ಮಹಿಳೆಯ ಹೊಟ್ಟೆಯಲ್ಲಿ 1.5 ಕೆಜಿ ಚಿನ್ನಾಭರಣ, 90 ನಾಣ್ಯಗಳು ಪತ್ತೆ; ಶಸ್ತ್ರಚಿಕಿತ್ಸೆ ನಂತರ ಬಯಲಾಯಿತು! ಸತ್ಯ..

0
496

ತಿಂದ ಆಹಾರವೇ ಹೆಚ್ಚು ಕಡಿಮೆಯಾದರೂ ಹೊಟ್ಟೆಯಲ್ಲಿ ತಳಮಳ ಶುರುವಾಗುತ್ತೆ, ಒಂದು ವೇಳೆ ಆಹಾರದಲ್ಲಿ ಚಿಕ್ಕ ವಸ್ತು ಸೇರಿ ಹೊಟ್ಟೆಯಲ್ಲಿ ಹೋದರೆ ಇಲ್ಲದ ಯಾತನೆ ಕೇಳುತ್ತೆ, ಇಷ್ಟೊಂದು ಸೂಕ್ಷ್ಮ ವಿರುವ ಕರಳುಗಳಲ್ಲಿ ಸ್ವಲ್ಪವೂ ವ್ಯತ್ಯಾಸವಾದರೆ ಏನೋ ತಿಂದಿದ್ದೇವೆ ಎನ್ನುವ ಅನುಮಾನ ಮೂಡುತ್ತೆ, ಇಂತಹದರಲ್ಲಿ ಮಹಿಳೆಯೊಬ್ಬಳ ಹೊಟ್ಟೆಯಲ್ಲಿ 1.5 ಕೆಜಿ ಚಿನ್ನ 90 ನಾಣ್ಯಗಳು ಪತ್ತೆಯಾಗಿ ಇಡಿ ಜಗ್ಗತಿಗೆ ಆಶ್ಚರ್ಯ ಮೂಡಿಸಿದೆ. 5 ರೂ. ಮತ್ತು 10 ರೂ.ಗಳ 90 ನಾಣ್ಯಗಳು, ಸರಗಳು, ಮೂಗುನತ್ತುಗಳು, ಕಿವಿಯೊಲೆಗಳು, ಬಳೆಗಳು, ಸಣ್ಣ ಕೈಗಡಿಯಾರಗಳನ್ನು ಹೊರ ತೆಗೆಯಲಾಗಿದೆ.

ಹೌದು ಪಶ್ಚಿಮ ಬಂಗಾಳದ ಬಿರ್ಭಮ್ ಜಿಲ್ಲೆಯಲ್ಲಿ ಅಪರೂಪದ ಘಟನೆ ನಡೆದಿದ್ದು, ಮಹಿಳೆಯ ಹೊಟ್ಟೆಯಿಂದ 1.5 ಕೆ.ಜಿ. ತೂಕದ ಆಭರಣ ಹಾಗೂ 90 ನಾಣ್ಯಗಳನ್ನು ಸರ್ಕಾರಿ ಆಸ್ಪತ್ರೆ ವೈದ್ಯರು ಹೊರ ತೆಗೆದಿದ್ದಾರೆ. 5 ಹಾಗೂ 10 ರೂ.ಗಳ ನಾಣ್ಯಗಳು, ಸರ, ಕಿವಿಯ ಓಲೆಗಳು, ಬಳೆ, ಕಡಗ, ಬ್ರಾಸ್ಲೆಟ್ಸ್ ಹಾಗೂ ವಾಚ್ ಸೇರಿದಂತೆ ವಿವಿಧ ಆಭರಣಗಳನ್ನು 26 ವರ್ಷದ ಮಹಿಳೆಯ ಹೊಟ್ಟೆಯಿಂದ ಹೊರ ತೆಗೆಯಲಾಗಿದೆ ಪತ್ತೆಯಾದ ಆಭರಗಳು ಬಹುತೇಕ ತಾಮ್ರ, ಮತ್ತು ಹಿತ್ತಾಳೆಯ ಲೋಹಗಳು. ಕೆಲವು ಮಾತ್ರ ಚಿನ್ನದ ಒಡವೆಗಳು ಎಂದು ರಾಂಪುರಾತ್‍ನ ಸರ್ಕಾರಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಆಸ್ಪತ್ರೆಯ ಸರ್ಜರಿ ವಿಭಾಗದ ಮುಖ್ಯಸ್ಥ ಸಿದ್ಧಾರ್ಥ್ ಬಿಸ್ವಾಸ್ ತಿಳಿಸಿದ್ದಾರೆ.

