ಟೀಂ ಇಂಡಿಯಾ ಪುಲ್ವಾಮಾ ದಾಳಿಯ ಸ್ಮರಣಾರ್ಥವಾಗಿ ಸೇನಾ ಕ್ಯಾಪ್ ಧರಿಸಿದ್ದಕ್ಕೆ, ಕೆಣಕಿದ ಪಾಕಿಸ್ತಾನಕ್ಕೆ ಬಾರಿ ಮುಖಬಂಗ..

0
425

ಎಷ್ಟೇ ಬುದ್ದಿಕಲಿಸಿದರು ನಾಚಿಕೆಯಿಲ್ಲದೆ ಭಾರತದ ಏಳಿಗೆಯನ್ನು ಸಹಿಸದೆ ಏನಾದರು ಒಂದು ಸಂಚು ನಡೆಸುವ ಪಾಕಿಸ್ತಾನಕ್ಕೆ ಬಾರಿ ಮುಖಬಂಗ ವಾಗಿದೆ. ಟೀಂ ಇಂಡಿಯಾ ಪುಲ್ವಾಮಾ ದಾಳಿಯಲ್ಲಿ ಹುತಾತ್ಮರಾದ ಯೋಧರ ಸ್ಮರಣಾರ್ಥವಾಗಿ ಸೇನಾ ಕ್ಯಾಪ್ ಧರಿಸಿ ಪಂದ್ಯವಾಡಿತ್ತು. ಇದನ್ನು ನೋಡಿದ ಪಾಕಿಸ್ತಾನಕ್ಕೆ ಹೊಟ್ಟೆಯಲ್ಲಿ ಕಾರಕಲಿಸಿದ ಅನುಭವಾಗಿ, ವಿಶೇಷ ಆರ್ಮಿ ಕ್ಯಾಪ್ ಧರಿಸಿ ಆಡಿರುವುದರ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ಬೋರ್ಡ್ ಅಧಿಕೃತವಾಗಿ ಪತ್ರ ಬರೆದು ಕಠಿಣ ಕ್ರಮಕ್ಕೆ ಆಗ್ರಹಿಸಿತ್ತು.

Also read: ಮೋದಿ ಹೇಳಿದ ರೀತಿಯಲ್ಲಿ ಪುಲ್ವಾಮಾ ದಾಳಿಗೆ ಪ್ರತೀಕಾರ; ಪಾಕಿಸ್ತಾನದ ಗಡಿಯೊಳಗೆ ನುಗ್ಗಿ ದಾಳಿ ನಡೆಸಿದ ಭಾರತೀಯ ಯುದ್ಧ ವಿಮಾನಗಳು..

ಹೌದು ಆಸ್ಟ್ರೇಲಿಯಾ ವಿರುದ್ಧದ 3ನೇ ಏಕದಿನ ಪಂದ್ಯದಲ್ಲಿ ಟೀಂ ಇಂಡಿಯಾ ಸೇನಾ ಕ್ಯಾಪ್(ARMY CAP) ಧರಿಸಿ ಕಣಕ್ಕಿಳಿದಿತ್ತು. ಪುಲ್ವಾಮಾ ಸೇನೇ ಮೇಲೆ ದಾಳಿ ಹಾಗೂ ನಂತರ ನಡೆದ ಭಯೋತ್ಪಾದಕ ವಿರುದ್ಧದ ದಾಳಿಯಲ್ಲಿ ಹುತಾತ್ಮರಾದ ನಮ್ಮ ಸೈನಿಕರಿಗೆ ಗೌರವ ಸೂಚಿಸುವ ಸಲುವಾಗಿ ರಾಂಚಿ ಪಂದ್ಯದಲ್ಲಿ ಸೇನಾ ಕ್ಯಾಪ್ ಧರಿಸಿದ್ದಲ್ಲದೇ, ಪಂದ್ಯದ ಸಂಭಾವನೆಯನ್ನು ಹುತಾತ್ಮ ಯೋಧರ ಕುಟುಂಬಕ್ಕೆ ನೀಡಿದೆ. ಇಷ್ಟೇ ಅಲ್ಲ ಸೇನೆಯ ಜೊತೆಗೆ ನಾವಿದ್ದೇವೆ ಅನ್ನೋ ಸಂದೇಶವನ್ನೂ ಟೀಂ ಇಂಡಿಯಾ ಸಾರಿತ್ತು. ಈ ನಿರ್ಧಾರ ಬಿಸಿಸಿಐ ಕೈಗೊಂಡಿತ್ತು. ಇದನ್ನು ಸಹಿಸದ ಪಾಕ್ ದೂರು ಸಲ್ಲಿಸಿತ್ತು ಇದಕ್ಕೆ ಬಿಸಿಸಿಐ ಮೊದಲೇ ಅನುಮತಿ ಪಡೆದಿರುವ ಪರಿಣಾಮ ಐಸಿಸಿ ದೂರು ಸಲ್ಲಿಸಿದ ಪಾಕಿಸ್ತಾನಕ್ಕೆ ಬಾರಿ ಮುಖಭಂಗ ಉಂಟಾಗಿದೆ.

