೧೧ ವರ್ಷದ ಬಾಲಕನ ಭಾಷಣ ಕದ್ದ ಪಾಕ್ ಅಧ್ಯಕ್ಷರ ಕಚೇರಿ

0
847

ರಾಜಕಾರಣಿಗಳಿಗೆ ಭಾಷಣ ಕೂಡ ಮಾಡಲು ಬರುವು ದಿಲ್ಲ. ಯಾರೋ ಬರೆದುಕೊಟ್ಟಿದ್ದನ್ನು ಓದುತ್ತಾರೆ. ಕಾಸು ಕರೆಸಿದ ಜನ ಚಪ್ಪಾಳೆ ತಟ್ಡುತ್ತಾರೆ ಅನ್ನೋದು ಸಾರ್ವ ಜನಿಕರಲ್ಲಿ ಸಹಜವಾಗಿ ಕೇಳಿ ಬರುವ ಮಾತು. ಆದರೆ ಭಾಷಣವನ್ನೂ ಕದಿಯುತ್ತಾರೆ ಅಂದರೆ ನಂಬಲಾಸಾಧ್ಯ. ಆದರೆ ಅದು ಪಾಕಿಸ್ತಾನದಲ್ಲಿ ಅದು ನಿಜವಾಗಿದೆ.

ಹಾಗೆ ಭಾಷಣ ಕದ್ದ ಆರೋಪ ಎದುತಿಸುತ್ತಿರುವವರು ಮತ್ತಾರೂ ಅಲ್ಲ. ಸ್ವತಃ ಪಾಕಿಸ್ತಾನದ ಅಧ್ಯಕ್ಷ ಮಮ್ ನೂನ್ ಹುಸೇನ್ ಕಚೇರಿ ಅಧಿಕಾರಿಗಳು. ಮತ್ತೊಂದು ಮುಜುಗರದ ವಿಷಯ ಅಂದರೆ ಅವರು ಕದ್ದಿರುವುದು ಉದ್ಧಾಮ ಪಂಡಿತರ ಭಾಷಣ ಅಲ್ಲ. ಬದಲಾಗಿ ೧೧ ವರ್ಷದ ಬಾಲಕನದ್ದು.

ಕುತೂಹಲದ ವಿಷಯ ಏನಪ್ಪಾ ಅಂದರೆ ತನ್ನ ಭಾಷಣ ಕದ್ದಿರುವ ಅಧ್ಯಕ್ಷರ ಕಚೇರಿ ವಿರುದ್ದವೇ ಕಾನೂನು ಸಮರ ಹೂಡಿದ್ದಾನೆ. ಬಾಲಕನ ದೂರನ್ನು ಸ್ವೀಕರಿಸಿರುವ ಪಾಕಿಸ್ತಾನ ವಿಚಾರಣೆಗೆ ಅಂಗೀಕರಿಸಿದ್ದು, ಶೀಘ್ರದಲ್ಲೇ ತೀರ್ಪು ನೀಡುವ ಸಾಧ್ಯತೆ ಇದೆ.

ಇಷ್ಟಕ್ಕೂ ನಡೆದ ಸಂಗತಿ ಏನಪ್ಪಾ ಅಂದರೆ ಪಾಕಿಸ್ತಾನ ಸಂಸ್ಥಾಪಕ ಮೊಹಮದ್ ಅಲಿ ಜಿನ್ನಾ ಬಗ್ಗೆ ಅವರ ಜಯಂತಿ ದಿನ ಭಾಷಣ ಮಾಡಲು ೬ನೇ ತರಗತಿಯಲ್ಲಿ ಓದುತ್ತಿರುವ ೧೧ ವರ್ಷದ ಬಾಲಕ ಮೊಹಮದ್ ಸಬೀಲ್ ಹೈದರ್ ಭಾಷಣ ಸಿದ್ಧಪಡಿಸಿಕೊಂಡಿದ್ದ.

ತಮ್ಮನ್ನು ಸಂಪರ್ಕಿಸದೇ ತನ್ನ ಭಾಷಣವನ್ನು ದೇಶದ ಅತ್ಯುನ್ನತ ಹುದ್ದೆಯಲ್ಲಿರುವ ಅಧ್ಯಕ್ಷರ ವಿರುದ್ಧ ಇಸ್ಲಾಮಾಬಾದ್ ನ್ಯಾಯಾಲಯಕ್ಕೆ ದೂರು ನೀಡಿದ್ದು, ನ್ಯಾಯ ಒದಗಿಸುವಂತೆ ಕೋರಿದ್ದಾನೆ.

ನ್ಯಾಯಮೂರ್ತಿ ಆಮೀರ್ ಫಾರೂಖ್ ವಿಚಾರಣೆಗೆ ಅರ್ಜಿ ಅಂಗೀಕರಿಸಿದ್ದು, ಸರಕಾರದ ಎಲ್ಲಾ ಶಿಕ್ಷಣ ಸಂಸ್ಥೆಗಳಿಗೆ ನೋಟೀಸ್ ಜಾರಿ ಮಾಡಿದ್ದಾರೆ.

ಇಸ್ಲಮಾಬಾದ್ ನ ಬಾಲಕರ ಮಾಡೆಲ್ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ ಹೈದರ್, ಮಾರ್ಚ್ ೨೩ ರಂದು ಅಧ್ಯಕ್ಷರ ಕಚೇರಿ ಆಯೊಜಿಸಿದ್ದ ಜಿನ್ನ ಅವರ ೧೪೧ ಜಯಂತಿ ಕಾರ್ಯಕ್ರಮದಲ್ಲಿ ಭಾಷಣ ಮಾಡಬೇಕಿತ್ತು.

ಡಿ. ೧೪ ರಂದು ತಯಾರಿ ಮಾಡಿಕೊಳ್ಳುವುದು ಮತ್ತು ಡಿ.೨೪ರಂದು ಭಾಷಣ ಮಾಡಲು ಸೂಚಿಸಲಾಗಿತ್ತು. ಈ ಕಾರ್ಯಕ್ರಮಕ್ಕಾಗಿ ಇಂಗ್ಲೀಷ್ ಮತ್ತು ಸಾಮಾನ್ಯ ವಿಜ್ಞಾನ ಪರೀಕ್ಷೆಯನ್ನು ತ್ಯಾಗ ಮಾಡಿದ್ದೆ ಎಂದು ಹೈದರ್ ದೂರಿನಲ್ಲಿ ವಿವರಿಸಿದ್ದಾನೆ.

ಡಿ.೧೪ರಂದು ಸ್ಥಳಕ್ಕೆ ಹೋದಾಗ ಭಾಷಣದ ಪ್ರತಿ ಪಡೆದ ಅಧಿಕಾರಿಗಳು ಅನುಮತಿ ಪಡೆಯಬೇಕು ಎಂದು ಹೋದರು. ಹಿಂತಿರುಗಿದ ನಂತರ ಅವರು, ನಿಮ್ಮ ಭಾಷಣ ಪ್ರತಿಗೆ ಅನುಮತಿ ದೊರೆತಿದೆ. ಆದರೆ ಇದನ್ನು ಮತ್ತೊಂದು ಶಾಲೆಯ ಹುಡುಗಿ ಓದುತ್ತಾಳೆ ಎಂದು ಹೇಳಿ ಕಳುಹಿಸಿದರು. ಆಘಾತಕಾರಿ ಅಂಶ ಅಂದರೆ ಆ ಹುಡುಗಿ ಓದಿದ ಭಾಷಣ ಪ್ರತಿ ನನ್ನದೇ ಆಗಿತ್ತು ಎಂದು ಹೈದರ್ ವಿವರಿಸಿದ್ದಾನೆ.

ತಮ್ಮ ಬೌದ್ಧಿಕ ಹಕ್ಕು ಕದುಯಲಾಗಿದೆ ಎಂದು ಬಾಲಕನ ಆರೋಪ ಈಗ ದೇಶಾದ್ಯಂತ ಚರ್ಚೆಯ ವಿಷಯವಾಗಿದೆ.