ನೀವೂ ಪ್ರಧಾನ ಮಂತ್ರಿ ಜೀವನ ವಿಮಾ ಯೋಜನೆಯ ಹೊಂದಿದ್ದರೆ ಮೇ 31 ರ ಒಳಗೆ ನಿಮ್ಮ ಅಕೌಂಟ್-ನಲ್ಲಿ 342 ರೂ ಜಮಾ ಮಾಡಿ. ಇಲ್ಲದಿಂದರೆ 4 ಲಕ್ಷದ ಲಾಭ ನಷ್ಟವಾಗುತ್ತೆ..

0
774

ಪ್ರಧಾನಿ ನರೇಂದ್ರ ಮೋದಿಯವರ ಅಧಿಕಾರದಲ್ಲಿ ಬಡವರಿಗೆ ಮತ್ತು ವಯಸ್ಸಾದವರಿಗೆ ಅನುಕೂಲಕರವಾದ ಹಲವಾರು ಯೋಜನೆಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಅದರಲ್ಲಿ ಮುಖ್ಯವಾಗಿ ಜೀವ ವಿಮಾ ಯೋಜನೆಯನ್ನು ಸಮಾಜದಲ್ಲಿನ ಬಡವರು ಮತ್ತು ಕಡಿಮೆ ಆದಾಯ ಗಳಿಸುವ ವರ್ಗದ ಜನರ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಆರಂಭಿಸಲಾಗಿದೆ. ಇದರ ಲಾಭವನ್ನು ಪಡೆದುಕೊಳ್ಳಲು ಈ ಎರಡೂ ಯೋಜನೆಯಲ್ಲಿ ಖಾತೆ ಹೊಂದಿರುವವರು ಮೇ 31 ರೊಳಗೆ ತಮ್ಮ ಖಾತೆಯಲ್ಲಿ 342 ರೂಪಾಯಿಯನ್ನು ಹಾಕಿ, ಈಗಾಗಲೇ ಅದರಲ್ಲಿ ಅಷ್ಟೊಂದು ಹಣವಿದ್ದರೆ ಅದೇ ಹಣವನ್ನು ಕಟ್ ಮಾಡಿ ನಿಮ್ಮ ವಿಮೆ ಚಾಲ್ತಿ ಮಾಡುತ್ತದೆ. ಒಂದೇ ವೇಳೆ ಖಾತೆಯಲ್ಲಿ ಅಷ್ಟು ಹಣವಿಲ್ಲದೆ ಹೋದ್ರೆ ನಿಮ್ಮ ವಿಮೆ ರದ್ದಾಗಲಿದೆ.

Also read: ಅಂಚೆ ಇಲಾಖೆಯಲ್ಲಿ ಹಿರಿಯ ನಾಗರಿಕರಿಗೆ ಉಳಿತಾಯ ಯೋಜನೆಯ ಬಗ್ಗೆ ತಿಳಿದುಕೊಳ್ಳಬೇಕಾದ ತಿಳಿದುಕೊಳ್ಳುವ 10 ವಿಷಯಗಳು ಇಲ್ಲಿವೆ..

ಏನಿದು ವಿಮೆ?

ಹೌದು ಕೇಂದ್ರ ಸರ್ಕಾರದ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆ ಹಾಗೂ ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಯಲ್ಲಿ ಖಾತೆ ಹೊಂದಿದ್ದರೆ ಈ ಸುದ್ದಿಯನ್ನು ನೋಡಲೇ ಬೇಕು. ಈ ಎರಡೂ ಯೋಜನೆಯಲ್ಲಿ ಖಾತೆ ಹೊಂದಿರುವವರು ಮೇ 31 ರೊಳಗೆ ನಿಮ್ಮ ಖಾತೆಯಲ್ಲಿ 342 ರೂಪಾಯಿ ಇರುವಂತೆ ನೋಡಿಕೊಳ್ಳಿ. ಒಂದೇ ವೇಳೆ ಖಾತೆಯಲ್ಲಿ ಅಷ್ಟು ಹಣವಿಲ್ಲದೆ ಹೋದ್ರೆ ನಿಮ್ಮ ವಿಮೆ ರದ್ದಾಗಲಿದೆ. ಈ ಎರಡು ಯೋಜನೆಯ ಅಡಿಯಲ್ಲಿ 4 ಲಕ್ಷ ರೂಪಾಯಿ ವಿಮೆ ಸಿಗುತ್ತದೆ. ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆಯಲ್ಲಿ 55ನೇ ವರ್ಷದವರೆಗೆ ಲೈಫ್ ಕವರ್ ಸಿಗುತ್ತದೆ. ವಿಮೆದಾರನ ಸಾವಾದ್ರೆ ನಾಮಿನಿ ಮಾಡಿಸಿದ ವ್ಯಕ್ತಿಗೆ 2 ಲಕ್ಷ ರೂಪಾಯಿ ಸಿಗುತ್ತದೆ. ಪ್ರತಿ ವರ್ಷ ಈ ಯೋಜನೆ ನವೀಕರಣಗೊಳ್ಳುತ್ತದೆ. ಇದ್ರ ವಾರ್ಷಿಕ ಪ್ರೀಮಿಯಂ 330 ರೂಪಾಯಿ. 18ರಿಂದ 55 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಇದ್ರ ಲಾಭ ಪಡೆಯಬಹುದು.

ಯೋಜನೆಯ ವಿಶೇಷತೆ ಹಾಗು ಪ್ರಯೋಜನಗಳೇನು?

