ಒಂದೇ ದಿನದಲ್ಲಿ ಪಾನ್ ಬೀಡಾ ವ್ಯಾಪಾರಿ ಕೋಟ್ಯಾಧಿಪತಿಯಾದ !!

0
1546

ತಮಾಷೆ ಮಾಡ್ತಿಲ್ಲ, ಇದು ಪಪ್ಪು ಕುಮಾರ್ ತಿವಾರಿ ಎಂಬ ಬೀದಿ ಬದಿಯಲ್ಲಿ ಪಾನ್ ಬೀಡಾ ಮಾರಾಟ ಮಾಡುವ ವ್ಯಾಪಾರಿಯೊಬ್ಬನ ಕತೆ. ಈತನ ಬ್ಯಾಂಕ್ ಖಾತೆಯಲ್ಲಿ ಬರೋಬ್ಬರೀ 10 ಕೋಟಿ ರು ಹಣ ಜಮೆಯಾಗಿದೆ. ಹೇಗೆ ಅಂತ ಸ್ವತಃ ಅವನಿಗೆ ಗೊತ್ತಿಲ್ಲ !!

ಘಟನೆಯ ವಿವರ :

ಜಾರ್ಖಂಡ್ ನ ಉತ್ತರ ಗಿರಿದ್ ಜಿಲ್ಲೆಯ ಪಪ್ಪು ಕುಮಾರ್ ತಿವಾರಿ ತನ್ನ ಖಾತೆಯಿಂದ 1 ಸಾವಿರ ರೂ ಹಣ ಡ್ರಾ ಮಾಡಲು ತೆರಳಿದ್ದಾನೆ. ಈ ವೇಳೆ ಹಣ ಆತನಿಗೆ ಸಿಕ್ಕಿಲ್ಲ, ಈ ಸಂಬಂಧ ಸ್ಥಳೀಯ ಎಸ್ ಬಿಐ ಬ್ಯಾಂಕ್ ಗೆ ತೆರಳಿ ಹಣ ಡ್ರಾ ಮಾಡಲು ಆಗುತ್ತಿಲ್ಲ ಏಕೆ ಎಂದು ಪ್ರಶ್ನಿಸಿದ್ದಾನೆ. ನನ್ನ ಖಾತೆಯಲ್ಲಿ 4,850 ರೂ ಹಣ ಇದೆ ಅದರಲ್ಲಿ ನನಗೆ 1 ಸಾವಿರ ರು ಹಣದ ಅಗತ್ಯವಿದೆ, ಆದರೆ ಡ್ರಾ ಮಾಡಲು ಆಗುತ್ತಿಲ್ಲ ಎಂದು ತಿಳಿಸಿದ್ದಾನೆ.

ಈ ವೇಳೆ ವಿಚಾರಣೆ ನಡೆಸಿದ ಬ್ಯಾಂಕ್ ಅಧಿಕಾರಿಗಳು ಆತನ ಖಾತೆಯಲ್ಲಿದ್ದ ಹಣ ನೋಡಿ ಆಘಾತಗೊಂಡಿದ್ದಾರೆ. ಯಾಕೆ ಅಂತೀರಾ ಖಾತೆಯಲ್ಲಿ ಇದ್ದದ್ದು ಒಂದು ಸಾವಿರ ಅಲ್ಲ ಬದಲಾಗಿ ಹತ್ತು ಕೋಟಿ. ಇದನ್ನು ತಿಳಿದ ಆತ ಕೂಡ ಅಷ್ಟೊಂದು ಹಣ ಎಲ್ಲಿಂದ ಬಂತು ಎಂದು ತಿಳಿಯದೇ ಕಂಗಲಾಗಿದ್ದಾನೆ. ಇದರ ಬಗ್ಗೆ ವಿಚಾರಿಸಿದಾಗ “ನಾನು ಒಬ್ಬ ಸಾಮಾನ್ಯ ಪಾನ್ ಮಾರಾಟಗಾರ, ಬೆಳಗ್ಗಿನಿಂದ ರಾತ್ರಿ 10 ಗಂಟೆವರೆಗೆ ಕೆಲಸ ಮಾಡುತ್ತೇನೆ, ಈ ಹಣ ಎಲ್ಲಿಂದ ಬಂತು ಹೇಗೆ ಬಂತನ ಎಂದು ನನಗೆ ತಿಳಿದಿಲ್ಲ, ನನ್ನ ಖಾತೆಯಲ್ಲಿ ಒಂದೂವರೆ ಲಕ್ಷಕ್ಕಿಂತ ಹೆಚ್ಚಿನ ಹಣ ಯಾವತ್ತೂ ಇರಲಿಲ್ಲ, ನಾನು ಮತ್ತು ನನ್ನ ಕುಟುಂಬದವರು ಈ ಹಣದ ಬಗ್ಗೆಯೇ ಚಿಂತಿತರಾಗಿದ್ದೇವೆ, ರಾತ್ರಿಯಲ್ಲಿ ನಮಗೆ ನಿದ್ದೆ ಬರುತ್ತಿಲ್ಲ, ಕಷ್ಟಪಡದೇ ರಾತ್ರೋರಾತ್ರಿ ನಾನು ಶ್ರೀಮಂತನಾಗುವುದು ನನಗೆ ಇಷ್ಟವಿಲ್ಲ ” ಎಂದು ಹೇಳಿದ್ದಾನೆ.

ಪೊಲೀಸ್ ವರದಿ :

ಸದ್ಯಕ್ಕೆ ಹೈದರಾಬಾದ್ ನ ಸೈಬರ್ ಕ್ರೈಮ್ ಅಧಿಕಾರಿಗಳು ಆತನ ಅಕೌಂಟ್ ಬ್ಲಾಕ್ ಮಾಡಿದ್ದಾರೆ. ಹಣ ಎಲ್ಲಿಂದ ಡೆಪಾಸಿಟ್ ಆಯಿತು ಎಂಬುದರ ಬಗ್ಗೆ ಸೈಬರ್ ಕ್ರೈಮ್ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 500 ಹಾಗೂ 1.000 ರು ಮುಖ ಬೆಲೆಯ ನೋಟುಗಳನ್ನು ನಿಷೇದಿಸಿರುವ ಹಿನ್ನೆಲೆಯಲ್ಲಿ ತಮ್ಮ ಕಪ್ಪು ಹಣವನ್ನು ಬಚ್ಚಿಡಲು ಯಾರೋ ಈ ಕೃತ್ಯ ನಡೆಸಿದ್ದಾರೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ.