ಕರುಣಾನಿಧಿ ಯವರ ಅನಾರೋಗ್ಯದ ಸುದ್ದಿ ಕೇಳೇ 25ಕ್ಕೂ ಹೆಚ್ಚು ಮಂದಿ ಸಾವನಪ್ಪಿದ್ದಾರೆ!!

0
525

ಡಿಎಂಕೆ ಪಕ್ಷದ ನಾಯಕ ಕರುಣಾನಿಧಿ, ಆರೋಗ್ಯದಲ್ಲಿ ಏರುಪೇರಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಎಂಬ ಈ ಆಘಾತಕಾರಿ ಸುದ್ದಿ ಕೇಳಿದ. ತಮಿಳುನಾಡಿನ 25 ಕ್ಕೂ ಹೆಚ್ಹು ಮಂದಿ ದುರ್ಮರಣ ಹೊಂದಿದ್ದಾರೆ. ಇವರೆಲ್ಲ DMK ಪಕ್ಷದ ಕಾರ್ಯಕರ್ತರು ಎಂದು ತಿಳಿದುಬಂದ್ದಿದೆ.

ಹೌದು: ತಮಿಳುನಾಡಿನಲ್ಲಿ ಆದೇನೋ ಗೊತ್ತಿಲ್ಲ ತಮ್ಮ ರಾಜ್ಯದ ಮುಖ್ಯಮಂತ್ರಿಗಳು ಇಲ್ಲ ಪಕ್ಷದ ನಾಯಕರಿಗೆ ಆರೋಗ್ಯದಲ್ಲಿ ಸ್ವಲ್ಪ ಏರುಪೇರು ಆದ್ರೂ ಇಡೀ ರಾಜ್ಯದ ಜನರೆ ಅಸ್ಪತ್ರೆಯ ಮುಂದೆ ಬಿಡಾರಹೊಡಿತ್ತಾರೆ. ತಮ್ಮಗೆ ತಾವೇ ಹೃದಯಾಘಾತ ದಿಂದ ಸಾವನ್ನಪ್ಪುತ್ತಾರೆ. ಕಳೆದ ಬಾರಿ ಜಯಲಲಿತ ಅವರ ಮರಣದಲ್ಲೂ ನೂರಾರು ಜನ ವಿಧಿವಶರಾಗಿದ್ದು ಕಂಡುಬಂದಿತ್ತು, ಮತ್ತೆ ಅಂತಹದೇ ವಿಷಯ ಸುದ್ದಿಯಲ್ಲಿದೆ.
ಚೆನ್ನೈನ ಆಸ್ಪತ್ರೆಯ ತುರ್ತು ನಿಗಾ ಘಟಕದಲ್ಲಿ ಸಾವುಬದುಕಿನ ಮದ್ಯ ಹೋರಾಟ ನಡೆಸುತ್ತಿರುವ ಡಿಎಂಕೆ ಮುಖ್ಯಸ್ಥ, ಮಾಜಿ ತಮಿಳುನಾಡು ಮುಖ್ಯಮಂತ್ರಿ ಕರುಣಾನಿಧಿ ಅವರನ್ನು ನೋಡಲು ದೇಶದ VVIP, VIP ಗಳ ದಂಡೇ ಬರುತ್ತಿದೆ. ಹಾಗೆಯೇ ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡು, ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್, ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ತಮಿಳುನಾಡು ಸಿಎಂ ಪಳನಿಸ್ವಾಮಿ, ಕೇರಳ ಸಿಎಂ ಪಿಣರಾಯಿ ವಿಜಯನ್, ರಜನಿಕಾಂತ್, ಕಮಲಹಾಸನ್, ಕರ್ನಾಟಕದ ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡ ಬಂದು ಆರೋಗ್ಯ ವಿಚಾರಿಸಿದ್ದಾರೆ.

Also read: ಜಯಲಲಿತಾಗೆ ಆಪ್ತರೇ ವಿಷ ಕೊಟ್ರಂತೆ ? ಬೆಚ್ಚಿ ಬೀಳಿಸಿತ್ತು ಲಂಡನ್ ವೈದ್ಯರ ವರದಿ !

