ವಿಕ್ರಮ್‌ ಲ್ಯಾಂಡರ್‌ನ ಅವಶೇಷಗಳನ್ನು ಮೊದಲು ಪತ್ತೆ ಹಚ್ಚಿದ್ದು ಇಸ್ರೊ; ಅಮೆರಿಕದ ಬಾಹ್ಯಾಕಾಶ ಘೋಷಣೆಗೆ ಇಸ್ರೋ ತಿರುಗೇಟು.!

0
113

ಭಾರತದ ಚಂದ್ರಯಾನ-2 ವಿಕ್ರಮ್‌ ಲ್ಯಾಂಡರ್‌ನ ಅವಶೇಷಗಳನ್ನು ನಾಸಾ ಪತ್ತೆ ಹಚ್ಚಿದೆ ಎನ್ನುವ ಸುದ್ದಿ ಭಾರಿ ವೈರಲ್ ಆಗಿತ್ತು, ಆದರೆ ಅಮೆರಿಕದ ಬಾಹ್ಯಾಕಾಶ ಸಂಸ್ಥೆಯ ಘೋಷಣೆಯನ್ನು ಇಸ್ರೋ ಮುಖ್ಯಸ್ಥ ಕೆ.ಶಿವನ್ ನಿರಾಕರಿಸಿದ್ದು, ನಾಸಾ ಪತ್ತೆ ಹಚ್ಚುವ ಮುನ್ನವೇ ಇಸ್ರೋ ತುಂಬಾ ಹಿಂದೆಯೇ ಪತ್ತೆಹಚ್ಚಿರುವುದಾಗಿ ತಿಳಿಸಿದ್ದಾರೆ. ನಾಸಾಗಿಂತ ಮೊದಲೇ ಚಂದ್ರಯಾನ-2ದ ಆರ್ಬಿಟರ್ ವಿಕ್ರಮ್ ಲ್ಯಾಂಡರ್ ಅನ್ನು ಪತ್ತೆ ಮಾಡಿತ್ತು, ಈ ಬಗ್ಗೆ ನಮ್ಮ ವೆಬ್ ಸೈಟ್ ನಲ್ಲಿ ಈಗಾಗಲೇ ಘೋಷಿಸಿದ್ದೇವೆ. ಎಂದು ಹೇಳಿದ್ದಾರೆ.

ಹೌದು ‘ಚಂದ್ರನ ಕಕ್ಷೆಯಲ್ಲಿ ಸುತ್ತುತ್ತಿರುವ ‘ದಿ ಲೂನಾರ್‌ ರಿಕಾನೈಸೆನ್ಸ್‌ ಆರ್ಬಿಟರ್‌'(ಎಲ್‌ಆರ್‌ಒ) ಉಪಗ್ರಹವು ಸೆರೆ ಹಿಡಿದಿರುವ ಚಿತ್ರದಲ್ಲಿ ವಿಕ್ರಮ್ ಲ್ಯಾಂಡರ್ ಚಂದ್ರನ ಅಂಗಳದಲ್ಲಿರುವುದು ಕಾಣಿಸುತ್ತಿದೆ’ ಎಂದು ನಾಸಾ ಮಂಗಳವಾರ ಪ್ರಕಟಿಸಿತ್ತು. ಆದರೆ ಚಂದ್ರನ ಮೇಲೆ ಇಳಿಯುವಾಗ ನಾಪತ್ತೆಯಾಗಿದ್ದ ವಿಕ್ರಮ್ ಲ್ಯಾಂಡರ್ ಬಿದ್ದ ಅವಶೇಷಗಳ ಸ್ಥಳವನ್ನು ಪತ್ತೆಹಚ್ಚಿರುವುದಾಗಿ ಹೇಳಿರುವ ಅಮೆರಿಕದ ಬಾಹ್ಯಾಕಾಶ ಸಂಸ್ಥೆಯ ಘೋಷಣೆಯನ್ನು ಇಸ್ರೋ ಮುಖ್ಯಸ್ಥ ಕೆ.ಶಿವನ್ ನಿರಾಕರಿಸಿ ಸೆಪ್ಟೆಂಬರ್‌ 7ರಂದು ದಕ್ಷಿಣ ಧ್ರುವದಲ್ಲಿ ವಿಕ್ರಮ್‌ ಲ್ಯಾಂಡರ್‌ ಇಳಿಸುವ ಪ್ರಕ್ರಿಯೆಯನ್ನು (ಇಸ್ರೊ)ನಡೆಸಿತ್ತು. ಆದರೆ ಚಂದ್ರನ ಮೇಲ್ಮೈಯಿಂದ ಕೇವಲ 2.1 ಕಿ.ಮೀ. ಎತ್ತರದಲ್ಲಿರಬೇಕಾದರೆ ವಿಕ್ರಮ್‌ ಲ್ಯಾಂಡರ್‌ ಜತೆಗಿನ ಸಂಪರ್ಕ ಕಡಿದುಕೊಂಡಿತ್ತು.