ಏನಿದು ಪಾಕ್ ದೂರು?

Also read: ಮೋದಿಯವರು ಕೊಟ್ಟ ಮಾತಿನಂತೆ ಪಾಕಿಸ್ತಾನದ ಮೇಲೆ ಮೊದಲ ಬಾಂಬ್ ಪ್ರಯೋಗ; ಒಂದೇ ವಾರದಲ್ಲಿ ಬಿಕಾರಿಯಾದ ಪಾಕಿಸ್ತಾನ..

ಟೀಂ ಇಂಡಿಯಾ ಕ್ರಿಕೆಟಿಗರು ಸಮವಸ್ತ್ರದ ಕ್ಯಾಪ್ ಬದಲು ಸೇನಾ ಕ್ಯಾಪ್ ಧರಿಸಿ ಆಡಿದೆ. ಇದು ಎಲ್ಲರ ಗಮನಕ್ಕೂ ಬಂದಿದೆ. ಆದರೆ ಐಸಿಸಿಗೆ ಇನ್ನೂ ತಿಳಿದಿಲ್ಲ, ಇಂತಹ ವಿಚಾರಗಳನ್ನು ಪಾಕಿಸ್ತಾನ ಕ್ರಿಕೆಟ್ ಮಂಡಳಿಯೇ ಹೇಳೇಬೇಕೆ?ಭಾರತ ಕ್ರೀಡೆಯಲ್ಲಿ ರಾಜಕೀಯ ಬೆರೆಸುತ್ತಿದೆ. ರಾಜಕೀಯ ವಿಚಾರವನ್ನು ಕ್ರೀಡೆಯಲ್ಲಿ ಎಳೆದುತರುತ್ತಿದೆ ಎಂದು ಪಾಕಿಸ್ತಾನ ಆರೋಪಿಸಿದ ಪಾಕಿಸ್ತಾನದ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಶಿ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಫವಾದ್ ಚೌಧರಿ ಆಗ್ರಹಿಸಿದ್ದರು.

