ಪಾಕ್ ದೇಶಾದ್ಯಂತ ಭಾರತೀಯ ಸಿನಿಮಾಗಳ ಪ್ರದರ್ಶನ ರದ್ದು; ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಪಾಪಿಸ್ತಾನದ ದ್ವೇಷ ಯುದ್ದಕ್ಕೆ ಕಾರಣವಾಗುತ್ತಾ??

0
190

ಭಾರತವು ಕೈಗೊಂಡ ಜಮ್ಮು ಕಾಶ್ಮೀರ ವಿಶೇಷ ಸ್ಥಾನಮಾನ ಬದಲಾವಣೆ ನಂತರ ಪಾಕಿಸ್ತಾನ ಭಾರತದ ಮೇಲೆ ಸಂಪೂರ್ಣ ವ್ಯವಹಾರವನ್ನು ಕಳೆದುಕೊಳ್ಳುವ ಲಕ್ಷಣಗಳು ಕಂಡು ಬರುತ್ತಿದ್ದು, ಯಾವುದೇ ಸಮಯದಲ್ಲಿ ಬೇಕಾದರು ಯುದ್ದ ನಡೆಸುವ ಮತ್ತು ಪುಲ್ವಾಮ ಮಾದರಿ ದಾಳಿ ಮಾಡಲು ಸಂಚು ನಡೆಸಿದೆ ಎನ್ನುವ ಮಾಹಿತಿ ಲಭ್ಯವಾಗುತ್ತಿದೆ. ನಿನ್ನೆ ತಾನೇ ಪಾಕಿಸ್ತಾನದ ಲಾಹೋರ್​ನಿಂದ ಬರುತ್ತಿದ್ದ ಸಂಜೋತಾ ಎಕ್ಸ್​ಪ್ರೆಸ್​ ವಾಘಾ ಗಡಿಯ ನಿಲ್ಲಿಸಿ ವಿಕೃತಿ ಮೆರೆದ ಪಾಕ್ ಈಗ ಮತ್ತೆ ಭಾರತೀಯ ಸಿನಿಮಾಗಳ ಪ್ರದರ್ಶನವನ್ನು ರದ್ದುಗೊಳಿಸಿದೆ.

ಭಾರತದ ಮೇಲೆ ಹೆಚ್ಚುತ್ತಿರುವ ಪಾಕ್ ದ್ವೇಷ

ಹೌದು ಜಮ್ಮು ಕಾಶ್ಮೀರಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನವನ್ನು ಭಾರತ ರದ್ದು ಮಾಡಿದ ವಿಚಾರ ಸಂಬಂಧ ಪಾಕಿಸ್ತಾನ ವಿಶ್ವಸಂಸ್ಥೆ ಭದ್ರತಾ ಮಂಡಳಿಗೆ ಪತ್ರ ಬರೆದು ವಿಶ್ವಸಂಸ್ಥೆಯ ನಿರ್ಧಾರವನ್ನು ಉಲ್ಲಂಘಿಸಿದೆ ಎಂದು ಆರೋಪಿಸಿ ದೂರು ನೀಡಿತ್ತು. ಅಷ್ಟೇ ಅಲ್ಲದೇ ಎರಡು ದೇಶಗಳ ಮಧ್ಯೆ ಸಂಧಾನ ಮಾಡುವಂತೆ ಮನವಿ ಮಾಡಿತ್ತು. ಈ ಪತ್ರಕ್ಕೆ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಅಧ್ಯಕ್ಷೆ ಜೊವಾನ್ನಾ ವ್ರೊನೆಕ್ಕಾ ಹೇಳಿದ್ದಾರೆ. ಪಾಕ್ ಬರೆದ ಪತ್ರಕ್ಕೆ ಸಂಬಂಧಿಸಿದಂತೆ ನ್ಯೂಯಾರ್ಕ್ ನಲ್ಲಿ ಮಾಧ್ಯಮಗಳು ಪ್ರತಿಕ್ರಿಯೆ ಕೇಳಲು ಬಂದಾಗ ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದ್ದಾರೆ.

