇ ಇರುವ ಬ್ರಿಗೇಡ್ ಗೇಟ್ ವೇ ಕಥೆ ಒರಾಯಾನ್ ಮಾಲ್‌ನ ಅಪ್ಪನಂತಿದೆ. ಅದು ಮಾಡಿರೋ ಒತ್ತುವರಿ ಕದ್ದಿರೋ ಭೂಮಿ ಕಥೆ ಹೀಗಿದೆ.

ಎಲ್ಲೆಲ್ಲಿ ಬ್ರಿಗೇಡ್ ಗೇಟ್ ವೇ ಒತ್ತುವರಿ?

ಕೇತಮಾರನಹಳ್ಳಿ ಗ್ರಾಮದ ಸರ್ವೆ ನಂಬರ್ 31ರಲ್ಲಿ

7 ಗುಂಟೆ ದಾರಿ, 13 ಗುಂಟೆ ಹಳ್ಳ, 18 ಗುಂಟೆ ಕಲ್ಲು ಬಂಡೆ,

39 ಗುಂಟೆಯಲ್ಲಿ ಅಳತೆಗೆ ಸಿಗದ ಕಲ್ಲುಗುಟ್ಟೆ ಇದೆ

ಒಟ್ಟು 1 ಎಕರೆ 37 ಗುಂಟೆ ಖರಾಬು ವಿಸ್ತೀರ್ಣ ಇದೆ

ಇವೆಲ್ಲವೂ ಎರಡೂ ಗ್ರಾಮಗಳಿಗೆ ಸೇರಿದ ಸರ್ಕಾರಿ ಆಸ್ತಿ

ಬ್ರಿಗೇಡ್ ಗೇಟ್ ವೇ ಇರುವುದು ಇದೇ ಸರ್ಕಾರಿ ಜಮೀನಿನಲ್ಲಿ

ಇದು ಒರಾಯನ್ ಮತ್ತು ಬ್ರಿಗೇಡ್ ಗೇಟ್ ವೇ ಇಡೀ ಗ್ರಾಮಗಳನ್ನೇ ನುಂಗಿ ನೀರು ಕುಡಿದು ಕಟ್ಟಿರೋ ಕಟ್ಟಡಗಳು. ರಿ ಸರ್ವೆ ಮಾಡಿದ ಭೂ ದಾಖಲೆಗಳ ಇಲಾಖೆಯ ಜಂಟಿ ನಿರ್ದೇಶಕರು ತನಿಖೆ ನಂತರ ಬಿಚ್ಚಿಟ್ಟ ಸತ್ಯ ಏನು ಗೊತ್ತಾ.?

ರಿ ಸರ್ವೆ ಮಾಡಿದ ಅಧಿಕಾರಿ ಕೊಟ್ಟ ವರದಿ?

ಕೇತಮಾರನಹಳ್ಳಿ, ಯಶವಂತಪುರ ಮೂಲ ಗ್ರಾಮಗಳು ಈ ಗ್ರಾಮಗಳ ನಕಾಶೆಯಲ್ಲಿ ಕಾಲುವೆಗಳಿವೆ ಆದರೆ ನಗರ ಮಾಪನ ದಾಖಲೆಯ ವೇಳೆ ಇವುಗಳನ್ನು ಕೈ ಬಿಡಲಾಗಿದೆ ಜಮೀನು ಸಂರಕ್ಷಿಸಲು ನಗರ ಮಾಪನ ಅಧಿಕಾರಿಗಳಿಗೆ ಸೂಚನೆ ನೀಡಬೇಕು.

ಒರಾಯನ್ ಮಾಲ್ ದೇಶದಲ್ಲಿಯೇ ಖ್ಯಾತಿ ಹೊಂದಿದೆ. ಒಂದು ವೇಳೆ, ಅದನ್ನು ಒಡೆದರೆ ಬೆಂಗಳೂರಿನ ಪ್ರತಿಷ್ಠೆಗೆ ಧಕ್ಕೆ ಬರುತ್ತೆ ಅಂತಾ ಪತ್ರಿಕೆಯಲ್ಲಿ ಜಾಹೀರಾತು ಹಾಕಿದ್ದವರು ಈಗ ನುಂಗಿರೋದು ಬರೋಬ್ಬರಿ 260 ಕೋಟಿ ಆಸ್ತಿಯನ್ನ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವ್ರು ಮಹಾಲ್ ಒಡೆಸುತ್ತಾರೋ ಇಲ್ಲ ಗೊತ್ತೆ ಇಲ್ಲದಂತೆ ಇರುತ್ತಾರೋ ನೋಡೋಣ.