‘ಈ ಹಿಂದೆಯೇ ನಮ್ಮ ಆರ್ಬಿಟರ್‌ ವಿಕ್ರಮ್‌ ಲ್ಯಾಂಡರ್‌ ಅನ್ನು ಪತ್ತೆ ಹಚ್ಚಿತ್ತು. ಇದನ್ನು ನಮ್ಮ ವೆಬ್‌ಸೈಟ್‌ನಲ್ಲೂ ಪ್ರಕಟಿಸಿದ್ದೆವು. ಅದನ್ನು ನೀವು ನೋಡಬಹುದು’ ಎಂದು ಹೇಳಿದ್ದಾರೆ. ‘ವಿಕ್ರಮ್‌ ಲ್ಯಾಂಡರ್‌ ಅನ್ನು ಚಂದ್ರಯಾನ 2 ಆರ್ಬಿಟರ್‌ ಪತ್ತೆ ಹಚ್ಚಿದೆ. ಆದರೆ, ಯಾವುದೇ ಸಂವಹನ ಇಲ್ಲಿಯವರೆ ಸಾಧ್ಯವಾಗಿಲ್ಲ. ಲ್ಯಾಂಡರ್‌ ಜೊತೆ ಸಂಪರ್ಕ ಹೊಂದುವ ಎಲ್ಲಾ ಪ್ರಯತ್ನಗಳನ್ನು ಮಾಡುತ್ತೇವೆ’ ಎಂದು ಸೆಪ್ಟೆಂಬರ್ 10ರಂದು ಇಸ್ರೊ ವೆಬ್‌ಸೈನ್‌ಲ್ಲಿ ಪ್ರಕಟಿಸಿತ್ತು.

ನಾಸಾ ವಿಕ್ರಮ್ ಲ್ಯಾಂಡರ್ ನ ತ್ಯಾಜ್ಯ ಪತ್ತೆ ಹಚ್ಚಿದ್ದು, ವಿಶೇಷವೆಂದರೆ ನಾಸಾಗೆ ತಮಿಳುನಾಡಿನ ಎಂಜಿನಿಯರ್ ಸಹಾಯ ಮಾಡಿದ್ದಾರೆ. ಈ ಕುರಿತು ಸ್ವತಃ ನಾಸಾ ಸ್ಪಷ್ಟಪಡಿಸಿದ್ದು, ತಮಿಳುನಾಡಿನ 33 ವರ್ಷದ ಮೆಕ್ಯಾನಿಕಲ್ ಎಂಜಿನಿಯರ್ ಮತ್ತು ಕಂಪ್ಯೂಟರ್ ಪ್ರೋಗ್ರಾಮರ್ ಷಣ್ಮುಗ ಸುಬ್ರಹ್ಮಣಿಯನ್ ಅವರ ಸಹಾಯದಿಂದ ನಾವು ವಿಕ್ರಮ್ ಲ್ಯಾಂಡರ್ ಪತನವಾಗಿರುವುದನ್ನು ಪತ್ತೆ ಹಚ್ಚಲು ಸಾಧ್ಯವಾಯಿತು ಪತ್ತೆ ಹಚ್ಚಲು ಸಹಕರಿಸಿದ್ದಕ್ಕೆ ಷಣ್ಮುಗ ಅವರಿಗೆ ಇ-ಮೇಲ್ ಮೂಲಕ ನಾಸಾ ಧನ್ಯವಾದ ತಿಳಿಸಿತ್ತು. ಆದರೆ ನಾಸಾಕ್ಕಿಂತ ಮೊದಲು ಇಸ್ರೊ ಪತ್ತೆ ಮಾಡಿದ್ದು ಎಂದು ನಾಸಾ ಘೋಷಣೆಗೆ ಇಸ್ರೋ ತಿರುಗೇಟು ನೀಡಿದೆ.

Also read: ಚಂದ್ರಯಾನ 2 ರ ವಿಕ್ರಂ ಲ್ಯಾಂಡರ್ ಪತನವಾದ ಸ್ಥಳವನ್ನು ನಾಸಾ ಕಂಡು ಹಿಡಿದಿದೆ, ನಾಸಾಗೆ ಸಹಾಯ ಮಾಡಿದ್ದು ಭಾರತದ ಟೆಕ್ಕಿ ಅಂತ ಗೊತ್ತಾದ್ರೆ ಆಶ್ಚರ್ಯ ಪಡ್ತೀರ!!