ಪಡುವಾರಳ್ಳಿಯ ಅಕಾಡಕ್ಕೆ ರಂಗ ಪ್ರತಿಭೆ ರುದ್ರೇಶನ ಆಗಮನ

0
706
ಜಗ್ಗು ಸಿರ್ಸಿ ಸಿನಿಮಾ ಪಡುವಾರಳ್ಳಿ ಪಾಂಡವರು 1989 ಚಿತ್ರದ ಚಿತ್ರೀಕರಣಕ್ಕೆ ಕ್ಷಣ ಗಣನೆ.
ಈ ಹಿಂದೆ ಅನುಪಮ್ ಕೇರ್ ಫೀಲ್ಮ್ ಇನ್ಸ್ ಟ್ಯೂಟ್ ನ ಪ್ರತಿಭೆ ವಿನ್ನು ವೆಂಕಟೇಶ್ ಹಾಗೂ ನೀನಾಸಮ್ ಹಾಗೂ ಸಂಸ್ಕ್ರತಿ ಕಾಲೇಜ್ ವಿಸ್ಯೂವಲ್ ಆಂಡ ಫರ್ಪೋಮಿಂಗ್ ಆರ್ಟ್ಸನ ಪ್ರತಿಭೆ ಮಹಾಸತಿಯವರು ಈ ಸಿನೆಮಾದಲ್ಲಿ ಅಭಿನಯಿಸುತ್ತಿರುವುದು   ನಿಮಗೆ ಗೊತ್ತಿರುವ  ವಿಚಾರ .
ಈಗ ಇನ್ನೋಬ್ಬ ಪ್ರತಿಭೆ, ರಂಗ ಭೂಮಿಯ ನಂಟಿದ್ದು ಈತ ವಿಜಯ್ ಫಿಲ್ಮ ಇನ್ಸಟ್ಯೂಟ್ ಹಾಗು ನೀನಾಸಮ್ ರಂಗ ಶಿಬಿರ ಮತ್ತು ಸಂಸ್ಕ್ರತಿ ಕಾಲೇಜ್ ವಿಸ್ಯೂವಲ್ ಆಂಡ ಫರ್ಫೋಮಿಂಗ್ ಆರ್ಟ್ಸನಲ್ಲಿ ತರಬೇತಿ ಪಡೆದು ಹಲವಾರು ನಾಟಕದಲ್ಲಿ ಅಭಿನಯಿಸುವುದರ ಮೂಲಕ ತಮ್ಮ ಚಾಪನ್ನು ಮೂಡಿಸಿಕೊಂಡಿದ್ದಾರೆ.
ಇವರ ಅಭಿನಯವನ್ನು ಜಗ್ಗು ಸಿರ್ಸಿಯವರು ಮೆಚ್ಚಿ ಪಡುವಾರಳ್ಳಿಯ ಪಂಚ ಪಾಂಡವರಲ್ಲಿ ಒಬ್ಬ ನಾಯಕ ನಟನಾಗಿ ಪರಿಚಯಿಸುತ್ತಿದ್ದಾರೆ.
ಕೋಟಿಗೂಂದು ಲವ್ ಸ್ಟೋರಿ ಚಿತ್ರದ ನಂತರ 2ವರ್ಷಗಳ ಕಾಲ ಸಮಯ ತೆಗೆದುಕೊಂಡು ಪಡುವಾರಳ್ಳಿ ಪಾಂಡವರು 1989 ಚಿತ್ರವನ್ನು ಕ್ಯೆಗೆತ್ತಿಕೊಂಡಿದ್ದಾರೆ.
ಹೀಗಾಗಿ ಹೊಸ ಪ್ರತಿಭೆಗಳ ವೇದಿಕೆಯಲ್ಲಿ ಅಭಿನಯಿಸುವ ಕಲಾವಿಧರ ಆಯ್ಕೆಯಲ್ಲಿ ಅವರ ಅಭಿನಯ ಚಾತುರ್ಯವನ್ನು ನೋಡಿ ಆಯ್ಕೆ ಮಾಡುತ್ತಿದ್ದಾರೆ.
ಅವರಲ್ಲಿ ರುದ್ರೇಶ್ ಅವರು ಕೂಡ ಈ ಪಾತ್ರವನ್ನು ಮಾಡುವ ಸಾಮರ್ಥ ಹೊಂದಿದ್ದು ಈ ಸೀನೆಮಾದ ಮೂಲಕ ನಮ್ಮಕನ್ನಡ ಚಿತ್ರರಂಕ್ಕೆ ಈ ಕಲಾವಿಧನನ್ನು ಪರಿಚಯಿಸುತ್ತಿದ್ದಾರೆ.
ಪಡುವಾರಳ್ಳಿ ಪಾಂಡವರು 1989 ಚಿತ್ರದ ಟೀಸರ್ ಲಾಂಚ್ ಮುಗಿದಿದ್ದು ಈ ಚಿತ್ರದ ಮೂಲಕ ಕನ್ನಡದ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡುತ್ತಿರುವ ರುದ್ರೇಶ್ ಅವರಿಗೆ ಶುಭವಾಗಲಿ ಎಂಬುವುದು ನಮ್ಮ ಆಶಯ.