ಪಂಚ ತತ್ವ ಲಿಂಗಗಳ ಪರಿಚಯ

0
892

ಕ್ರಮಶಹ ಪೃಥ್ವಿಲಿಂಗ, ಜಲಲಿಂಗ, ತೇಜೋಲಿಂಗ, ವಾಯುಲಿಂಗ ಹಾಗೂ ಆಕಾಶ ಲಿಂಗಗಳಾಗಿ ಸಂಯುಕ್ತ ರೂಪದಲ್ಲಿ ಪಂಚ ತತ್ವ ಲಿಂಗಗಳೆಂದು ಕರೆಯುತ್ತಾರೆ. ಪೃಥ್ವಿ, ಜಲ, ವಾಯು, ಆಕಾಶ ತತ್ವ ಲಿಂಗಗಳೆಂದು ಕರೆಯುತ್ತಾರೆ. ಪೃಥ್ವಿ, ಜಲ, ವಾಯು, ಆಕಾಶ, ಅಗ್ನಿ, ಇವುಗಳು ಪಂಚ ತತ್ವಗಳಾಗಿವೆ. ಈ ಪಂಚತತ್ವ ಲಿಂಗಗಳ ಪರಿಚಯ ಇಲ್ಲಿದೆ.

1)ಏಕಾಮ್ರೇಶ್ವರ

ತಮಿಳುನಾಡಿನ ಕಂಚಿಯಲ್ಲಿರುವ ಏಕಾಮ್ರೇಶ್ವರ (ಕ್ಷಿತಿಲಿಂಗ) ಶಿವ ಮಂದಿರವು ಪ್ರಖ್ಯಾತವಾಗಿದೆ. ಈ ಮಂದಿರವು ಸರ್ವತೀರ್ಥವೆಂಬ ಸರೋವರದ ಮೂಲಕ ಅಷ್ಟ ಮೂರ್ತಿಗಲ ಪ್ರಥಮ ರೂಪದ ದರ್ಶನ ಪೂಜೆ ಮಾಡಲಾಗುತ್ತದೆ.

ವಿಶೇಷತೆ: ಈ ಮಂದಿರ ವಿಶೇಷತೆಯೆಂದರೆ ಶಿವಲಿಂಗಕ್ಕೆ ನೀರಿನ ಅಭಿಷೇಕ ಮಾಡುವುದಿಲ್ಲ. ಬಳಲಿಗೆ ಮಲ್ಲಿಗೆಯ ಸುಗಂಧಿತ ತೈಲದಿಂದ ಅಭಿಷೇಕ ಮಾಡುತ್ತಾರೆ.

2)ಕಾಳಹಸ್ತಿಯ ಕಾಳಹಸ್ತೀಶ್ವರ

ಆಂಧ್ರಪ್ರದೇಶದ ತಿರುಪತಿಯಿಂದ ಸುಮಾರು 14 ಕಿ.ಮೀ ದೂರದಲ್ಲಿ ಸ್ವರ್ಣಮುಖಿ ನದಿ ತೀರದಲ್ಲಿ ಕಾಳಹಸ್ತೀಶ್ವರನ ದೇವಾಲಯವಿದೆ. ಈ ದೇವಾಯಲವು 12ನೇ ಶತಮಾನದಲ್ಲಿ ಚೋಳರಾಜನಿಂದ ನಿರ್ಮಿತವಾಗಿದೆ ಎಂದು ತಿಳಿದುಬಂದ ಇತಿಹಾವಿದೆ. ಈ ದೇವಾಲಯವು ಸುಂದರವಾಗಿ ನಿರ್ಮಿತವಾಗಿದೆ. ಸುಂದರವಾಗಿ ನಿರ್ಮಿತವಾಗಿದ್ದರೂ ದೇವಾಲಯದ ಒಳಭಾಗ ಕತ್ತಲಿನಿಂದ ಕೂಡಿದ್ದು, ಬೆಳಕಿನ ಕೊರತೆಯಿದೆ. ದೀಪದ ಬೆಳಕಿನಲ್ಲಿ ಮಾತ್ರ ಪರಶಿವನಾದ ಕಾಳಹಸ್ತೇಶ್ವರ ದರ್ಶನ ಮಾಡಲು ಸಾಧ್ಯವಾಗುತ್ತದೆ.

ಶ್ರೀ ಕಾಳಹಸ್ತೀಶ್ವರನೆಂಬ ಹೆಸರು ಬರಲು ಕಾರಣ: ಹಿಂದೆ ಜೇಡ (ಶ್ರೀ) ಸರ್ಪ (ಕಾಲ) ಹಾಗೂ (ಹಸ್ತಿ) ಇವುಗಳು ಶಿವನ ಪೂಜೆ ಮಾಡುತ್ತಿದ್ದುವೆಂದು ಹೇಳುತ್ತಾರೆ. ಆದುದರಿಂದ ಇಲ್ಲಿನೆಲೆಯಾಗಿರುವ ಶಿವನಿಗೆ ಕಾಳ ಹಸ್ತೀಶ್ವರ ಎಂಬ ಹೆಸರು ಬಂದಿದೆ. ಪರಮ ಭಕ್ತ ಶಿರೋಮಣಿಯಾದ ಕಣ್ಣಪ್ಪನು ಪರಮಶಿವನಿಗೆ ತನ್ನ ಕಣ್ಣುಗಳನ್ನು ಕಿತ್ತು ಸಮರ್ಪಿಸಿದ್ದನು.

