ಏಟಿಎಂ ಬಳಕೆದಾರರಿಗೆ ಹೊಸ ನಿಯಮ ಜಾರಿ; 5 ಸಾವಿರ ರೂ. ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನು ವಿತ್’ಡ್ರಾ ಮಾಡಲು OTP ಕಡ್ಡಾಯ!!

0
480

ಬ್ಯಾಂಕಿಂಗ್ ಗ್ರಾಹಕರಿಗೆ ATM ವಹಿವಾಟಿನಲ್ಲಿ ದಿನಕ್ಕೊಂದು ಹೊಸ ನಿಯಮ ಜಾರಿಯಾಗುತ್ತಿದ್ದು, ಇನ್ಮುಂದೆ ಏಟಿಎಂ ನಲ್ಲಿ ಐದು ಸಾವಿರಕ್ಕಿಂತ ಹೆಚ್ಚು ಹಣ ಪಡೆದರೆ OTP ಬೇಕಾಗುತ್ತೆ. ಇದು ಗ್ರಾಹಕ ಸುರಕ್ಷತೆಯೇ ದೃಷ್ಟಿಯಿಂದ ಮಾಡಲಾಗಿದ್ದು. ಮತ್ತು ಬ್ಯಾಂಕಿಂಗ್ ವ್ಯವಸ್ಥೆಯ ಡಿಜಿಟಲೀಕರಣ ಹಾಗೂ ಆಧುನೀಕರಣದ ಪರಿಣಾಮ ಹೊಸ ಹೊಸ ನಿಯಮಾವಳಿಗಳು ಸಾಮಾನ್ಯವಾಗಿವೆ. ಸದ್ಯ ಈ ನಿಯಮವನ್ನು ಜಾರಿಗೆ ತಂದಿರುವ ಬ್ಯಾಂಕ್ ಎಂದರೆ ಕೆನರಾ ಬ್ಯಾಂಕ್, ಆಗಿದ್ದು. ಈ ನಿಯಮಾವಳಿಗಳು ಗ್ರಾಹಕರ ಸುರಕ್ಷತೆಗೆ ಅವಶ್ಯಕವೂ ಆಗಿದ್ದು, ಆಧುನೀಕರಣಕ್ಕೆ ತಕ್ಕಂತೆ ಈ ನಿಯಮಗಳು ಬ್ಯಾಂಕಿಂಗ್ ವ್ಯವಸ್ಥೆಯನ್ನು ಮತ್ತಷ್ಟು ಸುರಕ್ಷಿತಗೊಳಿಸುತ್ತಿವೆ.

Also read: ಏಟಿಎಂ ಪಾಸ್ವರ್ಡ್ ನೆನಪಿಗೆ ಬರ್ತಿಲ್ವಾ? ಚಿಂತೆಬೇಡ ಕೆಲವೇ ನಿಮಿಷಗಳಲ್ಲಿ ಹೊಸ ಪಾಸ್ವರ್ಡ್ ಸೆಟ್ ಮಾಡ್ಕೋಬಹುದು….

5 ಸಾವಿರ ಡ್ರಾ ಮಾಡಲು OTP?