ಈ ಹಿನ್ನೆಲೆಯಲ್ಲಿ ಅದಕ್ಕೆ ಸೊಪ್ಪು ಹಾಕಿದ ಪಾಕಿಸ್ತಾನದ ಮಾಹಿತಿ ಸಚಿವ ಫಾವದ್ ಚೌಧರಿ, ಐಸಿಸಿ ಕ್ರಮ ಕೈಗೊಳ್ಳದಿದ್ದರೆ ಕಾಶ್ಮೀರದಲ್ಲಿ ಭಾರತ ನಡೆಸುತ್ತಿರುವ ದಾಳಿಗಳ ವಿರುದ್ಧ ಪಾಕಿಸ್ತಾನ ಕ್ರಿಕೆಟ್ ತಂಡ ಕಪ್ಪು ಪಟ್ಟಿ ಧರಿಸಿ ಆಡಲಿದೆ ಎಂದು ಎಚ್ಚರಿಸಿದ್ದರು. ಇಷ್ಟೇ ಅಲ್ಲ ಪಾಕಿಸ್ತಾನ ಕ್ರಿಕೆಟ್ ಮಂಡಳಿ, ಐಸಿಸಿಗೆ ಲಿಖಿತ ದೂರು ನೀಡಿದ ಪಾಪಿ ಕೆಲ ಉದಾಹರಣೆಗಳನ್ನು ನೀಡಿದ್ದರು, ಈ ಹಿಂದೆ ಕ್ರಿಕೆಟ್‍ನಲ್ಲಿ ರಾಜಕೀಯ ಹೇಳಿಕೆಗಳನ್ನು ನೀಡಿದ್ದ ಇಂಗ್ಲೆಂಡ್ ಆಟಗಾರ ಮೊಯಿನ್ ಅಲಿ ಹಾಗು ದಕ್ಷಿಣ ಆಫ್ರಿಕಾ ಆಟಗಾರ ಇಮ್ರಾನ್ ತಹೀರ್ ವಿರುದ್ಧ ಐಸಿಸಿ ಕೈಗೊಂಡಿದ್ದ ಕ್ರಮವನ್ನು ಉದಾಹರಣೆಯನ್ನಾಗಿ ನೀಡಿದ್ದಾರೆ. ಇದರಂತೆ ಬಿಸಿಸಿಐ ವಿರುದ್ಧ ಕಠಿಣ ಕ್ರಮಕೈಗೊಳ್ಳಲು ಆಗ್ರಹಿಸುತ್ತೇವೆ ಎಂದು ಹೇಳಿಕೆ ನೀಡಿದ್ದರು.

ಬಿಸಿಸಿಐ ಪಾಕ್-ಗೆ ಮುಖಬಂಗ;

Also read: ಪ್ರಧಾನಿ ಮೋದಿಗೆ 20 ವರ್ಷದಿಂದ ರಾಖಿ ಕಟ್ಟುತ್ತಿರುವ ಪಾಕಿಸ್ತಾನದ ಈ ಮಹಿಳೆ ಯಾರು ಗೊತ್ತಾ…?

ಇಷ್ಟೊಂದು ಕೀಳು ಮನಸ್ಥಿತಿ ಹೊಂದಿ ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನ ಪದೇ ಪದೇ ಭಾರತವನ್ನು ಕೆಣಕುತ್ತಿದೆ. ಇತ್ತ ಪಾಕಿಸ್ತಾನ ಮಂಡಳಿ ಕೂಡ ಅಸಂಬದ್ಧ ಹೇಳಿಕೆ ನೀಡುತ್ತಿದೆ. ಈಗ ಪಾಕ್ ನೀಡಿರುವ ಪಾಕಿಸ್ತಾನ ನಿಲುವಿಗೆ ಸ್ಪಷ್ಟನೆ ನೀಡಿರುವ ಬಿಸಿಸಿಐ ವಕ್ತಾರರು, ನಾವು ಐಸಿಸಿ ನಿಂದ ಅನುಮತಿ ಪಡೆದೆ ಆಟಗಾರರಿಗೆ ಕ್ಯಾಪ್ ಧರಿಸಲು ಅವಕಾಶ ನೀಡಿದ್ದೇವೆ. ಅಲ್ಲದೇ ಐಸಿಸಿ ಕೂಡ ಸಹಾಯ ದೇಣಿಗೆ ಸಂಗ್ರಹ ಮಾಡಲು ಕೂಡ ಅನುಮತಿ ನೀಡಿತ್ತು ಎಂದು ಸ್ಪಷ್ಟಪಡಿಸಿದ್ದಾರೆ. ಬಿಸಿಸಿಐ ಮೊದಲೇ ಅನುಮತಿ ಪಡೆದಿರುವ ಪರಿಣಾಮ ಐಸಿಸಿ ದೂರು ಸಲ್ಲಿಸಿದ ಪಾಕಿಸ್ತಾನಕ್ಕೆ ಮುಖಭಂಗ ಉಂಟಾಗಿದೆ.