ಈ ಕುರಿತು ಮಹಿಳೆಯ ತಾಯಿ ಮಾತನಾಡಿ ನಮ್ಮ ಮನೆಯಲ್ಲಿ ಬಹು ದಿನಗಳಿಂದ ಆಭರಣಗಳು ಕಾಣೆಯಾಗುತ್ತಿದ್ದನ್ನು ಗಮನಿಸಿದ್ದೆ. ಇವಳೇ ತೆಗೆದುಕೊಂಡು ಹೋಗಿರಬಹುದು ಎಂದು ಅನುಮಾನವಿತ್ತು, ಈ ಬಗ್ಗೆ ಪ್ರಶ್ನಿಸಿದಾಗಲೆಲ್ಲಾ ಜೋರಾಗಿ ಅಳುತ್ತಿದ್ದಳು. ಹೀಗಾಗಿ ನಾವು ಹೆಚ್ಚು ಪ್ರಶ್ನೆ ಮಾಡುತ್ತಿರಲಿಲ್ಲ. ಅದರಲ್ಲಿ ಸ್ವಲ್ಪ ಮಾನಸಿಕವಾಗಿ ಅಸ್ವಸ್ಥೆಯಾಗಿದ್ದು, ಕೆಲವು ದಿನಗಳಿಂದ ಊಟವಾದ ನಂತರ ತಟ್ಟೆಯನ್ನು ಜೋರಾಗಿ ಎಸೆಯುತ್ತಿದ್ದಾಳೆ. ಕಳೆದ ಕೆಲವು ದಿನಗಳಿಂದ ಊಟ ಮಾಡಿದ ನಂತರ ಆಕೆ ವಾಂತಿ ಮಾಡುತ್ತಿದ್ದಳು. ಇತ್ತೀಚೆಗೆ ಆಕೆಯ ಆರೋಗ್ಯ ಸರಿ ಇರಲಿಲ್ಲ ಅದಕ್ಕಾಗಿ ”ಕಳೆದ ಎರಡು ತಿಂಗಳಿನಿಂದ ಆಕೆ ಆಸ್ವಸ್ಥಳಾಗಿದ್ದಳು. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಆಕೆಯನ್ನು ನಾನಾ ಖಾಸಗಿ ಆಸ್ಪತ್ರೆಗಳಿಗೆ ಕರೆದುಕೊಂಡು ಹೋದೆವು.

ಇವಳಿಗೆ ಸಹೋದರನ ಅಂಗಡಿಯಿಂದ 5 ರೂ. ಮತ್ತು 10 ರೂ.ಗಳ ನಾಣ್ಯಗಳು ದೊರೆಯುತ್ತಿದ್ದವು. ನಾವು ಆಕೆಯ ಮೇಲೆ ನಿಗಾ ಇಟ್ಟಿದ್ದೇವು. ಆದರೂ ಕಣ್ಣು ತಪ್ಪಿಸಿ ಆಭರಣಗಳು ಮತ್ತು ನಾಣ್ಯಗಳನ್ನು ನುಂಗಿದ್ಧಾಳೆ. ಎರಡು ತಿಂಗಳಿನಿಂದ ಆಕೆಯ ಆರೋಗ್ಯ ಹದಗೆಟ್ಟಿತ್ತು. ನಾವು ಅನೇಕ ಖಾಸಗಿ ಆಸ್ಪತ್ರೆಗಳಲ್ಲಿ ತಪಾಸಣೆಗೆ ಒಳಪಡಿಸಿದೆವು. ಅಲ್ಲಿ ನೀಡಿದ ಔಷಧೋಪಚಾರ ಮತ್ತು ಚಿಕಿತ್ಸೆಗಳು ಫಲಕಾರಿಯಾಗಲಿಲ್ಲ. ನಂತರ ಸರ್ಕಾರಿ ಆಸ್ಪತ್ರೆಗೆ ಆಕೆಯನ್ನು ಸೇರಿಸಿದಾಗ ಆಕೆಯ ಹೊಟ್ಟೆಯಲ್ಲಿ ಇಷ್ಟೊಂದು ವಸ್ತುಗಳು ಇರುವುದು ಕಂಡುಬಂದಿತು. ಶಸ್ತ್ರಚಿಕಿತ್ಸೆ ನಂತರ ನನ್ನ ಮಗಳು ನಿರಾಳಳಾಗಿದ್ದಾಳೆ ಎಂದು ತಾಯಿ ವಿವರಿಸಿದ್ದಾರೆ.