ಕನ್ನಡ ಚಿತ್ರರಂಗವನ್ನೇ ದೂಳು ಎಬ್ಬಿಸಲು ಬರಲಿರುವ ಮತ್ತೊಂದು ಸಿನಿಮಾನೆ ‘ಪೈಲ್ವಾನ್’; ಈ ಸಿನಿಮಾದ ಬಗ್ಗೆ ತಿಳಿಯಲೆಬೇಕಾದ ವಿಷಯ ಏನ್ ಗೊತ್ತಾ??

0
736

ಒಂದು ಕಾಲವಿತ್ತು ಕನ್ನಡ ಸಿನಿಮಾ ಅಂದ್ರೆ ಏನೋ ಒಂದು ಕತೆ ಬಿಡು ಅಂತ ಜರಿಯುವುದು ಆದರೆ ಆ ಮಾತು ದೂರವಾಗಿದೆ ಏಕೆಂದರೆ ಇತ್ತೀಚಿಗೆ ಬರುತ್ತಿರುವ ಕನ್ನಡ ಸಿನಿಮಾಗಳ ಖದರ್ ನೋಡಿ ಇಡಿ ದೇಶವೇ ಬೆರಗಾಗುತ್ತಿದೆ. ಅಷ್ಟೊಂದು ಸದ್ದು ಮಾಡುತ್ತಿರುವ ಕನ್ನಡ ಸಿನಿಮಾಗಳು ಮತ್ತಷ್ಟು ಕುತೂಹಲ ಮೂಡಿಸುತ್ತಿವೆ. ಅದೇ ಸಾಲಿನಲ್ಲಿರುವ ಪೈಲ್ವಾನ್ ಸಿನಿಮಾ ಇಡಿ ದೇಶವಲ್ಲದೆ ವಿದೆಶದಲ್ಲಿವು ತನ್ನ ಛಾಪು ಮೂಡಿಸುತ್ತಿದೆ ಎನ್ನುವ ಮಾತುಗಳು ಕೇಳಿಬರುತ್ತಿವೆ.

ಅದರಲ್ಲಿ ಅಭಿನವ ಚಕ್ರವರ್ತಿ ಕಿಚ್ಚ ಸುದೀಪ್ ಅವರ ನಟನೆ ಅಂದ್ರೆ ರಾತ್ರಿಯಲ್ಲೇ ಎದ್ದು ಕೂರುತ್ತಾರೆ ಅಭಿಮಾನಿಗಳು ಅಷ್ಟೊಂದು ಸದ್ದು ಮಾಡಿ ಮನ ಗೆದ್ದಿರುವ ವಿಲನ್ ಸುದೀಪ್ ಮತ್ತೊಂದು ಸಿನಿಮಾನೇ ಪೈಲ್ವಾನ್. ಈ ಚಿತ್ರ ಕೆಜಿಎಫ್ ಸಿನಿಮಾದ ನಂತರ ಬಹಳಷ್ಟು ನಿರೀಕ್ಷೆ ಹುಟ್ಟು ಹಾಕಿದೆ. ಕೆಜಿಎಫ್ ಸಿನಿಮಾದ ರೀತಿಯಲ್ಲಿ ಪೈಲ್ವಾನ್ ಸಿನಿಮಾ ಕೂಡ ವಿಶ್ವಮಟ್ಟದಲ್ಲಿ ಸದ್ದು ಮಾಡಲಿದೆ ಎಂಬ ವಂದತಿಗಳು ಗಾಂಧಿನಗರದಲ್ಲಿ ಕೇಳಿ ಬಂದಿದೆ.

ಕಿಚ್ಚನ ಹೊಸ ಲುಕ್-ಗೆ ಫುಲ್ ಪಿದಾ:

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಟಿಸುತ್ತಿರುವ ‘ಪೈಲ್ವಾನ್’ ಚಿತ್ರ ಸಾಕಷ್ಟು ಕುತೂಹಲ ಕೆರಳಿಸಿದೆ. ಈಗಾಗಲೇ ಪೈಲ್ವಾನ್ ಟೀಸರ್, ಹಾಗೂ ಪೋಸ್ಟರ್ ಗಳಿಂದಲೇ ಸದ್ದು ಮಾಡುತ್ತಿದ್ದು, ಬಿಗ್ ಬಾಸ್ ಲುಕ್ ಗೆ ಎಲ್ಲರೂ ಕೂಡ ಫಿದಾ ಆಗಿದ್ದಾರೆ. ಕಿಚ್ಚನ ಹೊಸ ಅವತಾರ ನೋಡಿ ಅಭಿಮಾನಿಗಳು ಸಿನಿಮಾ ನೋಡುವ ಆತುರದಲ್ಲಿದ್ದಾರೆ.
ಹೌದು ‘ಪೈಲ್ವಾನ್​’ ಟೀಸರ್​ ನೋಡಿದರೆ ಒಮ್ಮೆ ‘ಸುಲ್ತಾನ್​’ ಟೀಸರ್​ ನೆನಪಾಗದೇ ಇರದು. ಅದಕ್ಕೆ ಕಾರಣವೂ ಇದೆ. ‘ಪೈಲ್ವಾನ್​’ ಹಾಗೂ ‘ಸುಲ್ತಾನ್​’ ಎರಡರಲ್ಲೂ ಟೀಸರ್​ನಲ್ಲಿ ಹೆಸರು ತೋರಿಸುವಾಗ ಬಳಕೆ ಮಾಡಿಕೊಂಡ ಬ್ಯಾಗ್ರೌಂಡ್​ ಬಣ್ಣ ಒಂದೇ ತೆರನಾದದ್ದು. ಸುದೀಪ್​ ಸ್ಟೈಲ್​, ಮತ್ತು ಎದುರಾಳಿಯನ್ನು ನೆಲಕ್ಕೆ ಬೀಳಿಸುವ ಶೈಲಿ, ಕುಸ್ತಿ ನಡೆವ ಅಖಾಡ ಹೀಗೆ ಎಲ್ಲವೂ ‘ಸುಲ್ತಾನ್​’ ಟೀಸರ್​​ಅನ್ನು ಒಮ್ಮೆ ನೆನಪಿಸುತ್ತದೆ ಎಂದು ಅನೇಕರು ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿದ್ದಾರೆ. ಹಾಗಾಗಿ ಸಲ್ಮಾನ್​ ಖಾನ್​ ಚಿತ್ರವನ್ನು ಸ್ಫೂರ್ತಿಯಾಗಿಟ್ಟುಕೊಂಡು ನಿರ್ದೇಶಕ ಕೃಷ್ಣ ‘ಪೈಲ್ವಾನ್​’ ಮಾಡಿದ್ದಾರೆಯೇ ಎನ್ನುವ ಪ್ರಶ್ನೆ ಮೂಡಿದೆ.