ಹೌದು ಇಂತಹ ನಿಯಮವನ್ನು ಕೆನರಾ ಬ್ಯಾಂಕ್ ಜಾರಿ ಮಾಡಿದ್ದು, 5 ಸಾವಿರ ರೂ. ಮತ್ತು ಅದಕ್ಕಿಂತ ಹೆಚ್ಚಿನ ಹಣವನ್ನು ವಿತ್’ಡ್ರಾ ಮಾಡಲು OTP ಬೇಕಾಗುತ್ತೆ. ಹಣ ವಿತ್’ಡ್ರಾ ಮಾಡುವ ಗ್ರಾಹಕನ ಅಧಿಕೃತ ಮೊಬೈಲ್ ನಂಬರ್‌ಗೆ OTP ಬರುತ್ತದೆ. ಆ OTPಯನ್ನು ಎಟಿಎಂ ಯಂತ್ರದಲ್ಲಿ ನಮೂದಿಸಿದಾಗ ಮಾತ್ರ ಹಣ ವಿತ್’ಡ್ರಾ ಆಗುತ್ತದೆ. ದಿನಕ್ಕೆ 5 ಸಾವಿರ ರೂ. ವಿತ್’ಡ್ರಾ ಮಿತಿಯನ್ನು ಮತ್ತಷ್ಟು ಅಚ್ಚುಕಟ್ಟಾಗಿ ಜಾರಿಗೆ ತರುವ ಉದ್ದೇಶದಿಂದ ಈ ಹೊಸ ನಿಯಮ ಜಾರಿಗೆ ತರಲಾಗಿದೆ ಎನ್ನಲಾಗಿದೆ. ಗ್ರಾಹಕರ ಖಾತೆ ಮತ್ತು ಹಣದ ಸುರಕ್ಷತೆಗಾಗಿ ಈ ಹೊಸ ನಿಯಮ ಜಾರಿಗೆ ತಂದಿದ್ದು, ಹೊಸ ನಿಯಮ ಶೀಘ್ರದಲ್ಲೇ ಜಾರಿಯಾಗಲಿದೆ ಎಂದು ಬ್ಯಾಂಕ್ ಸ್ಪಷ್ಟಪಡಿಸಿದೆ. ಇದು ಯಶಸ್ವಿಯಾದರೆ ಮುಂದಿನ ದಿನಗಳಲ್ಲಿ ಎಲ್ಲ ಬ್ಯಾಂಕ್-ಗಳು ಜಾರಿ ತರುವ ಲಕ್ಷಣಗಳಿಗೆ.

Also read: ಇನ್ಮುಂದೆ ATM​ ಬಳಸದೇ ಸ್ಯ್ಕಾನ್ ಮಾಡಿ ಹಣ ಪಡೆಯಬಹುದು; ಇದರಿಂದ ಕಾರ್ಡ್​ ಬಳಕೆ ವೇಳೆ ನಡೆಯುತ್ತಿರುವ ವಂಚನೆಗಳಿಗೆ ಕಡಿವಾಣ ಹಾಕುತ್ತಾ?

ಎಟಿಎಂ ವಿತ್ ಡ್ರಾ ಗೆ ಸಂಬಂಧಿಸಿದಂತೆ ಮೊನ್ನೆ ತಾನೇ ಗ್ರಾಹಕರಿಗೆ RBI ಗುಡ್ ತಿಳಿಸಿದ್ದು, ಎಟಿಎಂ ವಹಿವಾಟಿನ ಕೆಲವು ನಿಯಮಗಳನ್ನು ಬದಲಾವಣೆ ಮಾಡುವಂತೆ ಬ್ಯಾಂಕುಗಳಿಗೆ ಆರ್‌ಬಿಐ ನಿರ್ದೇಶನ ನೀಡಿದೆ. ಆರ್ ಬಿಐ ಮೂಲಗಳ ಪ್ರಕಾರ ತಾಂತ್ರಿಕ ಮತ್ತು ಇತರೆ ನಿರ್ದಿಷ್ಟ ಕಾರಣಗಳಿಂದಾಗಿ ವಿಫಲವಾದ ಸ್ವಯಂಚಾಲಿತ ಟೆಲ್ಲರ್ ಯಂತ್ರ (ಎಟಿಎಂ) ವಹಿವಾಟುಗಳನ್ನು ‘ಐದು ಉಚಿತ ಮಾಸಿಕ ಎಟಿಎಂ ವಹಿವಾಟು’ಗಳಲ್ಲಿ ಸೇರಿಸದಂತೆ ಬ್ಯಾಂಕ್ ಗಳಿಗೆ ಸೂಚಿಸಿದೆ ಎನ್ನಲಾಗಿದೆ. ಈ ಕುರಿತಂತೆ ಹೇಳಿಕೆ ಬಿಡುಗಡೆ ಮಾಡಿರುವ ಆರ್ ಬಿಐ, ‘ತಾಂತ್ರಿಕ ಕಾರಣಗಳಿಂದಾಗಿ ವಿಫಲವಾದ ವಹಿವಾಟುಗಳು, ಎಟಿಎಂಗಳಲ್ಲಿ ಕರೆನ್ಸಿ(ಹಣ) ಲಭ್ಯವಿಲ್ಲದಿರುವುದು ಇತ್ಯಾದಿಗಳನ್ನು ಉಚಿತ ಎಟಿಎಂ ವಹಿವಾಟಿನ ಸಂಖ್ಯೆಯಲ್ಲಿ ಸೇರಿಸಲಾಗಿದೆ ಎಂಬುದು ನಮ್ಮ ಗಮನಕ್ಕೆ ಬಂದಿದೆ.

