ಭಾರತಕ್ಕೆ ಯುದ್ಧದ ಕಾರ್ಮೋಡದ ಕವಿದ ಪರಿಸ್ಥಿತಿ ಬಂದಿದೆ, ನಾಗರೀಕರು ಬಾರ್ಡರ್-ನಲ್ಲಿ ಸೇವೆ ಸಲ್ಲಿಸಲಾಗದಿದ್ರು ನಾವು ಹೇಳಿರುವಂತೆ ಮಾಡಿ ನಿಮ್ಮ ಕರ್ತವ್ಯ ಸಲ್ಲಿಸಿ!!!

0
611

ಭಾರತವೂ ತನ್ನ ವಾಯುಸೇನೆಯ ವಿಂಗ್ ಕಮಾಂಡರ್ ಅಭಿನಂದನ್ ರನ್ನು ಮರಳಿ ಕರೆತರುವ ಯತ್ನದಲ್ಲಿದೆ. ಈಗಾಗಲೇ ಭಾರತವು ಪಾಕಿಸ್ತಾನಕ್ಕೆ ಸಮನ್ಸ್ ಜಾರಿಗೊಳಿಸಿದ್ದು, ಅಭಿನಂದನ್ ರನ್ನು ಕೂಡಲೇ ಸುರಕ್ಷಿತವಾಗಿ ಬಿಡುಗಡೆ ಮಾಡುವಂತೆ ಒತ್ತಾಯಿಸಿದೆ. ಇದರೊಂದಿಗೆ ಜಿನಿವಾ ಒಪ್ಪಂದದಂತೆ ಬಂಧಿಸಲ್ಪಟ್ಟ ಅಭಿನಂದನ್ ಅವರಿಗೆ ಕಿರುಕುಳ ನೀಡದಂತೆಯೂ ತಾಕೀತು ಮಾಡಿದೆ. ಈ ಸಂಬಂಧ ಸಾಮಾಜಿಕ ಜಾಲತಾಣಗಳಲ್ಲಿ ಕೆಲವೊಂದು ದೇಶವಿರೋಧಿಗಳು ಇಲ್ಲ ಸಲ್ಲದ ಸಂದೇಶಗಳನ್ನು ಹರಿಬಿಡುತ್ತಿದ್ದಾರೆ. ಇದರಿಂದ ದೇಶದ ಗೌರವಕ್ಕೆ ದಕ್ಕೆ ಬರುವುದು ಎಂದು ಹಲವು ಎಚ್ಚರಿಕೆಯನ್ನು ನೀಡಲಾಗಿದೆ.

Also read: ಹೇಡಿ ಪಾಕ್ ಬಂಧಿಸಿರುವ ಅಭಿನಂದನ್ ಅವರನ್ನು ಭಾರತಕ್ಕೆ ಕಳುಹಿಸಿ ಎಂಬ ಕೂಗು ಪಾಕ್-ನಲ್ಲೆ ವ್ಯಾಪಕವಾಗಿ ಕೇಳಿ ಬರುತ್ತಿದೆ..

ಅಷ್ಟೇ ಅಲ್ಲದೆ ದೇಶದ್ರೋಹಿ ಪೋಸ್ಟ್ ಮತ್ತು ವೀಡಿಯೊಗಳನ್ನೂ ಹರಿಬಿಟ್ಟವರು ಜೈಲಿನಲ್ಲಿದ್ದಾರೆ. ಆದರು ಕೂಡ ಇನ್ನೂ ಕೆಲವೊಂದು ಬುದ್ಧಿಹಿನರು ದೇಶದ ಅನ್ನ ತಿಂದು ಪಾಕ್-ಗೆ ಜೈಕಾರ ಹಾಕುತ್ತಿದ್ದಾರೆ ಅದನ್ನು ಅಷ್ಟಕ್ಕೇ ಬಿಡದೆ whatsapp, ಫೇಸ್ಬುಕ್, ಹೇಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ. ಅಷ್ಟೇಅಲ್ಲದೆ ಭಾರತ ಹಾಗೂ ಪಾಕಿಸ್ತಾನದ ಮಧ್ಯೆ ಯುದ್ದದ ಪರಿಸ್ಥಿತಿ ನಿರ್ಮಾಣವಾಗಿರುವ ಬೆನ್ನೆಲೆಯಲ್ಲಿ ಪಾಕ್ ಪ್ರಚೋದಿತ ಸೈಬರ್ ಪ್ರಾಪಗ್ಯಾಂಡ್ ಕೂಡ ಅಂತರ್ಜಾಲದಲ್ಲಿ ವಿಪರೀತವಾಗಿ ಹೆಚ್ಚಿದೆ. ಈ ಹಿನ್ನೆಲೆಯಲ್ಲಿ ಯುದ್ದದ ಸ್ಥಿತಿಯಲ್ಲಿ ಉತ್ತಮ ಪ್ರಜೆಯಾಗಿ ಹೇಗೆ ಜವಾಬ್ದಾರಿಯುತವಾಗಿ ವರ್ತಿಸಬೇಕು ಎಂಬ ಬಗ್ಗೆ ನಿರ್ದೇಶನವೊಂದನ್ನು ಬಿಡುಗಡೆ ಮಾಡಿದೆ.

