ಕೈಯಲ್ಲಿ ಭೂತ, ಭವಿಷ್ಯ, ವರ್ತಮಾನ ಅಡಗಿದೆ ಎಂಬುದು ನಿಮಗೆ ಗೊತ್ತೇ?

0
6893

ಹಸ್ತವನ್ನು ಅಧ್ಯಯನ ಮಾಡುವ ಮೂಲಕ ವ್ಯಕ್ತಿಯ ಗುಣ ಲಕ್ಷಣಗಳನ್ನು ಗುರುತಿಸುವ, ಭವಿಷ್ಯ ನುಡಿಯುವ ಕಲೆ, ಇದನ್ನು ಹಸ್ತದ ಓದು ಅಥವಾ ಕೈರೋಲಜಿ ಎಂದು ಕೂಡಾ ಕರಯಲಾಗುತ್ತದೆ. ಅನೇಕ ಸಾಂಸ್ಕೃತಿಕ ಭಿನ್ನತೆಗಳೊಂದಿಗೆ ಈ ಪದ್ಧತಿ ಜಗತ್ತಿನಾದ್ಯಂತ ಕಾಣಸಿಗುತ್ತದೆ. ಹಸ್ತ ಸಾಮುದ್ರಿಕ ಶಾಸ್ತ್ರವನ್ನು ರೂಢಿಮಾಡಿಕೊಂಡಿರುವವರನ್ನು ಸಾಮಾನ್ಯವಾಗಿ ಹಸ್ತ ಸಾಮುದ್ರಿಕರು, ಹಸ್ತ ಓದುಗರು, ಕೈ ಓದುಗರು, ಹಸ್ತ ವಿಶ್ಲೇಷಕರು, ಅಥವಾ ಕೈರೊಲೊಜಿಸ್ಟ್‌ಗಳು ಎಂದು ಕರೆಯಲಾಗುತ್ತದೆ.

ಹಸ್ತರೇಖೆ ನೋಡಿ ಭೂತ, ಭವಿಷ್ಯ ವರ್ತಮಾನಗಳನ್ನೂ ಹೇಳುವ ಹಲವು ಪಂಡಿತರಿದ್ದಾರೆ. ಇದನ್ನು ಕೈ ನೋಡಿಯೇ ಹೇಳಬೇಕಾಗುತ್ತದೆ. ಹಾಗೂ ಪ್ರತಿಯೊಬ್ಬರ ಹಸ್ತರೇಖೆಯೂ ಇನ್ನೊಬ್ಬರಿಗಿಂತ ಭಿನ್ನವಾಗಿರುತ್ತದೆ. ಹಾಗಾಗಿ ಪ್ರತಿಯೊಬ್ಬರ ಭೂತ, ಭವಿಷ್ಯ, ವರ್ತಮಾನಗಳೂ ಬೇರೆಬೇರೆಯಿರುತ್ತದೆ. ಆದರೆ ಹಸ್ತರೇಖೆ ವಿಜ್ಞಾನದಲ್ಲಿ ಆಳ ಅಭ್ಯಾಸ ಮಾಡಿದವರು ಮಾತ್ರ ಭೂತ, ಭವಿಷ್ಯ ಹಾಗೂ ವರ್ತಮಾನಗಳನ್ನು ನಿಖರವಾಗಿ ಹೇಳಬಲ್ಲರು. ಆದರೆ ಸರಿಯಾದ ಜ್ಞಾನವಿಲ್ಲದೆ, ಹಸ್ತರೇಖೆಯಿಂದ ಭವಿಷ್ಯ ತಿಳಿಯಲು ಸಾಧ್ಯವಿಲ್ಲ.

ಹಸ್ತ ರೇಖೆಯ ಬಗ್ಗೆ ಒಂದು ಪರಿಚಯ ಇಲ್ಲಿದೆ ನೋಡಿ

ಯಶಸ್ಸಿನ ರೇಖೆ

13445608_1111112185599080_1256050591953806192_n

ನಿಮ್ಮ ಉಂಗುರದ ಬೆರಳಿನಿಂದ ಕೆಳಗೆ ಸಾಗುವ ಈ ರೇಖೆಯು ಹಣದ ರೇಖೆಯೆಂದು ಗುರುತಿಸಲ್ಪಟ್ಟಿದೆ. ಸಣ್ಣ ರೇಖೆಗಳು ನೀವು ಹಣದ ಜೊತೆಗೆ ಆಳವಾದ ಸಂಬಂಧವನ್ನು ಹೊಂದಿದ್ದೀರಿ ಎಂದು ತೋರಿಸುತ್ತದೆ. ಉದ್ದವಾದ ರೇಖೆಗಳು ನಿಮಗೆ ಹಣ ಮುಖ್ಯ ಮತ್ತು ನೀವು ಸಮಯವನ್ನು ಸಹ ಉಳಿಸುತ್ತೀರಿ ಎಂದು ಸೂಚಿಸುತ್ತದೆ. ಹಣದ ರೇಖೆಗಳು ಹೆಚ್ಚಾಗಿದ್ದಲ್ಲಿ ನೀವು ಹಣವನ್ನು ಸಿಕ್ಕಾಪಟ್ಟೆ ಖರ್ಚು ಮಾಡುತ್ತೀರಿ ಎಂದು ತಿಳಿಸುತ್ತದೆ.