ಮತ್ತು ತುರ್ತು ನಿಗಾ ಘಟಕಕ್ಕೆ ಸಾಮಾನ್ಯವಾಗಿ ಯಾರನ್ನೂ ಬಿಡುವ ಪದ್ದತಿಯಿಲ್ಲ, ಆದರೂ ಕರುಣಾನಿಧಿಯವರ ಮಗ ಸ್ಟಾಲಿನ್ VVIP ಗಳು ಆಸ್ಪತ್ರೆಗೆ ಬಂದಾಗ, ಖುದ್ದು ಕರೆದುಕೊಂಡು ಹೋಗುತ್ತಿದ್ದಾರೆ, ಅವರ ಜೊತೆಗೆ ಫೋಟೊಗ್ರಾಫರ್ ಕೂಡ ಇದ್ದಾನೆ, ಈ ದೃಶ್ಯಗಳು ಸಾಮಾಜಿಕ ತಾಣದಲ್ಲಿ ಹರಿದಾಡುತ್ತಿವೆ ಬೇರೆ. ವಯೋಸಹಜ ಕಾಯಿಲೆಯಿಂದ ಬಳಲುತ್ತಿರುವ ಕರುಣಾನಿಧಿಗೆ ಇದರಿಂದ ಸೋಂಕು ತಗಲುವುದಿಲ್ಲವೇ?
ಇದ್ದಕೆ ಆಸ್ಪತ್ರೆಯ ಆಡಳಿತ ಮಂಡಳಿ ಹೇಗೆ ಹೋಗಲು ಅನುವು ಮಾಡಿಕೊಟ್ಟಿತು? ಕರುಣಾನಿಧಿಯವರ ಇಂತಾ ಸ್ಥಿತಿಯಲ್ಲೂ ರಾಜಕೀಯ ಅಡಗಿದೆ ಎನ್ನುವ ಸುದ್ದಿ ಹರಿದಾಡುತ್ತಿದೆ. ಇನ್ನೊಂದು ವಿಚಾರ ಅಂದ್ರೆ ಎಐಎಡಿಎಂಕೆ ಅಧಿನಾಯಕಿ ಜಯಲಲಿತಾ ತೀವ್ರ ಅನಾರೋಗ್ಯಕ್ಕೀಡಾಗಿ ಅಪೊಲೋ ಆಸ್ಪತ್ರೆಗೆ ದಾಖಲಾಗಿದ್ದರು. 74 ದಿನ ಆಸ್ಪತೆಯಲ್ಲಿದ್ದ ಜಯಲಲಿತಾ ಕೊನೆಗೆ ಕೊನೆಯುಸಿರೆಳೆದರು.

Also read: ಜಯಲಲಿತಾ ನಿಧನದಿಂದ ಕರ್ನಾಟಕ ರಾಜ್ಯಕ್ಕೆ ೧೦೦ ಕೋಟಿ ನಷ್ಟ!!

ಜಯಲಲಿತಾ ಆಸ್ಪತ್ರೆಗೆ ದಾಖಲಾದಾಗ ಯಾವ ಸ್ಥಿತಿಯಲ್ಲಿದ್ದರು ಮತ್ತು ಆಸ್ಪತ್ರೆಯ ತುರ್ತು ಘಟಕದಲ್ಲಿ ಹೇಗೆ ಇದ್ದರು ಎನ್ನುವುದು ಕೆಲವರಿಗೆ ಬಿಟ್ಟರೆ ಇಡೀ ದೇಶದ ಜನತೆಗೆ ಗೊತ್ತಿರಲಿಲ್ಲ ಆದರಿಂದ ಜಯಲಲಿತಾಗೆ ಎಐಎಡಿಎಂಕೆ ಮಾಡಿದಂತೆ ನಾವು ನಮ್ಮ ನಾಯಕನಿಗೆ ಮಾಡುವುದಿಲ್ಲ ಮತ್ತು ಅವರ ಆರೋಗ್ಯ ವಿಚಾರದಲ್ಲಿ ಯಾವುದೇ ಮುಚ್ಚುಮೆರೆಯಿಲ್ಲ ಎನ್ನುವ ಸಂದೇಶವನ್ನು ತಮಿಳುನಾಡಿನ ಜನತೆಗೆ ತಲುಪಿಸಲು ಡಿಎಂಕೆಯ ಮಾಸ್ಟರ್ ಪ್ಲ್ಯಾನ್ ಮಾಡುತ್ತಿದೆ. ಎಂಬ ಮಾತುಗಳು ಕೇಳಿಬರುತ್ತಿವೆ.