ಘಮ ಘಮಿಸುವ ತರಕಾರಿ ಪಲಾವ್!!

0
5017

ಬೇಕಾಗುವ ಸಾಮಗ್ರಿಗಳು:

  • 2 ಕಪ್ ಬಾಸುಮತಿ ಅಕ್ಕಿ
  • 1/4 ಕಪ್ ಎಣ್ಣೆ ಮತ್ತು ತುಪ್ಪದ ಮಿಶ್ರಣ
  • 2 ಕತ್ತರಿಸಿದ ಈರುಳ್ಳಿ
  • 2 ಕಪ್ ತರಕಾರಿ (ಕ್ಯಾರೆಟ್, ಬೀನ್ಸ್, ಹೂಕೋಸು ಮತ್ತು ಬಟಾಣಿಗಳನ್ನು ಬಳಸಿ)
  • ಉಪ್ಪು ರುಚಿಗೆ ತಕ್ಕಷ್ಟು.

ಗ್ರೇವಿ ತಯಾರಿಕೆ ಸಾಮಾಗ್ರಿ:

  • 2 ಟೊಮೇಟೊ
  • 3 ಲವಂಗ, ಬೆಳ್ಳುಳ್ಳಿ
  • 1/2 ಶುಂಠಿ
  • ಕೊತ್ತಂಬರಿ ಸೊಪ್ಪು
  • 1 ಹಸಿರು ಮೆಣಸು
  • 1/4 ಕಪ್ ತುರಿದ ತೆಂಗಿನಕಾಯಿ

ಮಾಡುವ ವಿಧಾನ:

ಅಕ್ಕಿಯನ್ನು 30 ನಿಮಿಷ ನೀರಿನಲ್ಲಿ ನೆನೆಯಿಸಿಡಿ. ಗ್ರೇವಿ ತಯಾರಿಕೆಯ ಸಾಮಾಗ್ರಿಗಳನ್ನು ಅರೆಯಿರಿ. ಎಣ್ಣೆ ಮತ್ತು ತುಪ್ಪವನ್ನು ಪ್ರೆಸರ್ ಕುಕ್ಕರ್ಗೆ ಹಾಕಿ. ಇದಕ್ಕೆ ಈರುಳ್ಳಿಯನ್ನು ಸೇರಿಸಿ ಕರಿಯಿರಿ. ನಂತರ ಗ್ರೇವಿಯನ್ನು ಸೇರಿಸಿ ಚೆನ್ನಾಗಿ 2 ನಿಮಿಷ ಕಲಕಿ. ತರಕಾರಿಯನ್ನು ಸೇರಿಸಿ, ಅವು ತರಕಾರಿಗೆ ಸೇರಿಕೊಂಡಿದೆಯೇ ನೋಡಿ. ಚೆನ್ನಾಗಿ ಕಲಕಿ. ಸ್ವಲ್ಪ ಸಮಯದ ನಂತರ ಅಕ್ಕಿಯನ್ನು ಹಾಕಿ ಚೆನ್ನಾಗಿ ಕಲಸಿ. (ಹೀಗೆ ಮಾಡುವುದರಿಂದ ಪಲಾವ್ ಅನ್ನ ಗರಿಗರಿಯಾಗುತ್ತದೆ) ಕೊನೆಗೆ ನೀರು(1 ಕಪ್ ಅಕ್ಕಿಗೆ 2 ಕಪ್ ನೀರು), ಉಪ್ಪು ಸೇರಿಸಿ. ಬೇಯಿಸಿ.ಬೆಂಕಿಯನ್ನು ಕಡಿಮೆ ಮಾಡಿ ಅಕ್ಕಿ ಬೇಯುವ ತನಕ ಬೇಯಿಸಿ. ಅಲಂಕಾರಕ್ಕಾಗಿ ಕೊತ್ತಂಬರಿ ಸೊಪ್ಪನ್ನು ಬಳಸಿ. ನಿಮ್ಮ ಅಡುಗೆಯನ್ನು ಇನ್ನೂ ರುಚಿಯಾಗಿಸಲು ಗೋಡಂಬಿಯನ್ನು ಕೊನೆಗೆ ಸೇರಿಸಿ. ನಂತರ ತೆಗೆದುನೋಡಿ ಘಮ ಘಮಿಸುವ ಪಲಾವ್ ರೆಡಿ.