ಜೀವನದ ರೇಖೆ

13423746_1111112182265747_7530567905071910193_n

ಈ ರೇಖೆಯು ಒಬ್ಬ ವ್ಯಕ್ತಿಯ ದೈಹಿಕ ಸಾಮರ್ಥ ಮತ್ತು ಹುರುಪಿನ ಕುರಿತಾಗಿ ತಿಳಿಸುತ್ತದೆ. ಈ ರೇಖೆಯು ನಿಮ್ಮ ಆರೋಗ್ಯದ ಸ್ಥಿತಿಯನ್ನು ಕುರಿತು ತಿಳಿಸುತ್ತದೆ. ಜೊತೆಗೆ ನೀವು ವಾಸಿಸುವ ಪರಿಸರದ ಬದಲಾವಣೆಯನ್ನು ಸಹ ನಾವು ಈ ರೇಖೆಯಿಂದ ಗುರುತಿಸಬಹುದು. ದಪ್ಪಗಿರುವ ರೇಖೆಯು ಉತ್ತಮ ಆರೋಗ್ಯವನ್ನು ಪ್ರತಿಬಿಂಬಿಸುತ್ತದೆ, ಅರ್ಧಂಬರ್ಧ ಇರುವ ರೇಖೆಯು ನೀವು ಒತ್ತಡದಲ್ಲಿದ್ದೀರಿ,ಗಾಯಗೊಂಡಿದ್ದೀರಿ ಅಥವಾ ರೋಗರುಜಿನಗಳಿಗೆ ತುತ್ತಾಗಿದ್ದೀರಿ ಎಂದು ತಿಳಿಸುತ್ತದೆ.

ಕಂಕಣದ ರೇಖೆ

13419114_1111112188932413_5901039074726346046_n

ನಿಮ್ಮ ಕೈ ಮಣಿಕಟ್ಟಿನ ಬಳಿ ಕಂಕಣದಂತೆ ಕಾಣುವ ರೇಖೆಗಳು, ನೀವು ಹೊಂದಿರುವ ಹಣದ ಪ್ರಮಾಣವನ್ನು ಸೂಚಿಸುತ್ತವೆ. ಜೊತೆಗೆ ನೀವು ಎಷ್ಟು ಪ್ರಮಾಣದ ಹಣವನ್ನು ಪಡೆಯುವಿರಿ ಎಂದು ಸಹ ಇದರಿಂದ ತಿಳಿಯಬಹುದು. ಹೆಚ್ಚಿನ ರೇಖೆಗಳು ಹೆಚ್ಚಿನ ಹಣವನ್ನು ತಿಳಿಸುತ್ತವೆ.

ಮದುವೆ ರೇಖೆ

13466043_1111112235599075_5195572003375345457_n

ಹಸ್ತಸಾಮುದ್ರಿಕಾದಲ್ಲಿ ಅತಿ ಹೆಚ್ಚು ಚರ್ಚೆಗೊಳಗಾಗಿರುವ ರೇಖೆ ಎಂದರೆ ಇದೇ. ನಿಮ್ಮ ಜೀವನದಲ್ಲಿನ ಪ್ರಸಕ್ತ ಪ್ರೇಮದ ಸ್ಥಿತಿ ಗತಿಯ ಕುರಿತು ಇದು ತಿಳಿಸಿಕೊಡುತ್ತದೆ. ಈ ಭಾಗದಲ್ಲಿ ಹಲವಾರು ಸಣ್ಣ ಸಣ್ಣ ರೇಖೆಗಳು ಇದ್ದಲ್ಲಿ, ಅದು ನೀವು ಏಕಮುಖ ಪ್ರೇಮಿ ಎಂದು ತಿಳಿಸಿಕೊಡುತ್ತದೆ. ಒಡೆದ ತುದಿಯಿರುವ ರೇಖೆಗಳು ನಿಮ್ಮ ಮದುವೆಯು ವಿಚ್ಛೇಧನದಲ್ಲಿ ಅಂತ್ಯವಾಗುತ್ತದೆ ಎಂದು ತಿಳಿಸುತ್ತದೆ. ಪರಸ್ಪರ ಒಂದರ ಮೇಲೆ ಒಂದು ಹೋಗುವಂತಹ ರೇಖೆಗಳು ನೀವು ಒಬ್ಬ ಸರಿಯಾದ ಸಂಗಾತಿಗಾಗಿ ಹುಡುಕುತ್ತಿದ್ದೀರಿ ಎಂದು ತಿಳಿಸುತ್ತಿದೆ. ಒಂದು ವೇಳೆ ನಿಮಗೆ ಮದುವೆ ರೇಖೆಯು ಇಲ್ಲದಿದ್ದಲ್ಲಿ ಗಾಬರಿಯಾಗಬೇಡಿ. ಅದು ನಿಮಗೆ ಮದುವೆಯಾಗುವ ಆಲೋಚನೆ ಸದ್ಯಕ್ಕೆ ಇಲ್ಲ ಎಂದು ತಿಳಿಸುತ್ತದೆ.

