ಪಾಲಕ್ ಎಂಬ ಅಮೃತ

0
1363

ಸೊಪ್ಪು ಯಾವುದೇ ಆದರೂ ಯಥೇಚ್ಛವಾಗಿ ಕಬ್ಬಿಣಾಂಶ ಇರುತ್ತದೆ. ಅದರಲ್ಲಿ ಕೆಲವು ಸೊಪ್ಪುಗಳಂತೂ ಇನ್ನೂ ವಿಶೇಷವಾದದ್ದು. ಅಂತಹ ಸೊಪ್ಪಿನಲ್ಲಿ ಪಾಲಕ್ ಕೂಡ ಒಂದು. ಪಾಲಕ್‍ನಲ್ಲಿ ಸಮೃದ್ಧವಾದ ಕಬ್ಬಿಣಾಂಶದ ಜೊತೆಗೆ ಇನ್ನೂ ಹಲವಾರು ಪೌಷ್ಟಿಕಾಂಶಗಳಿವೆ. ಮಕ್ಕಳಿಗಂತೂ ಪಾಲಕ್ ಸೊಪ್ಪು ವಿಶೇಷವಾಗಿ ಅಗತ್ಯ. ಪಾಲಕ್ ಸೇವಿಸುವುದರಿಂದ ದೃಷ್ಟಿಗೆ ಬಲ ಬರುತ್ತದೆ.

ಅಂದರೆ ಚಿಕ್ಕ ವಯಸ್ಸಲ್ಲೇ ಕನ್ನಡಕ ಹಾಕಿಕೊಳ್ಳಬೇಕಾದ ಸಮಸ್ಯೆಗೆ ಪಾಲಕ್ ತಡೆ ಒಡ್ಡುತ್ತದೆ. ದೃಷ್ಟಿ ದೋಷಕ್ಕೆ ಕಾರಣವಾಗುವ ನರದೌರ್ಬಲ್ಯವನ್ನು ತಡೆಗಟ್ಟುವುದಲ್ಲದೆ ಹಲವಾರು ನೋವುಗಳನ್ನು ತಡೆಗಟ್ಟುತ್ತದೆ.ಜ್ಞಾಪಕ ಶಕ್ತಿ ಹೆಚ್ಚಿಸುವ ಸಾಮಥ್ರ್ಯ ಪಾಲಕ್‍ಗೆ ಇರುವುದರಿಂದ ಮಕ್ಕಳು ದಿನಾ ಪಾಲಕ್ ಸೇವಿಸುವುದರಿಂದ ಜಾಣರಾಗಬಹುದು.

ರಕ್ತ ವೃದ್ಧಿಸುವ, ಕೀಲುನೋವು ಪರಿಹರಿಸುವ ಶಕ್ತಿ ಪಾಲಕ್‍ಗಿದೆ. ಚರ್ಮದ ಹೊಳಪಿಗೆ ಬೇಕಾದ ವಿಟಮಿನ್ ಎ ಪಾಲಕ್‍ನಲ್ಲಿದೆ. ಕ್ಯಾನ್ಸರ್ ಕಣವನ್ನು ಕೊಲ್ಲುವ ಶಕ್ತಿಯೂ ಇದರಲ್ಲಿದೆ.ಪಾಲಕ್‍ನಲ್ಲಿ ಪ್ರೋಲೇಟ್ ಎಂಬ ಅಂಶವಿದ್ದು, ಇದು ರಕ್ತದೊತ್ತಡವನ್ನು ನಿಯಂತ್ರಿಸಿ, ಹೃದಯಸಂಬಂಧಿ ಕಾಯಿಲೆಗಳನ್ನು ನಿವಾರಿಸುತ್ತದೆ. ಕ್ಯಾರೋಟೆನೈಡ್ ಕೊಲೆಸ್ಟ್ರಾಲ್‍ಅನ್ನು ಕಡಿಮೆ ಮಾಡುವುದಲ್ಲದೆ, ನಿಯಂತ್ರಣದಲ್ಲೂ ಇಡುತ್ತದೆ.
ಬಿಸಿಲಿನ ತಾಪದಿಂದ ಕುಂದುವ ಚರ್ಮಕ್ಕೆ ಪಾಲಕ್‍ನಿಂದ ಸಹಜವರ್ಣ ದೊರೆಯುತ್ತದೆ. ಚರ್ಮದ ಕೆಳಭಾಗದಲ್ಲಿ ಸಂಗ್ರಹವಾಗಿ ಮೊಡವೆಗೆ ಕಾರಣವಾಗುವ ವಿಷಕಾರಿ ವಸ್ತುಗಳನ್ನು ರಕ್ತದಿಂದಲೇ ತೆಗೆಯುವ ಶಕ್ತಿ ಹೊಂದಿದೆ. ಮೊಡವೆಗಳನ್ನು ಹೋಗಲಾಡಿಸಿ, ಬೇಗನೆ ನೆರಿಗೆ ಬೀಳದಂತೆ ಕಾಪಾಡುತ್ತದೆ. ಕೂದಲು ಉದುರುವ ಸಮಸ್ಯೆ ಇದ್ದವರಂತೂ ನಿತ್ಯ ಬೆಳಿಗ್ಗೆ ಒಂದು ಲೋಟ ಪಾಲಕ್ ರಸ ಕುಡಿಯುವುದು ಒಳ್ಳೆಯದು.
ಮೆದುಳಿನ ನರಕೋಶಗಳ ಅಭಿವೃದ್ಧಿಗೆ ಬೇಕಾದ ಪೋಷಕಾಂಶಗಳು ಪಾಲಕ್‍ನಲ್ಲಿದೆ. ಅಧಿಕ ಕಬ್ಬಿಣಾಂಶವಿದ್ದು, ಇದರ ಸೇವನೆಯಿಂದ ರಕ್ತಕಣಗಳು ವೃದ್ಧಿಯಾಗಿ ರಕ್ತಹೀನತೆ ದೂರವಾಗುತ್ತದೆ. ಪಾಲಕ್‍ನಲ್ಲಿರುವ ಎ ಜೀವಸತ್ವದಿಂದ ಚರ್ಮ ಬಿಗಿಗೊಂಡು ಕಾಂತಿಯುತವಾಗುತ್ತದೆ. ನಿತ್ಯವೂ ಒಂದಲ್ಲಾ ಒಂದು ರೀತಿಯಲ್ಲಿ ಪಾಲಕ್ ಸೇವಿಸುವುದರಿಂದ ಹಲವಾರು ಆರೋಗ್ಯಕಾರಿ ಲಾಭವುಂಟು. ಜೊತೆಗೆ ತಿನ್ನುವುದಕ್ಕೂ ಹಿತ ಹಾಗೂ ರುಚಿಕರವಾಗಿರುತ್ತದೆ.