ಪೆಸಿಫಿಕ್ ಮಹಾಸಾಗರದಡಿಯಲ್ಲಿ ಹೊಸ ಭೂಖಂಡ ಪತ್ತೆ

0
935

ಮೆಲ್ಬೋರ್ನ್: ಝೀಲೆಂಡಿಯ ಎಂಬ ಹೆಸರನ್ನು ಈ ಖಂಡ 5 ಮಿಲಿಯನ್ ಚದರ ಕಿ.ಮೀ. ವಿಸ್ತೀರ್ಣ ಹೊಂದಿದ್ದು ನೆರೆಯ ಆಸ್ಟ್ರೇಲಿಯಾದ ಮೂರನೇ ಎರಡಂಶದಷ್ಟಿದೆ ಎಂದು ಜಿಯೋಲಾಜಿಕಲ್ ಸೊಸೈಟಿ ಆಫ್ ಅಮೇರಿಕಾದ ಜರ್ನಲ್ ನಲ್ಲಿ ಪ್ರಕಟವಾದಿರುವ ಲೇಖನವೊಂದರಲ್ಲಿ ವಿಜ್ಞಾನಿಗಳು ತಿಳಿಸಿದ್ದಾರೆ. ಸದ್ಯ ಇರುವ ಏಳು ಖಂಡಗಳಂತೆ ಪ್ರತೇಕ ಖಂಡಗಳಂತೆ ಪ್ರತ್ಯೇಕ ಖಂಡವೆಂದು ಗುರುತಿಸಿಕೊಳ್ಳಲು ಎಲ್ಲಾ ಅರ್ಹತೆಗಳೂ ಇದಕ್ಕೆ ಇವೆ ಎಂದು ಹೇಳಲಾಗಿದೆ.

ಭೂಖಂಡದ ಸರಿತ, ಭೂಬಾಗ ತೆಳುವಾಗುವುದು ಹಾಗೂ ಬೇರ್ಪಡುವ ಪ್ರಕ್ರಿಯೆಯಿಂದಾಗಿ ಸಾಗರದಲ್ಲಿ ಹುದುಗಿರುವ ಭೂಭಾಗದ ಕುರಿತು ಆಸ್ಟ್ರೇಲಿಯಾದ ಸಿಡ್ನಿ ವಿವಿ, ನ್ಯೂಜಿಲ್ಯಾಂಡ್ ನ ವಿಕ್ಟೋರಿಯಾದ ವಿವಿಯ ಸಂಶೋಧಕರು ಅಧ್ಯಯನ ನಡೆಸಿದ್ದಾರೆ.

ಈ ಹೊಸ ಭೂಖಂಡದ ಶೇ.94ರಷ್ಟು ಭಾಗ ನೀರಿನೊಳಗಿದ್ದು ಮೂರು ಪ್ರಮುಖ ಭೂಮಿಗಳನ್ನು ಹೊಂದಿದೆ. ಅವೆಂದರೆ ನ್ಯೂಜಿಲ್ಯಾಂಡಿನ ಉತ್ತರ ಹಾಗೂ ದಕ್ಷಿಣ ದ್ವೀಪಗಳು ಹಾಗೂ ಉತ್ತರದಲ್ಲಿರುವ ನ್ಯೂ ಸೆಲೆಡೋನಿಯ. ಖಂಡವೊಂದು ನೀರಿನಲ್ಲಿ ಮುಳುಗಿದ್ದರೂ ಅದು ಪ್ರತ್ಯೇಕವಾಗಿರದೇ ಇರುವುದು ಅದರ ಬಗ್ಗೆ ಅಧ್ಯಯಾನ ನಡೆಸಲು ಇನ್ನಷ್ಟು ಸಹಕಾರಿ ಎನ್ನುತ್ತಾರೆ.