ಗರಡಿ ಮನೆಯಲ್ಲಿ ಬಿಗ್ ಬಾಸ್;

ಈ ಸಿನಿಮಾದ ಲುಕ್ ಅಂದ್ರೆ ಸುದೀಪ್ ಕುಸ್ತಿಪಟುವಿನ ಮೇಲೆ ಸಿನಿಮಾ ಮಾಡುತ್ತಾರೆ ಎಂದಾದರೆ, ಅಲ್ಲಿ ಗರಡಿಮನೆ ತೋರಿಸಬೇಕು. ಮರಳು, ಕುಸ್ತಿಪಟುವಿನ ದೇಹ, ಕುಸ್ತಿ ನಡೆಯುವ ಅಖಾಡವನ್ನು ತೋರಿಸಲೇಬೇಕು. ಹಾಗಾಗಿ, ಸುದೀಪ್​ ಚಿತ್ರಕ್ಕೆ ಯಾವ ರೀತಿಯ ಬಾಡಿ ಬಿಲ್ಡ್ ಮಾಡಿದ್ದರೆ ಈ ಸಿನಿಮಾದಲ್ಲಿ ಹೇಗೆ ಡೈಲಾಗ್ ಹೇಳಿದ್ದಾರೆ ಅನ್ನೋದು ಗಾಂಧಿನಗರದ ಜಲಕ್.

ಯೂ ಟ್ಯೂಬ್​ ಟ್ರೆಂಡಿಂಗ್​ನಲ್ಲಿ ‘ಪೈಲ್ವಾನ’ ನಂ 1:

ಈಗಾಗಲೇ ಯೂ ಟ್ಯೂಬ್​ ನಲ್ಲಿ ಪೈಲ್ವಾನ್​’ ಸಿನಿಮಾದ ಟೀಸರ್​ ಒಂದು ಬಿಡುಗಡೆ ಆಗಿದ್ದೇ ತಡಾ, ಎಲ್ಲಿ ನೋಡಿದರೂ ಈಗ ಕಿಚ್ಚನದ್ದೇ ಹವಾ. ಹಾಗೆಯೆ ಸಾಮಾಜಿಕ ಜಾಲತಾಣದಲ್ಲಿ ಪೈಲ್ವಾನ್ ಟ್ರೆಂಡೇ ಬದಲಾಗಿ ಹೋಗಿದೆ. ಯೂ ಟ್ಯೂಬ್​ ಟ್ರೆಂಡಿಂಗ್​ನಲ್ಲಿ ‘ಪೈಲ್ವಾನ’ ನಂ1 ಪಟ್ಟಕ್ಕೆ ಏರಿದೆ. ಹಾಗೂ ಪೋಸ್ಟರ್ ಗಳಿಂದಲೇ ಸದ್ದು ಮಾಡುತ್ತಿದ್ದು, ಕಿಚ್ಚನ ಲುಕ್ ಗೆ ಎಲ್ಲರೂ ಕೂಡ ಫಿದಾ ಆಗಿದ್ದಾರೆ. ಒಟ್ಟಾರೆಯಾಗಿ ಕಿಚ್ಚನ ಕಟ್ಟು ಮಸ್ತಾದ ಬಾಡಿಗೆ ಅಭಿಮಾನಿಗಳು ಮನಸೋತಿದ್ದಾರೆ. ಇನ್ನೂ ಪೈಲ್ವಾನ್ ಸಿನಿಮಾದ 90 ಪರ್ಸೆಂಟ್ ಶೂಟಿಂಗ್ ಕಂಪ್ಲೀಟ್ ಆಗಿದ್ದು, ಸಿನಿಮಾಗೆ ಅರ್ಜುನ್ ಜನ್ಯ ಸಂಗೀತ ನೀಡಿದ್ದಾರೆ ಇನ್ನೂ ಪೈಲ್ವಾನ್ September 12ಕ್ಕೆ ರಿಲೀಸ್ ಆಗಲಿದೆ.