Also read: ಖದೀಮರು ಈಗ ಕೇವಲ ಒಂದೇ ಒಂದು ಎಸ್.ಎಂ.ಎಸ್. ಮೂಲಕ ಬ್ಯಾಂಕ್-ನಿಂದ ಹಣ ದೋಚುತ್ತಿದ್ದಾರೆ, ತಪ್ಪದೇ ಓದಿ!!

ಅದರಲ್ಲಿ ಹಾರ್ಡ್‌ವೇರ್, ಸಾಫ್ಟ್‌ವೇರ್, ಸಂವಹನ ಸಮಸ್ಯೆಗಳು, ಎಟಿಎಂನಲ್ಲಿ ಹಣ ಲಭ್ಯವಿಲ್ಲದಿರುವುದು ಮತ್ತು ಬ್ಯಾಂಕ್ ಅಥವಾ ಸೇವಾ ಪೂರೈಕೆದಾರರಿಗೆ ನೇರವಾಗಿ ಅಥವಾ ಸಂಪೂರ್ಣವಾಗಿ ಸೂಚಿಸಬಹುದಾದ ಇತರ ಸಮಸ್ಯೆಗಳು ಮತ್ತು ಅಮಾನ್ಯ ಪಿನ್ ಅಥವಾ ಅನುಮೋದನೆ ಗೊಳಿಸುವಿಕೆಯಂತಹ ತಾಂತ್ರಿಕ ಕಾರಣಗಳನ್ನು ವಿಫಲವಾದ ವಹಿವಾಟುಗಳು ಈ ಉಚಿತ ವಹಿವಾಟು ಪಟ್ಟಿಯಿಂದ ಕೈಬಿಡಲಾಗುತ್ತದೆ ಎಂದು ಹೇಳಿದೆ. ಅಂತೆಯೇ ಇಂತಹ ವಹಿವಾಟುಗಳನ್ನು ಗ್ರಾಹಕರಿಗೆ ಮಾನ್ಯ ಮಾಡಿದ ಎಟಿಎಂ ವಹಿವಾಟು ಎಂದು ಪರಿಗಣಿಸಲಾಗುವುದಿಲ್ಲ. ಈ ವಿಫಲ ವಹಿವಾಟುಗಳಿಗೆ ಯಾವುದೇ ಶುಲ್ಕ ವಿಧಿಸಲಾಗುವುದಿಲ್ಲ. ನಗದು ರಹಿತ ವಹಿವಾಟುಗಳು (ಬ್ಯಾಲೆನ್ಸ್ ವಿಚಾರಣೆ, ಚೆಕ್ ಬುಕ್ ವಿನಂತಿ, ತೆರಿಗೆಗಳ ಪಾವತಿ, ಹಣ ವರ್ಗಾವಣೆ), ಇದು ಉಚಿತ ಎಟಿಎಂ ವಹಿವಾಟಿನ ಭಾಗವಾಗುವುದಿಲ್ಲ ಎಂದು ಅಧಿಸೂಚನೆಯಲ್ಲಿ ಆರ್ ಬಿಐ ಉಲ್ಲೇಖಿಸಿದೆ.