ಉಗ್ರರನ್ನು ಮೇಲಿನ ದಾಳಿಗೆ ತತ್ತರಿಸಿದ ಪಾಕ್ ಭಾರತಕ್ಕೆ ಚಾಲೆಂಜ್; ಸೂಕ್ತ ಸ್ಥಳ ಗುರುತಿಸಿ ಪ್ರತೀಕಾರ ತೀರಿಸಿಕೊಳ್ಳಲಿದ್ದೇವೆ ಎಂದ ಇಮ್ರಾನ್ ಖಾನ್..

0
308

ಪುಲ್ವಾಮ ದಾಳಿಯ ಪ್ರತಿಕಾರ ತಿರಿಸಿಕೊಂಡ ಭಾರತಕ್ಕೆ ಪಾಕ್ ಪ್ರಧಾನಿ ಚಾಲೆಂಜ್ ಹಾಕಿದ್ದಾರೆ, ಸೇಡಿಗೆ ಸೇಡು ಎಂದು ಹೇಳಿದ ರೀತಿಯಲ್ಲಿ ದಾಳಿಮಾಡಿದ ಭಾರತ ನಮ್ಮ ಗಡಿಗೆ ನುಗ್ಗಿ ದಾಳಿ ನಡೆಸಿದೆ. ಇದಕ್ಕೆ ಶೀಘ್ರವಾಗಿ ತಕ್ಕ ಉತ್ತರ ಕೊಡಲಾಗುತ್ತೆ ಎಂದು ಪಾಪಿಸ್ತಾನದ ಪ್ರಧಾನಿ ಹಳೆಯ ಡ್ರಾಮಾ ಡೈಲಾಗ್ ಹೊಡೆದು. ಗಡಿ ನಿಯಂತ್ರಣ ರೇಖೆ ದಾಟಿ ಕದನ ವಿರಾಮ ನಿಯಮ ಉಲ್ಲಂಘಿಸಿ ಭಾರತ ನಮ್ಮ ನೆಲದ ಮೇಲೆ ದಾಳಿ ನಡೆಸಿದೆ. ಇದಕ್ಕೆ ಸೂಕ್ತಕಾಲದಲ್ಲಿ, ಸೂಕ್ತ ಸ್ಥಳ ಗುರುತಿಸಿ ಪ್ರತೀಕಾರ ತೀರಿಸಿಕೊಳ್ಳಲಿದ್ದೇವೆ. ಭಾರತ ಈ ದಾಳಿಯ ಮೂಲಕ ಪಾಕಿಸ್ತಾನದ ಜನತೆಯನ್ನು ಕೆಣಕಿದೆ. ಮುಂದಿನ ದಿನಗಳಲ್ಲಿ ಪಾಕಿಸ್ತಾನದ ಗಡಿ ನಿವಾಸಿಗಳು ಎಚ್ಚರದಿಂದ ಇರಬೇಕು. ಯಾವುದೇ ಸವಾಲು ಎದುರಿಸಲು ಸಿದ್ಧರಾಗಿ ಎಂದು ತಿಳಿಸಿದ್ದಾರೆ.

ಹೌದು ಒಂದು ಚಾನ್ಸ್ ಕೊಡಿ ತಿದ್ದಿಕೊಳ್ಳುತ್ತೇವೆ ಎಂದು ಕೈ ಮುಗಿದ ಪಾಪಿಸ್ತಾನ ಈಗ ಭಾರತದ ಮೇಲೆ ಸೇಡು ತೀರಿಸಿಕೊಳ್ಳುವ ಬಗ್ಗೆ ನಾಟಕೀಯ ಮಾತುಗಳನ್ನು ಆಡುತ್ತಿದೆ. ಇಷ್ಟೆಲ ಆದರು ಬುದ್ದಿಕಲಿಯದ ಪಾಕಿಸ್ತಾನ ಸುದ್ದಿಗೋಷ್ಠಿ ನಡೆಸಿ ಯಾವುದೇ ಕ್ಷಣದಲ್ಲಿ ಯಾವುದೇ ಬೆಳವಣಿಗೆ ನಡೆಯಬಹುದು. ಪಾಕ್ ಮೇಲೆ ಆಕ್ರಮಣಕಾರಿ ನೀತಿ ಅನುಸರಿಸುತ್ತಿರುವ ಭಾರತದ ವಿರುದ್ಧ ಸೇಡು ತೀರಿಸಕೊಳ್ಳಬೇಕಿದೆ. ಅನಗತ್ಯವಾಗಿ ಪಾಕಿಸ್ತಾನವನ್ನು ಕೆಣಕಲು ಭಾರತ ಮುಂದಾಗುತ್ತಿದೆ. ಜೈಷ್ ಎ-ಮೊಹ್ಮದ್ ಉಗ್ರರ ತಾಣಗಳ ಮೇಲೆ ದಾಳಿ ನಡೆಸಿ, 200 ಕ್ಕೂ ಹೆಚ್ಚು ಉಗ್ರರನ್ನು ಹತ್ಯೆ ಮಾಡಿರುವುದಾಗಿ ಭಾರತ ಹೇಳಿಕೊಳ್ಳುತ್ತಿದೆ. ಆದರೆ, ಈ ಪ್ರದೇಶದಲ್ಲಿ ಯಾವುದೇ ಸಾವು-ನೋವುಗಳು ಸಂಭವಿಸಿಲ್ಲ. ಆದರೆ, ಕದನ ವಿರಾಮ ಉಲ್ಲಂಘಿಸಿ ದಾಳಿ ನಡೆಸಿರುವ ಭಾರತದ ವಿರುದ್ಧ ಸೇಡು ತೀರಿಸಿಕೊಳ್ಳುವುದು ನಿಶ್ಚಿತ ಎಂದು ಇಮ್ರಾನ್ ಗುಡುಗಿದ್ದಾರೆ.