ನಿರ್ದೇಶನದಲ್ಲಿ ಏನಿದೆ?

Also read: ಭಾರತ-ಪಾಕ್ ಯುದ್ಧ ಫಿಕ್ಸ್..! ಜಮ್ಮುಕಾಶ್ಮೀರ ಸೇರಿದಂತೆ ಎಲ್ಲೆಡೆ ಹೈ ಅಲರ್ಟ್ ಘೋಷಣೆ; ರಜೆಯ ಮೇಲೆ ತೆರಳಿದ ಸೈನಿಕರಿಗೆ ತಕ್ಷಣವೇ ಕರ್ತವ್ಯಕ್ಕೆ ಹಾಜರಾಗಲು ಸೂಚನೆ..

ಮುಂದಿನ ಆರು ತಿಂಗಳ ಕಾಲ ಭಾರತಕ್ಕೆ ಶತ್ರುಗಳ ಪ್ರತೀಕಾರದ ಅಪಾಯವಿದೆ. ಈ ಸಮಯದಲ್ಲಿ ರಾಷ್ಟ್ರೀಯ ತುರ್ತು ಪರಿಸ್ಥಿತಿಯಲ್ಲಿ ತಿಳಿಸಿದ ಹಾಗೆ ದೇಶದ ಪ್ರಜೆಗಳು ಜವಾಬ್ದಾರಿಯುತ ಪ್ರಜೆಯಾಗಿ ವರ್ತಿಸುವ ಕೆಲವು ವಿಧಾನಗಳು ಇಲ್ಲಿವೆ. ಅದರಂತೆ ಪಾಕಿಸ್ತಾನಕ್ಕೆ ಭಾರತದ ಸೈಬರ್ ಮೇಲೆ ಕಣ್ಣು ಬಿದಿದ್ದು ನಕಲಿ ಭಾರತೀಯ ಅಕೌಂಟ್ ಸೃಷ್ಟಿಮಾಡಿ ಪಾಕ್ ಪರ ಪೋಸ್ಟ್ ನೀಡುತ್ತಿದ್ದಾರೆ. ಅದನ್ನೇ ಕೆಲವು ಭಾರತೀಯರು ಶೇರ್ ಅಥವಾ ಪೋಸ್ಟ್ ಮಾಡಿ ತೊಂದರೆಗೆ ಒಳಗಾಗುತ್ತಿದ್ದಾರೆ.

1. ದೇಶದಲ್ಲಿ ನಡೆಯತ್ತಿರುವ ವಿಷಯಗಳನ್ನು ಎಲ್ಲರಿಗೂ ತಿಳಿಸಲು ಹೋಗಿ ಫೇಸ್ಬುಕ್-ಗಳಲ್ಲಿ ಪೋಸ್ಟ್ ಮಾಡುವ ಸಂದೇಶಗಳು ಶತ್ರುಗಳಿಗೆ ಸೋರಿಕೆ ಯಾಗುತ್ತಿದ್ದು ಮೊದಲು ಸೈನಿಕರ ಕುರಿತು ಯಾವುದೇ ವೀಡಿಯೊ ಪೋಸ್ಟ್ ಅಥವಾ ಶೇರ್ ಮಾಡಬೇಡಿ.

2. ನಿಮ್ಮ ಫೇಸ್ಬುಕ್, Whatsapp & Instagram ಸಂದೇಶಗಳನ್ನು ನಿಮಿಷಗಳಲ್ಲಿ ನಮ್ಮ ಶತ್ರುಗಳಿಗೂ ತಲುಪುತ್ತಿವೆ. ಆದಕಾರಣ ನಿಮ್ಮ ಸ್ನೇಹಿತರು ಮತ್ತು ಸಂಬಂಧಿಕರು
ಸೈನ್ಯೆಯಲ್ಲಿ ಮತ್ತು ರಕ್ಷಣಾ ಕಾರ್ಯದಲ್ಲಿ ತೊಡಗಿದರೆ ಅವರು ಕಳುಹಿಸಿದ ಮಾಹಿತಿಯನ್ನು ಬೇರೆಯರಿಗೆ ತಿಳಿಯದ ಹಾಗೆ ಡಿಲಿಟ್ ಮಾಡಿ.

3. ಸೈನೆಯ ಸಮವಸ್ತ್ರ ರೆಜಿಮೆಂಟ್ ಗಳು ಹೆಮ್ಮೆ ಕೊಡುವ ವಿಷಯಗಳು. ಹಾಗಂತ ಸಂವಸ್ತ್ರದಲ್ಲಿರುವ ಚಿತ್ರಗಳನ್ನು ವಾಟ್ಸ್ಅಪ್ ಸ್ಟೇಟಸ್ ಮಾಡಿಕೊಳ್ಳುವುದು ಅಥವಾ ಫೇಸ್ಬುಕ್ ಶೇರ್ ಮಾಡುವುದು ನಿಲ್ಲಿಸಿ.