ಸಂತೋಷದ ರೇಖೆ

13418729_1111112215599077_492051671258721664_n

ಕೆಲವೊಂದು ಅಪರೂಪದ ಹಸ್ತಗಳಲ್ಲಿ ಮೀನಿನ ಆಕಾರದ ವಿನ್ಯಾಸವಿರುವ ರೇಖೆಗಳು ಕಾಣಿಸಿಕೊಳ್ಳುತ್ತವೆ. ಇದು ನಿಮಗೆ ಜೀವನದಲ್ಲಿರುವ ಸಂತೋಷವನ್ನು ತಿಳಿಸುತ್ತವೆ.

ತೆಲೆ ರೇಖೆ

13419082_1111112232265742_8462029016326876509_n

ಈ ತಲೆ ರೇಖೆಯು ಬುದ್ಧಿವಂತಿಕೆ ಮತ್ತು ಆಲೋಚನಾ ಕ್ರಮದ ಕುರಿತಾಗಿ ತಿಳಿಸಿಕೊಡುತ್ತದೆ. ಇದು ಕಲ್ಪನೆಯನ್ನು ಸಹ ಒಳಗೊಂಡಿರುತ್ತದೆ. ಒಂದು ವೇಳೆ ಈ ರೇಖೆಯು ಜೀವನ ರೇಖೆಯ ಮೇಲೆ ಇದ್ದಲ್ಲಿ, ಅದು ನಿಮ್ಮ ಆಲೋಚನೆಯಲ್ಲಿ ಒಳ್ಳೆಯ ಸಮತೋಲನ ಇದೆ ಎಂದು ಸೂಚಿಸುತ್ತದೆ. ಉದ್ದವಾದ ಮತ್ತು ವಿಸ್ತರಿಸಲ್ಪಟ್ಟ ತಲೆ ಗೆರೆಯು ನಿಮ್ಮ ಮನಸ್ಸನ್ನು ಇತರರು ನಿಯಂತ್ರಿಸುತ್ತಾರೆ ಎಂದು ಸೂಚಿಸುತ್ತದೆ. ನಿಮ್ಮ ಜೀವನದಲ್ಲಿ ಅವರೇ ನಿರ್ಧಾರಗಳನ್ನು ತೆಗೆದುಕೊಳ್ಳುವವರು ಎಂದು ಸಹ ಸೂಚಿಸುತ್ತದೆ. ಈ ರೇಖೆಗಳು ಎರಡು ಅಥವಾ ಅದಕ್ಕಿಂತ ಹೆಚ್ಚಾಗಿ ಇದ್ದಲ್ಲಿ, ನೀವು ನಿಮಗೆ ನೀವೇ ಸಾಟಿ ಎನ್ನುವಂತಹ ಒಬ್ಬ ವ್ಯಕ್ತಿ ಎಂದು ಸೂಚಿಸುತ್ತದೆ. ನಿಮ್ಮ ಆಲೋಚನೆಗಳು, ಸೃಜನಶೀಲತೆ ಇತ್ಯಾದಿಗಳಲ್ಲಿ ನಿಮಗೆ ನೀವೇ ಸಾಟಿ.

ವಿಧಿ ರೇಖೆ   

13427970_1111112252265740_5400156532025264121_n

ಈ ವಿಧಿ ರೇಖೆಯು ನಿಮ್ಮ ಪ್ರಸ್ತುತ ವಿಧಿಯ ಕುರಿತಾಗಿ ತಿಳಿಸುತ್ತದೆ. ದಪ್ಪಗಿರುವ ರೇಖೆಯು ನಿಮ್ಮ ಜೀವನದಲ್ಲಿ ಉಂಟಾಗುತ್ತಿರುವ ನಾಟಕೀಯ ಬದಲಾವಣೆಗಳನ್ನು ಸೂಚಿಸುತ್ತದೆ. ತೆಳುವಾದ ರೇಖೆಯು ನಿಮ್ಮ ಜೀವನವನ್ನು ಇತರರು ನಿಯಂತ್ರಿಸುತ್ತಿದ್ದಾರೆ ಎಂದು ಸೂಚಿಸುತ್ತದೆ. ಎರಡು ಅಥವಾ ಹೆಚ್ಚಿನ ರೇಖೆಗಳು ನಿಮ್ಮ ಜೀವನದಲ್ಲಿ ನೀವು ಬುದ್ಧಿವಂತರು ಮತ್ತು ಜನಪ್ರಿಯರು ಸಹ ಆಗಿದ್ದೀರಿ ಎಂದು ತಿಳಿಸುತ್ತದೆ.