ಏಷ್ಯನ್ ಹಾಕಿ ಫೈನಲ್ಸ್ ನಲ್ಲಿ ಪಾಕ್ ದಿವಾಳಿ: ಭಾರತಕ್ಕೆ ದೀಪಾವಳಿ

0
697

ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡಕ್ಕೆ ಲೀಗ್‌ನಲ್ಲಿ ಸೋಲಿನ ರುಚಿ ತೋರಿಸಿದ್ದ ಭಾರತ ಹಾಕಿ ಪಟುಗಳು ಫೈನಲ್‌ನಲ್ಲೂ ಮುಖಭಂಗ ಉಂಟು ಮಾಡಿ ನಾಲ್ಕನೇ ಬಾರಿ ಏಷ್ಯನ್ ಹಾಕಿ ಚಾಂಪಿಯನ್ ಆಗಿ ಹೊರಹೊಮ್ಮಿದೆ. ಈ ಮೂಲಕ ಗಡಿಯಲ್ಲಿ ಭಾರತೀಯ ಸೇನೆಯಿಂದ ಮುಜುಗರಕ್ಕೆ ಒಳಗಾದರೆ ಹಾಕಿಯಲ್ಲೂ ಮಣ್ಣುತಿಂದಿತು. ಈ ಜಯಭೇರಿಯೊಂದಿಗೆ ಭಾರತ ಅಭಿಮಾನಿಗಳಿಗೆ ದೀಪಾವಳಿಗೆ ಭರ್ಜರಿ ಉಡುಗೊರೆ ನೀಡಿತು.

ಮಲೇಷ್ಯಾದ ಮಿಸ್ರಾ ಮೈದಾನದಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಭಾರತ 3-2 ಗೋಲುಗಳಿಂದ ಪಾಕಿಸ್ತಾನವನ್ನು ಸೋಲಿಸಿತು.

ಭಾರತದ ಪರ ರುಪಿಂದರ್ ಸಿಂಗ್ (18ನೇ ನಿಮಿಷ), ಅಫಾನ್ ಯೂಸುಫ್ (23ನೇ ನಿಮಿಷ) ಮತ್ತು ನಿಕಿನ್ ತಿಮ್ಮಯ್ಯ (51ನೇ ನಿಮಿಷ) ತಲಾ ಒಂದು ಗೋಲು ಸಿಡಿಸಿದರು. ಪಾಕಿಸ್ತಾನ ಪರ ಮೊಹಮದ್ ಅಲೀಂ ಬಿಲಾಲ್ (26ನೇ ನಿಮಿಷ) ಮತ್ತು ಅಲಿ ಶಾ (38ನೇ ನಿಮಿಷ) ತಲಾ ಒಂದು ಗೋಲು ಬಾರಿಸಿದರೂ ಕೊನೆಯಲ್ಲಿ ಸಮಬಲ ಸಾಧಿಸುವ ಪ್ರಯತ್ನ ಕೈಗೂಡಲಿಲ್ಲ.

ಪಂದ್ಯ ಆರಂಭದಿಂದಲೂ ತೀವ್ರ ಕುತೂಹಲ ಮೂಡಿಸಿತ್ತು. ಭಾರತ ಗೋಲು ಬಾರಿಸಿದ ಕೆಲವೇ ನಿಮಿಷದಲ್ಲಿ ಪಾಕ್ ಸಮಬಲ ಸಾಧಿಸಿ ತಿರುಗೇಟು ನೀಡುತ್ತಿತ್ತು. ಎರಡೂ ಬಾರಿಯೂ ಇದೇ ರೀತಿ ಆದಾಗ ಸಹಜವಾಗಿ ಕುತೂಹಲ ಹೆಚ್ಚಾ ಯಿತು. ಆದರೆ ಕರ್ನಾಟಕದ ನಿಕಿನ್ ತಿಮ್ಮಯ್ಯ (56) ಅಂತಿಮ ಹಂತದಲ್ಲಿ ಗೋಲು ಬಾರಿಸಿ ಮುನ್ನಡೆ ದೊರೆಕಿಸಿ ಕೊಟ್ಟಿದ್ದು ಕೊನೆಯವರೆಗೂ ಉಳಿಸಿಕೊಳ್ಳುವಲ್ಲಿ ಆಟಗಾರರು ಯಶಸ್ವಿಯಾದರು.