4. ಮುಖ್ಯವಾಗಿ ಸೈನಿಕರು ನೀವೂ ಕರ್ತ್ಯವ್ಯೆಕ್ಕೆ ನಿಯೋಜನೆಗೊಂಡಿರುವ ಸ್ಥಳ, ಪಾಲ್ಗೊಳ್ಳುತ್ತಿರುವ ಕಾರ್ಯಾಚರಣೆ ಮಾಹಿತಿಯನ್ನು ಎಂದಿಗೂ ಹಂಚಿಕೊಲ್ಲಬೇಡಿ. ಅದೇ ರೀತಿ ಕೈಯಲ್ಲಿ ಗನ್ ಹಿಡಿದಿರುವ ಚಿತ್ರಗಳನ್ನು ಪೋಸ್ಟ್ ಮಾಡುವುದು ನಿಲ್ಲಿಸಿ.

Also read: 300 ರಕ್ಕೂ ಹೆಚ್ಚು ಉಗ್ರರನ್ನು ನಾಶ ಮಾಡಲು ಏರ್ ಸರ್ಜಿಕಲ್ ಸ್ಟ್ರೈಕ್ ದಾಳಿಯ ಪ್ಲಾನ್ ಹೀಗಿತ್ತು ಗೊತ್ತಾ?

5.ವಿಮಾನ ನಿಲ್ದಾಣಗಳು, ರೈಲು ನಿಲ್ದಾಣಗಳು, ಸರ್ಕಾರಿ ಸೌಲಭ್ಯಗಳು ಇತ್ಯಾದಿಗಳಲ್ಲಿ ಚಿತ್ರಗಳನ್ನು ತೆಗೆದುಕೊಳ್ಳಬೇಡಿ ಅಥವಾ ಅವುಗಳನ್ನು ಪ್ರಸಾರ ಮಾಡಬೇಡಿ.

6. ದೇಶದ ಸೈನೆಕ್ಕೆ ಸಂಬಂಧಿಸಿದ ಯಾವುದೇ ಸೂಕ್ಷ್ಮ ವೀಡಿಯೊಗಳನ್ನು ಫಾರ್ವರ್ಡ್ ಮಾಡಬೇಡಿ. ಯಾರಾದರೂ ಅದನ್ನು ಗುಂಪಿನಲ್ಲಿ ಕಳುಹಿಸಿದರೆ, ಕಳುಹಿಸಿದವರಿಗೆ ಎಚ್ಚರಿಕೆ ನೀಡಿ. ಮತ್ತು ಗುಂಪಿನಿಂದ ತಕ್ಷಣ ಅವರನ್ನು ತೆಗೆದುಹಾಕಿ.

7. ಇದು ರಾಷ್ಟ್ರೀಯ ತುರ್ತುಸ್ಥಿತಿಯ ಸಮಯ ಎಂದು ಕುಟುಂಬದ ಸದ್ಯಸರಿಗೆ, ಆಪ್ತರಿಗೆ, ಸ್ನೇಹಿತರಿಗೆ, ಇತರರಿಗೆ ಸೂಕ್ಷ್ಮವಾಗಿ ತಿಳಿಹಿಸಿ.

8. ಪರಿಚಯ ವಿಲ್ಲದವರ ಫ್ರೆಂಡ್ ರಿಕ್ವೆಸ್ಟ್ ಸ್ವಿಕರಿಸಬೇಡಿ.

9. ವೈಯಕ್ತಿಕ ಲ್ಯಾಪ್ ಟಾಪ್, ಡೆಸ್ಕ್ ಟಾಪ್, ಅಥವಾ ಸ್ಮಾರ್ಟ್ ಫೋನ್ ಗಳಲ್ಲಿ ಎಂದಿಗೂ ಸಶಸ್ತ್ರಪಡೆಗಳಿಗೆ ಸಂಬಂಧಿಸಿದ ರಹಸ್ಯ ಮಾಹಿತಿಯನ್ನು ಸೇವ್ ಮಾಡಲೇಬೇಡಿ.

10. ನೀವು ಪ್ರಯಾಣ ಮಾಡುವ ರೈಲ್ವೆ ಸ್ಟೇಷನ್ ಮತ್ತು ವಿಮಾನ ನಿಲ್ದಾಣಗಳಿಗೆ ಮೊದಲಿನಕ್ಕಿಂತ ಮುಂಚೆಯೇ ತಲುಪಿ ಸುರಕ್ಷತೆಯ ದಳದವರಿಗೆ ಸಹಾಯಮಾಡಿ. ಅಲ್ಲಿ CRPF ಭದ್ರತಾ ತಂಡಗಳಿಗೆ ತಲೆನೋವು ಎನಿಸಬೇಡಿ. ಬದಲಾಗಿ ಅವರನ್ನು ಜೈ ಹಿಂದ್ಂದೊಂದಿಗೆ ಸ್ವಾಗತಿಸಿ ಅಥವಾ ಧನ್ಯವಾದಗಳನ್ನು ತಿಳಿಸಿ.