ವಾಯುತತ್ವ: ಇಲ್ಲಿ ಪರಶಿವನು ವಾಯುವಿನ ರೂಪದಲ್ಲಿರುವನೆಂದು ಪ್ರತೀತಿಯಿದೆ. ಆದುದರಿಂದಲೇ ಇಲ್ಲಿ ವಾಯುತತ್ವ ಧಾರಣೆ ಮಾಡಿರುವ ಶಿವನ ಉಗ್ರ ಮೂರ್ತಿಯನ್ನು ಪೂಜಿಸಲಾಗುತ್ತದೆ.

3)ಆಕಾಶ ತತ್ವದ ಲಿಂಗ (ನಟರಾಜ)

ಪಂಚ ತತ್ವಗಳಲ್ಲಿ ಆಕಾಶ ತತ್ವದ ಮಂದಿರವು ತಮಿಳುನಾಡಿನ ಚಿದಂಬರಂನಲ್ಲಿದೆ. ಇಲ್ಲಿ ನಟರಾಜ ಮೂರ್ತಿ ಇದೆ. ಈ ನಟರಾಜ ವಿಗ್ರಹದ ಬಲಭಾಗದಲ್ಲಿ ಗೋಡೆಯ ಮೇಲೆ ಒಂದು ಯಂತ್ರವಿದೆ. ಅಲ್ಲಿ ಮಾಲೆಗಳು ಜೋತಾಡುತ್ತವೆ. ಇಲ್ಲಿ ನೀಲಿ ಬಣ್ಣದ ಶೂನ್ಯ ಆಕಾರ ಕಾಣಿಸುತ್ತದೆ. ಅದೇ ಆಕಾಶ ಲಿಂಗ, ಆಕಾಶದಲ್ಲಿ ಭಗವಾನ್ ಪರಶಿವನ ಅಷ್ಟ ಮೂರ್ತಿಗಳಲ್ಲಿ ಭೀಮ ಮೂರ್ತಿಯ ಪೂಜೆ ನಡೆಯುತ್ತದೆ.

4)ಜಂಬುಲಿಂಗೇಶ್ವರ

ತಮಿಳುನಾಡಿನ ತಿರುಚಿರಾಪಳ್ಳಿಯ ಶ್ರೀರಂಗಂನಿಂದ ಸ್ವಲ್ಪ ದೂರದಲ್ಲೇ ಜಂಬುಕೇಶ್ವರ ಮಂದಿರವಿದೆ. ಈ ಮಂದಿರವು ಏಳು ಗೋಪುರಗಳಿಂದ ಕೂಡಿದ್ದು, ಇಲ್ಲಿನ ಶಿವಲಿಂಗದ ಕೆಳಭಾಗದಿಂದ ನೀರು ಜಿನುಗುತ್ತದೆ. ಆದುದರಿಂದ ಈ ಲಿಂದವನ್ನು ಜಲ ತತ್ವ ಲಿಂಗ ಎಂದು ಕರೆಯುತ್ತಾರೆ. ಇಲ್ಲಿ ಭವಮೂರ್ತಿಯ ಉಪಾಸನೆ ನಡೆಯುತ್ತಿರುತ್ತದೆ.

5) ಅರುಣಾವಲೇಶ್ವರ

ತಮಿಳುನಾಡಿನ ತಿರುವಣ್ಣಾಮಲೈಯಲ್ಲಿ ಅರುಣಾಚಲೇಶ್ವರನ ವಿಶಾಲವಾದ ಮಂದಿರವಿದೆ. ಇಲ್ಲಿ ಪರಶಿವನ ಅಷ್ಟ ಮೂರ್ತಿಗಳಲ್ಲಿ ಅಗ್ನಿ ಧಾರಣ ಮಾಡುವ ರುದ್ರಮೂರ್ತಿಯ ಉಪಾಸನೆಯ ನಡೆಯುತ್ತದೆ. ವಿಶೇಷವಾಗಿ ಇಲ್ಲಿ ಕಾರ್ತಿಕ ಹುಣ್ಣಿಮೆಯ ದಿನ ಬ್ರಹ್ಮೋತ್ಸವ ನಡೆಯುತ್ತದೆ.

ಇಲ್ಲಿ ಪಾರ್ವತಿ ದೇವಿಯು ಕೊಂಚ ಕಾಲ ಪರಶಿವನನ್ನು ಕುರಿತು ತಪಸ್ಸು ಮಾಡಿದ್ದಳೆಂದು ತಿಳಿದುಬರುತ್ತದೆ ಪಾರ್ವತಿಯ ಕುರಿತು ತಪಸ್ಸಿನ ಶಕ್ತಿಯಿಂದ ಅರುಣಾಚಲ ದೇವಾಲವು ಚೋಳರಿಂದ ನಿರ್ಮಿತವಾದುದೆಂದು ಇತಿಹಾಸದಿಂದ ತಿಳಿದುಬರುತ್ತದೆ.