ಅಳುವಿನಲ್ಲಿ ಆಸಿಫ್ ಗಫೂರ್ ಚಾಲೆಂಜ್;

ಸುದ್ದಿಗೋಷ್ಠಿಯಲ್ಲಿ ಭಾರತದ ಮಾಧ್ಯಮಗಳ ಕೆಲ ಸುದ್ದಿಯ ಚಿತ್ರಗಳನ್ನು ಪ್ರದರ್ಶಿಸಿದ ಆಸಿಫ್ ಗಫೂರ್, ಭಾರತೀಯ ವಾಯುಸೇನೆ ಬಾಲ್ ಕೋಟ್, ಮುಜಾಫರ್‍ಬಾದ್ ಮತ್ತು ಚಿಕೋಟಿಯಲ್ಲಿ ದಾಳಿ ನಡೆಸಿದೆಯಂತೆ. ಬರೋಬ್ಬರಿ 21 ನಿಮಿಷಗಳ ಕಾಲ ಭಾರತೀಯ ವಾಯುಸೇನೆಯ ಯುದ್ಧ ವಿಮಾನಗಳು ಈ ಕಾರ್ಯಾಚರಣೆ ನಡೆಸಿವೆ ಎಂದು ನೆರೆಯ ದೇಶದ ಮಾಧ್ಯಮಗಳು ಸುದ್ದಿಯನ್ನು ಬಿತ್ತರಿಸುತ್ತಿವೆ. ಇದೊಂದು ದೊಡ್ಡ ಸುಳ್ಳಾಗಿದ್ದು, ಧೈರ್ಯವಿದ್ದರೆ ಪಾಕ್ ವಾಯುನೆಲೆಯಲ್ಲಿ ಭಾರತದ ವಿಮಾನಗಳು ಹಾರಾಟ ನಡೆಸಲಿ ವಾಯುಸೇನೆಯ ಜೆಟ್‍ಗಳು ಯಾವಾಗಲೂ ಹಾರಾಡುವುದಿಲ್ಲ. ಆದ್ರೆ ಗಡಿರೇಖೆಯ ನಮ್ಮ ನಿಗಾ ಯಾವಾಗಲೂ ಇರುತ್ತದೆ. ಫೆಬ್ರವರಿ 14ರ ಬಳಿಕ ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ನಿರ್ಮಾಣ ಆಗಿದ್ದರಿಂದ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಆಸಿಫ್ ಗಫೂರ್ ಚಾಲೆಂಜ್ ಹಾಕಿದ್ದಾರೆ.

@publictv.in

h2>ಭಾರತ ದಾಳಿ ಮಾಡಿದ್ದು ಸತ್ಯ ಜೈಷ್ ಉಗ್ರ ಮಸೂದ್;

ಭಾರತವು ಪಾಕಿಸ್ತಾನದ ಉಗ್ರನೆಲೆಯ ಮೇಲೆ ದಾಳಿ ಮಾಡಿದ್ದೇ ಸುಳ್ಳು ಎನ್ನುತ್ತಿರುವ ಪಾಕಿಸ್ತಾನಕ್ಕೆ ಮುಖಭಂಗವಾಗುವಂಥ ಹೇಳಿಕೆಯನ್ನು ಸ್ವತಃ ಜೈಷ್ ಇ ಮೊಹಮ್ಮದ್ ಸಂಘಟನೆಯ ಮುಖ್ಯಸ್ಥ, ಮೋಸ್ಟ್ ವಾಂಟೆಡ್ ಉಗ್ರ ಮೌಲಾನಾ ಮಸೂದ್ ಅಝರ್ ನೀಡಿದ್ದಾನೆ. ಎಂದು ಮಾದ್ಯಮಗಳು ಸುದ್ದಿ ಮಾಡುತ್ತಿವೆ “ಭಾರತ ನಮ್ಮ ಕ್ಯಾಂಪ್ ಗಳ ಮೇಲೆ ಮಂಗಳವಾರ ಬೆಳಗ್ಗಿನ ಜಾವ ದಾಳಿ ನಡೆಸಿದ್ದು ನಿಜ” ಎಂದು ಸ್ವತಃ ಮಸೂದ್ ಒಪ್ಪಿಕೊಂಡಿದ್ದಾನೆ. ‘ದಾಳಿ ನಡೆದಿದ್ದು ಸತ್ಯ, ಆದರೆ ಅದರಿಂದ ಯಾವುದೇ ಹಾನಿಯಾಗಿಲ್ಲ. ನಮ್ಮ ನೆಲೆಯ ಯಾರಿಗೂ ಯಾವುದೇ ತೊಂದರೆಯಾಗಿಲ್ಲ’ ಎಂದು ಮಸೂದ್ ಹೇಳಿದ್ದಾನೆ ಎಂದು ತಿಳಿದುಬಂದಿದೆ.

Also read: 300 ರಕ್ಕೂ ಹೆಚ್ಚು ಉಗ್ರರನ್ನು ನಾಶ ಮಾಡಲು ಏರ್ ಸರ್ಜಿಕಲ್ ಸ್ಟ್ರೈಕ್ ದಾಳಿಯ ಪ್ಲಾನ್ ಹೀಗಿತ್ತು ಗೊತ್ತಾ?