ಪಾಕಿಸ್ತಾನ ಸರ್ಕಾರದ ಅಧಿಕೃತ ವೆಬ್‌ಸೈಟ್ ನಲ್ಲಿ ಭಾರತೀಯ ರಾಷ್ಟ್ರಗೀತೆ ರಾರಾಜಿಸಿದೆ..!

0
574

ಹೌದು ಪಾಕಿಸ್ಥಾನ ಸರ್ಕಾರದ ಅಧಿಕೃತ ವೆಬ್‌ಸೈಟನ್ನು ಗುರುವಾರ ಹ್ಯಾಕರ್‌ಗಳು ಹ್ಯಾಕ್‌ ಮಾಡಿ ಹ್ಯಾಕರ್‌ಗಳು ಭಾರತೀಯ ರಾಷ್ಟ್ರಗೀತೆ ಮತ್ತು ಭಾರತದ ಸ್ವಾತಂತ್ರ್ಯ ದಿನಾಚರಣೆಯ ಶುಭಾಷಯಗಳನ್ನು ಕೋರಿದ ಸಂದೇಶ ಪ್ರಕಟಿಸಿದ್ದಾರೆ.

ವರದಿಗಳ ಪ್ರಕಾರ, ಹ್ಯಾಕ್‌ ಮಾಡಲ್ಪಟ್ಟ ಪಾಕಿಸ್ತಾನ ಸರ್ಕಾರದ ವೈಬ್‌ ಸೈಟಿನಲ್ಲಿ ಹ್ಯಾಕರ್‌ಗಳು ಭಾರತದ ರಾಷ್ಟ್ರ ಗೀತೆ ಮತ್ತು ಸ್ವಾತಂತ್ರ್ಯ ದಿನದ ಶುಭಾಶಯಗಳನ್ನು ಹಾಕಿದ್ದಾರೆ.

ಪಾಕ್ ಸರ್ಕಾರಕ್ಕೆ ಮುಜುಗರವನ್ನುಂಟು ಮಾಡಿದೆ. ಘಟನೆಯಿಂದಾಗಿ ಪಾಕ್ ವೆಬ್‌ಸೈಟ್ ಕೆಲವು ಕ್ಷಣಗಳ ವರೆಗೆ ಸ್ಥಗಿತಗೊಂಡಿದ್ದು, ಬಳಿಕ ಸರಿಪಡಿಸಲಾಗಿದೆ.

ಪಾಕ್ ಸರ್ಕಾರಿ ವೆಬ್ ಸೈಟ್ ಹ್ಯಾಕಿಂಗ್‌ ಕೃತ್ಯದ ಮೂಲವನ್ನು ಇನ್ನೂ ಪತ್ತೆ ಹಚ್ಚಲಾಗಿಲ್ಲ. ಆದರೆ ಇದು ಭಾರತೀಯ ಹ್ಯಾಕರ್‌ಗಳ ಕೃತ್ಯವೆಂಬಂತೆ ಬಿಂಬಿಸಲಾಗಿದೆ.

ಕಳೆದ ಏಪ್ರಿಲ್ ನಲ್ಲಿ ಇಂತಹದ್ದೆ ಘಟನೆ ಭಾರತದಲ್ಲಿ ನಡೆದಿತ್ತು. ದೆಹಲಿ ವಿಶ್ವವಿದ್ಯಾಲಯ, ಅಲಿಘಡ್ ಮುಸ್ಲಿಂ ವಿಸ್ವವಿದ್ಯಾಲಯ, ಐಐಟಿ-ದೆಹಲಿ ಹಾಗೂ ಐಐಟಿ-ಬಿಎಚ್ ಯು ವೆಬ್ ಸೈಟ್ ಗಳನ್ನು ಹ್ಯಾಕಿ ಮಾಡಿ ಪಾಕಿಸ್ತಾನ ಜಿಂದಾಬಾದ್ ಎಂಬ ಘೋಷಣೆಗಳನ್ನು ಹಾಕಲಾಗಿತ್ತು. ಇದಾದ ಮೂರು ತಿಂಗಳ ನಂತರ ಹ್ಯಾಕರ್ ಗಳು ಪಾಕಿಸ್ತಾನದ ಸರ್ಕಾರಿ ವೆಬ್ ಸೈಟ್ ಅನ್ನು ಹ್ಯಾಕ್ ಮಾಡಿದ್ದಾರೆ.