ಪಾಕಿಸ್ತಾನದಲ್ಲಿರುವ 360 ಮೀನುಗಾರರ ಬಿಡುಗಡೆ: ನಾಲ್ಕು ಬ್ಯಾಚ್ ಗಳಲ್ಲಿ ಕೈದಿಗಳನ್ನು ಬಿಡುಗಡೆ ಮಾಡಲು ಪಾಕ್ ಯೋಜನೆ..

0
289

ಪುಲ್ವಾಮ ದಾಳಿಯ ನಂತರ ಭಾರತ ಮತ್ತು ಪಾಕ್ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದೆ. ಮೇಲೆ ಬೆಳ್ಳಗೆ ಕಾಣುವ ಪಾಕಿಸ್ತಾನ ಒಳಗಡೆ ವಿಷ ತುಂಬಿಕೊಂಡಿದ್ದು ಉಗ್ರರನ್ನು ಭಾರತದ ಮೇಲೆ ದಿನ ದಿನವೂ ಚೂ ಬಿಡುತ್ತಿದೆ. ಇಷ್ಟೊಂದು ದ್ವೇಷ ಸಾಧಿಸುವ ಪಾಕ್ ಭಾರತದ 360 ಮೀನುಗಾರರನ್ನು ಬಿಡುಗಡೆ ಮಾಡಲು ನಿರ್ಧರಿಸಿದೆ. ಈ ವಿಷಯವಾಗಿ ಮಾಹಿತಿ ನೀಡಿದ ವಿದೇಶಾಂಗ ಸಚಿವಾಲಯದ ವಕ್ತಾರ ಮೊಹಮ್ಮದ್ ಫೈಸಲ್ ಏಪ್ರಿಲ್ 15 ರಂದು ಭಾರತೀಯ ಕೈದಿಗಳನ್ನು ನಾಲ್ಕು ಬ್ಯಾಚ್ ಗಳಲ್ಲಿ ಬಿಡುಗಡೆಗೊಳಿಸಲಾಗುವುದು ಎಂದು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಹೌದು ಭಾರತೀಯ ಮಿನಿಗಾರರನ್ನು ದೊಡ್ಡ ಸಂಖ್ಯೆಯಲ್ಲಿ ಬಿಡುಗಡೆ ಮಾಡಲು ಪಾಕಿಸ್ತಾನ ಒಪ್ಪಿಗೆ ಸೂಚಿಸಿದೆ. ಅರೇಬಿಯನ್ ಸಮುದ್ರದಲ್ಲಿ ಪಾಕ್ ಪ್ರದೇಶಿಕ ಜಲ ಭಾಗದಲ್ಲಿ, ಕಾನೂನು ಬಾಹಿರವಾಗಿ ಮೀನುಗಾರಿಕೆ ಮಾಡಿದ ಆರೋಪದಡಿ ಭಾರತೀಯ ಮೀನುಗಾರರನ್ನು ಬಂಧಿಸಲಾಗಿತ್ತು. ಆದರೆ ಸದ್ಯ ಉಭಯ ರಾಷ್ಟ್ರಗಳ ನಡುವೆ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು, ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಪಾಕ್ ವಿದೇಶಾಂಗ ಕಚೇರಿ ಭಾರತೀಯ ಕೈದಿಗಳನ್ನು ಬಿಡುಗಡೆ ಮಾಡಲಿದ್ದೇವೆ ಎಂದು ಘೋಷಿಸಿದೆ.

ನಾಲ್ಕು ಬ್ಯಾಚ್ ಗಳಲ್ಲಿ ಬಿಡುಗಡೆ:

