ಎಚ್ಚರ!!!ಪಾಕಿಸ್ತಾನದವರು appಗಳ ಮೂಲಕ ನಿಮ್ಮ ಖಾಸಗಿ ವಿಚಾರಗಳನ್ನು ಕದಿಯುತ್ತಿದ್ದಾರೆ…

0
1284

ಸ್ಮಾರ್ಟ್ಫೋನ್ ಹೇಳಿಕೇಳಿ ಒಂದೇ ಉಪಕರಣ. ಹಲವಾರು ಉಪಯೋಗಗಳು. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಸ್ಮಾರ್ಟ್ ಫೋನ್ ಬಹಳ ಜನಪ್ರಿಯತೆಯನ್ನು ಗಳಿಸುತ್ತಿದೆ. ಹೀಗಿರುವಾಗ ಯಾರು ತಾನೇ ಸ್ಮಾರ್ಟ್ ಫೋನ್ ಬಳಕೆ ಬೇಡ ಅಂತಾರೆ…? ಎಂಬ ಮಾತುಗಳು ಪ್ರಚಲಿತದಲ್ಲಿದೆ. ಇದರ ಬೆನ್ನಲ್ಲೇ ಸ್ಮಾರ್ಟ್ ಫೋನ್ ನಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ಕೇಂದ್ರ ಸರ್ಕಾರದ ಎಚ್ಚರಿಕೆಯ ಮಾತುಗಳು ಕೇಳಿಬರುತ್ತಿವೆ.

ಸ್ಮಾರ್ಟ್ ಫೋನ್ ಬಳಸುವವರಿಗೆ ಕೆಲ ಅಪ್ಲಿಕೇಶನ್ ಬಗ್ಗೆ ಎಚ್ಚರಿಕೆಯಿಂದಿರಬೇಕು ಎಂದು ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ. ಅಷ್ಟೇ ಅಲ್ಲಾ ಕೇಂದ್ರ ತಿಳಿಸಿರುವ ನಾಲ್ಕು ಅಪ್ಲಿಕೇಶನ್‍ಗಳನ್ನ ನೀವೇನಾದ್ರೂ ಬಳಸ್ತಾ ಇದ್ರೆ ತಕ್ಷಣ ನಿಲ್ಲಿಸಿ ಅಂತಾನ ಸೂಚನೆ ನೀಡಿದೆ…!

ನಿಲ್ಲಿಸ ಬೇಕಾದಂತಹ ಅಪ್ಲಿಕೇಶನ್ ಗಳು

  • ಟಾಪ್‍ಗನ್(ಗೇಮ್),
  • Mpijunk(ಸಂಗೀತ)
  • Beedijunki (ವಿಡಿಯೊ)
  • ಟಾಕಿಂಗ್ ಫ್ರಾಗ್

ಮೇಲೆ ತಿಳಿಸಲಾಗಿರುವ ಅಪ್ಲಿಕೇಶನ್‍ಗಳನ್ನ ನೀವು ಡೌನ್‍ಲೋಡ್ ಮಾಡ್ಕೊಂಡಿದ್ದೇ ಆದರೆ ತಕ್ಷಣ ಅದನ್ನು ತೆಗೆದು ಹಾಕಿ ಅಂತ ಕೇಂದ್ರ ಗೃಹ ಸಚಿವಾಲಯ ಪ್ರಕಟಣೆ ನೀಡಿದೆ.

ಈ ಅಪ್ಲಿಕೇಶನ್‍ಗಳನ್ನ ನಿಲ್ಲಿಸಲು ಕೇಂದ್ರ ಬಲವಾದ ಕಾರಣವನ್ನು ನೀಡಿದೆ. ಪಾಕ್‍ನ ಗೂಢಾಚಾರ ಸಂಸ್ಥೆ ಮೊಬೈಲ್ ಅಪ್ಲಿಕೇಶನ್ ಮೂಲಕವಾಗಿ ಭಾರತಕ್ಕೆ ಮಾಲ್ವೇರ್ ವೈರಸ್ ಕಳಿಸುವುದಕ್ಕೆ ಶುರುಮಾಡಿದೆ ಎಂದು ತಿಳಿಸಿದೆ. ಇನ್ನು ಈ ಸುದ್ದಿ ಗೃಹ ಸಚಿವಾಲಯಕ್ಕೆ ತಿಳಿತಾ ಇದ್ದಂತೆ ಭಾರತದ ರಕ್ಷಣಾ ಸಂಸ್ಥೆ ಹಾಗೂ ರಾಜ್ಯದ ಗುಪ್ತಚರ ಇಲಾಖೆಗೆ ಈ ವಿಶೇಷ ಅಪ್ಲಿಕೇಶನ್‍ಗಳನ್ನು ಡೌನ್‍ಲೋಡ್ ಮಾಡದಂತೆ ನಿಗಾವಹಿಸಿ ಎಂದು ಪತ್ರ ಬರೆದಿದೆ.