ಇವೆಲ್ಲ ವಿಚಾರಗಳಿಂದ ಕಂಗೆಟ್ಟ ಪಾಕ್ ತನ್ನ ದೇಶಾದ್ಯಂತ ಬಾಲಿವುಡ್ ಸೇರಿದಂತೆ ಭಾರತೀಯ ಸಿನಿಮಾಗಳ ಪ್ರದರ್ಶನವನ್ನು ರದ್ದುಗೊಳಿಸುವುದಾಗಿ ಸರ್ಕಾರ ಪ್ರಕಟಿಸಿದೆ.
ಪಾಕಿಸ್ತಾನದಲ್ಲಿ ಭಾರತದ ಸಿನಿಮಾಗಳು, ನಾಟಕಗಳು ಮತ್ತು ಕಿರುಚಿತ್ರ ಅಥವಾ ಯಾವುದೇ ಇಂಡಿಯನ್ ಕಂಟೆಂಟ್‍ಗಳ ಪ್ರದರ್ಶನಕ್ಕೆ ಅವಕಾಶ ನೀಡುದಿಲ್ಲ ಎಂದು ಪಾಕ್ ಪ್ರಧಾನಮಂತ್ರಿ ಮಾಧ್ಯಮ ಸಲಹೆಗಾರ ಫಿರ್ದೋಸ್ ಆಶಿಕ್ ಆಹ್ವಾನ್ ತಿಳಿಸಿದ್ದಾರೆ. ಭಾರತ-ಪಾಕಿಸ್ತಾನ ಗಡಿಭಾಗದಲ್ಲಿರುವ ವಾಘಾ ಸರಹದ್ದಿನ ಮೂಲಕ ಆಫ್ಘಾನಿಸ್ತಾನವೂ ಭಾರತದಿಂದ ಆಮದು ಮಾಡಿಕೊಳ್ಳುವ ಅಗತ್ಯ ವಸ್ತುಗಳ ಮಾರ್ಗವನ್ನು ಬಂದ್ ಮಾಡುವುದಾಗಿ ಪಾಕಿಸ್ತಾನ ನಿನ್ನೆಯಷ್ಟೆ ಘೋಷಿಸಿತ್ತು.

ಇದರೊಂದಿಗೆ ಭಾರತ ಮತ್ತು ಆಫ್ಘಾನ್ ನಡುವೆ ವಾಣಿಜ್ಯ-ವ್ಯಾಪಾರ-ವಹಿವಾಟು ಬಂದಾಗಲಿದ್ದು, ಪ್ರತಿಕೂಲ ಪರಿಣಾಮ ಉಂಟಾಗಲಿದೆ. ಪಾಕ್ ಪ್ರಧಾನಮಂತ್ರಿ ಇಮ್ರಾನ್ ಖಾನ್ ಅವರ ವಾಣಿಜ್ಯ ಸಲಹೆಗಾರ ಅಬ್ದುಲ್ ರಜಾಖ್ ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿ ಇನ್ನು ಮುಂದೆ ವಾಘ ಗಡಿ ಮೂಲಕ ಭಾರತ ಮತ್ತು ಆಫ್ಘಾನಿಸ್ತಾನ ವ್ಯಾಪಾರ-ವಹಿವಾಟಿಗೆ ನಾವು ಅವಕಾಶ ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ. ಅಷ್ಟೇ ಅಲ್ಲದೇ ವಿಶ್ವದ ವಿವಿಧ ರಾಷ್ಟ್ರಗಳು ಸಹ ತನ್ನ ಪರವಾಗಿ ನಿಲ್ಲಬೇಕೆಂದು ಪಾಕ್ ಪ್ರಧಾನಿ ಇಮ್ರಾನ್ ಖಾನ್ ಮನವಿ ಮಾಡಿದ್ದರು. ಪಾಕ್ ಮಿತ್ರ ಚೀನಾ ಹೊರತುಪಡಿಸಿ ವಿಶ್ವದ ಯಾವುದೇ ಬಲಾಢ್ಯ ರಾಷ್ಟ್ರಗಳು ಭಾರತ ಕೈಗೊಂಡ ಐತಿಹಾಸಿಕಾ ನಿರ್ಧಾರದ ಬಗ್ಗೆ ಇಲ್ಲಿಯವರೆಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಎನ್ನುವುದು ಪಾಕ್ ಗೆ ಅವಮಾನ ತಂದಿದೆ.

Also read: ಕೇಂದ್ರಾಡಳಿತ ಪ್ರದೇಶವಾಗಲಿದೆ ಜಮ್ಮು-ಕಾಶ್ಮೀರ; ವಿಶೇಷ ಅಧಿಕಾರ, ಸ್ಥಾನಮಾನ ರದ್ದು, ಏನೇನು ಬದಲಾಗುತ್ತೆ? ಇಲ್ಲಿದೆ ನೋಡಿ ರೋಚಕ ಮಾಹಿತಿ!!