ಪಾಕಿಸ್ತಾನವು ಭಾರತದ 100 ಮೀನುಗಾರರನ್ನು ಸೋಮವಾರ ಬಿಡುಗಡೆ ಮಾಡಲಿದೆ ಎಂದು ಎರಡೂ ದೇಶಗಳ ರಾಜತಾಂತ್ರಿಕ ಮೂಲಗಳು ಖಚಿತಪಡಿಸಿವೆ. ಪಾಕಿಸ್ತಾನಿ ಅಧಿಕಾರಿಗಳು ಈ ಬಗ್ಗೆ ಖಚಿತ ಪಡಿಸಿದ್ದು, 100 ಮೀನುಗಾರರನ್ನು ಏಪ್ರಿಲ್ ಏಳನೇ ತಾರೀಕು ಅಲ್ಲಿನ ಜೈಲುಗಳಿಂದ ಬಿಡುಗಡೆ ಮಾಡಲಿದ್ದು, ವಾಘಾ ಗಡಿ ಮೂಲಕ ಮರು ದಿನ ಭಾರತಕ್ಕೆ ಹಸ್ತಾಂತರ ಆಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪಾಕಿಸ್ತಾನದ ಜೈಲುಗಳಲ್ಲಿ ಇರುವ ಮೂನ್ನೂರಾ ಎಂಬತ್ತೈದು ಭಾರತೀಯ ಮೀನುಗಾರರು ಹಾಗೂ ಹತ್ತು ನಾಗರಿಕರನ್ನು ಬಿಡುಗಡೆ ಮಾಡುವಂತೆ ನವದೆಹಲಿಯಲ್ಲಿ ಇರುವ ಪಾಕಿಸ್ತಾನ ಹೈಕಮಿಷನ್ ಗೆ ಭಾರತ ವಿಶೇಷ ಮನವಿ ಸಲ್ಲಿಸಿತ್ತು. ಮೂಲಗಳ ಪ್ರಕಾರ, ಒಟ್ಟು 360 ಕೈದಿಗಳನ್ನು ಬಿಡುಗಡೆ ಮಾಡಲು ಪಾಕ್ ಯೋಜನೆ ರೂಪಿಸಿದೆ. ಅದರಲ್ಲಿ 5 ನಾಗರಿಕರು ಕೂಡ ಒಳಗೊಂಡಿದ್ದಾರೆ.

ಜಲ ಗಡಿಯನ್ನು ಉಲ್ಲಂಘಿಸಿ, ಪಾಕಿಸ್ತಾನ ಪ್ರವೇಶಿಸಿ ಬಂಧನಕ್ಕೊಳಗಾದ ಮೀನುಗಾರರನ್ನು ದೊಡ್ಡ ಸಂಖ್ಯೆಯಲ್ಲಿ ಬಿಡುಗಡೆ ಮಾಡುತ್ತಿರುವುದು ಎರಡನೇ ಬಾರಿಗೆ ಆಗಿದ್ದು. ಇವರೆಲ್ಲರನ್ನು ಪಾಕಿಸ್ತಾನ ಮತ್ತು ಭಾರತೀಯ ಕಡಲ ಏಜೆನ್ಸಿಗಳು ಪರಸ್ಪರರ ಮೀನುಗಾರರನ್ನು ಅಕ್ರಮ ಮೀನುಗಾರಿಕೆಯ ಆರೋಪದಲ್ಲಿ ಬಂಧಿಸಿವೆ. ಈ ಸಂಬಂಧ ಸೌಹಾರ್ದ ಸನ್ನೆಗಳು ಎರಡೂ ರಾಷ್ಟ್ರಗಳಿಂದ ಬರುವವರೆಗೂ ಬಂಧನಕ್ಕೊಳಗಾದವರನ್ನು ಜೈಲಿನಲ್ಲಿ ಸಾಮಾನ್ಯ ಕೈದಿಗಳನ್ನಾಗಿ ಇರಿಸಲಾಗಿತ್ತು. ಈಗ ಅವರ ಬಿಡುಗಡೆಗೆ ಸಜ್ಜಾಗಿರುವ ಪಾಕ್ ವಾರ ವಾರವು 100ರ ಸಂಖ್ಯೆಯಂತೆ ಬಿಡುಗಡೆ ಮಾಡಲು ಚಿಂತನೆ ನಡೆದಿದ್ದು, ಕೊನೆ ತಂಡವು ಏಪ್ರಿಲ್ 29ರಂದು ಬಿಡುಗಡೆ ಆಗುವ ಸಾಧ್ಯತೆ ಇದೆ.