Also read: ಇನ್ಮೇಲಿಂದ ಜ್ಯೋತಿ ಸಂಜೀವಿನಿ ಯೋಜನೆಯಡಿ ಸರ್ಕಾರಿ ನೌಕರರು ಹಾಗು ಅವರ ಕುಟುಂಬದವರು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಸಂಪೂರ್ಣ ಉಚಿತ ಚಿಕಿತ್ಸೆ ಪಡೆಯಬಹುದು!!

ಪ್ರತಿ ವರ್ಷವು ಈ ಯೋಜನೆಗಳು ನವೀಕರಣಗೊಳ್ಳುತ್ತವೆ. ಇದರ ವಾರ್ಷಿಕ ಪ್ರೀಮಿಯಂ ರೂ. 330. 18 ರಿಂದ 55 ವರ್ಷ ವಯಸ್ಸಿನ ಯಾವುದೇ ವ್ಯಕ್ತಿ ಇದರ ಪ್ರಯೋಜನ ಪಡೆಯಬಹುದು. ಪ್ರಧಾನ ಮಂತ್ರಿ ಜೀವನ ವಿಮಾ ಯೋಜನೆಯ ಮೇ 31 ಕೊನೆದಿನ, ಒಟ್ಟು 342 ಪ್ರೀಮಿಯಂ ಮೊತ್ತ ಕಟ್ ಆಗಿ ವಿಮೆ ಚಾಲ್ತಿಯಾಗುತ್ತೆ, ಯೋಜನೆಯನ್ನು ಹೊಂದಿದ ವ್ಯಕ್ತಿ ಅಪಘಾತದಲ್ಲಿ ಸಾವನ್ನಪ್ಪಿದರೆ ಅಥವಾ ಸಂಪೂರ್ಣ ವಿಕಲಾಂಗನಾದರೆ ರೂ. 2 ಲಕ್ಷದವರೆಗೆ ವಿಮೆ ಸಿಗುತ್ತದೆ. ಈ ಎರಡೂ ಯೋಜನೆಗಳಿಗೆ ವಾರ್ಷಿಕ ಪ್ರಿಮಿಯಂ ತುಂಬಲು ಮೇ 31 ಕೊನೆ ದಿನವಾಗಿದೆ. ಪ್ರಧಾನ ಮಂತ್ರಿ ಸುರಕ್ಷಾ ಭೀಮಾ ಯೋಜನೆಗೆ ರೂ. 12 ಹಾಗೂ ಪ್ರಧಾನ ಮಂತ್ರಿ ಜೀವನ ಜ್ಯೋತಿ ಭೀಮಾ ಯೋಜನೆಗೆ ರೂ. 330 ಪ್ರೀಮಿಯಂ ತುಂಬಬೇಕು. ಎರಡೂ ಸೇರಿ ಒಟ್ಟು ರೂ. 342 ಮೊತ್ತ ಕಟ್ಟಬೇಕು.

ರಿಸ್ಕ್ ಕವರೇಜ್:

Also read: ಭಾರತೀಯ ಜೀವ ವಿಮಾ ನಿಗಮದ ಹೊಸ ಯೋಜನೆ; ತಿಂಗಳಿಗೆ 518 ರೂ. ಪಾವತಿಸಿದರೆ ಸಿಗಲಿವೆ ಹಲವಾರು ಲಾಭಗಳು..!

ಪ್ರಧಾನ್ ಮಂತ್ರಿ ಜೀವನ ಜ್ಯೋತಿ viಮಾ ಯೋಜನೆಯು ಒಂದು ವರ್ಷಗಳ ರಿಸ್ಕ್ ಕವರೇಜನ್ನು ಒದಗಿಸುತ್ತದೆ. ಹೆಚ್ಚು ಕಡಿಮೆ ಇದು ನವೀಕರಿಸುವ ಪಾಲಿಸಿಗಳಂತೆ ವಾರ್ಷಿಕವಾಗಿ ನವೀಕರಿಸಬಹುದಾಗಿದೆ. ಇದಲ್ಲದೆ, ಉಳಿತಾಯ ಬ್ಯಾಂಕ್ ಖಾತೆಗೆ ಲಿಂಕ್ ಮಾಡಿದ ಸ್ವಯಂ ಡೆಬಿಟ್ ಆಯ್ಕೆಯಿಂದ ಒಂದು ವರ್ಷಕ್ಕಿಂತ ಹೆಚ್ಚಿನ ಅವಧಿಯನ್ನು ಪಾಲಿಸಿದಾರನು ಆಯ್ಕೆ ಮಾಡಬಹುದು. ಮೇ 31 ರೊಳಗೆ ನಿಮ್ಮ ಖಾತೆಯ ಬ್ಯಾಲೆನ್ಸ್ ಮೊತ್ತ ಇಲ್ಲದೆ ಹೋದರೆ ವಿಮೆ ರದ್ದಾಗಲಿದೆ. ಬ್ಯಾಂಕ್ ಖಾತೆ ಸ್ಥಗಿತಗೊಳ್ಳುವ ಸ್ಥಿತಿಯಲ್ಲಿದ್ದರೆ ವಿಮೆ ರದ್ದಾಗಲಿದೆ. ಒಂದು ಬ್ಯಾಂಕ್ ಖಾತೆಯನ್ನು ಈ ಯೋಜನೆಗಳೊಂದಿಗೆ ಜೋಡಿಸಬಹುದು. ಪ್ರೀಮಿಯಂ ಮೊತ್ತ ಪಾವತಿಸದಿದ್ದರೆ ನಂತರ ಯೋಜನೆಗಳು ನವೀಕರಣಗೊಳ್ಳುವುದಿಲ್ಲ.