ಪಂಚಾಯಿತಿಯಲ್ಲೇ ಇದೆ 100 ಸೌಲಭ್ಯ

1
4772

ಗ್ರಾಮೀಣ ಭಾಗದ ಜನರಿಗೆ ಪಹಣಿ, ಜಾತಿ ಪ್ರಮಾಣ ಪತ್ರ, ಬೆಳೆ ದೃಢೀಕರಣ ಸೇರಿದಂತೆ ನಾನಾ ಇಲಾಖೆಗಳ 100 ಸೇವೆಗಳು ‘ಪಂಚಾಯತಿ-100 ಬಾಪೂಜಿ ಸೇವಾ ಕೇಂದ್ರ’ಹೆಸರಿನಲ್ಲಿ ಸ್ಥಳೀಯ ಗ್ರಾಮ ಪಂಚಾಯತಿ ಕೇಂದ್ರಗಳಲ್ಲೇ ಸಿಗಲಿವೆ. ಈ ಬಗ್ಗೆ ಒಂದಿಷ್ಟು ಮಾಹಿತಿ ಇಲ್ಲಿದೆ.

*ಏನಿದು 100 ಬಾಪೂಜಿ ಕೇಂದ್ರ

ಜನರು ತಮಗೆ ಬೇಕಿರುವ ಅಗತ್ಯ ದಾಖಲೆಗಳನ್ನು ಪಡೆಯಲು ತಾಲೂಕು ಕಚೇರಿ, ನಾಡಕಚೇರಿಗಳಿಗೆ ಅಲೆದಾಡುವುದನ್ನು ತಪ್ಪಿಸಿ, ಅವುಗಳು ಸ್ಥಳೀಯ ಗ್ರಾಮ ಪಂಚಾಯಿತಿಗಳಲ್ಲೇ ದೊರೆಯುವಂತೆ ಮಾಡಿರುವ ಸೇವೆಗೆ ‘ಪಂಚಾಯಿ- 100 ಬಾಪೂಜಿ ಸೇವಾ ಕೇಂದ್ರ’ ಎಂದು ಹೆಸರಿಡಲಾಗಿದೆ. ಈ ಸೇವೆ ಈಗಾಗಲೇ ಜುಲೈ 1 ರಿಂದ 2 ಸಾವಿರ ಗ್ರಾ.ಪಂ.ಗಳಲ್ಲಿ ಸೇವೆಗೆ ಚಾಲನೆ ನೀಡಲಾಗಿದೆ. ಒಟ್ಟು 100 ಸೇವೆಗಳು ಲಭ್ಯವಾಗಲಿವೆ.

*ಕಂದಾಯ ಸೇವೆ ಹೇಗೆ?

ಸಾರ್ವಜನಿಕ ಕೋರಿಕೆ ಸ್ವೀಕರಿಸುವ ಸೇವಾ ಕೇಂದ್ರಗಳು ಆ ಕೋರಿಕೆಯನ್ನು ನಾಡಕಚೇರಿಯು ದೃಢೀಕರಿಸಿದ ದಾಖಲೆಯನ್ನು ಪಮಚತಂತ್ರ ತಂತ್ರಾಂಶಕ್ಕೆ ವರ್ಗಾವಣೆ ಮಾಡಲಿದ್ದು ಬಳಿಕ ಆ ದಾಖಲೆಗಲನ್ನು ಅಪೇಕ್ಷಿತರಿಗೆ ಗ್ರಾಂ.ಪಂ.ಗಳಲ್ಲಿ ವಿತರನೆ ಮಾಡಲಾಗುವುದು.

*ಸೇವೆಗಳು ಯಾವುವು?

ಜಾತಿ. ಆದಾಯ, ವಾಸಸ್ಥಳ, ಗೇಣಿ ರಹಿತ, ಜೀವಂತ, ಬೇಸಾಯ ಕುಟುಂಬ ಸದಸ್ಯರ ದೃಢೀಕರಣ, ಜಮೀನು ಇಲ್ಲದಿರುವಿಕೆ, ನಿರುದ್ಯೋಗಿ, ಕೃಷಿ ಕಾರ್ಮಿಕ, ಭೂಹಿಡುವಳಿ ಪ್ರಮಾಣಪತ್ರ, ವಸತಿ, ಉದ್ಯೋಗದ ಉದ್ದೇಶಕ್ಕೆ ಆದಾಯ ದೃಢೀಕರಣ, ವಂಶವೃಕ್ಷ, ಬೆಳೆ, ಅಂಗವೈಕಲ್ಯ, ವಿಧವಾ ವೇತನ, ಸಧ್ಯಾ ಸುರಕ್ಷಾ, ರಾಷ್ಟ್ರೀಯ ಸಾಮಾಜಿಕ ಭದ್ರತಾ ಯೋಜನೆ, ವೃದ್ಧಪ್ಯ ವೇತನ, ಮೈತ್ರಿ, ಮನಸ್ವಿನಿ ಸೇರಿ ಒಟ್ಟು 40 ಸೇವೆ ಮತ್ತು ಸೌಲಭ್ಯಗಳಿಗೆ ಪ್ರಮಾಣಪತ್ರಗಳು ಈ ಕೇಂದ್ರದಲ್ಲಿ ಸಿಗಲಿವೆ.

*ಗ್ರಾಮೀಣಭಿವೃದ್ಧಿ ಸೇವೆ

ಕಟ್ಟಡ ನಿರ್ಮಾಣ ಪರವಾನಗಿ, ನೀರಿನ ಸಂಪರ್ಕಕ್ಕೆ ಅರ್ಜಿ, ಎಸ್ಕಾಂಗೆ ನಿರಾಕ್ಷೇಪಣೆ ಪತ್ರ, ವಸತಿ ಯೋಜನೆಗೆ ಅರ್ಜಿ, ಉಚಿತ ನಿವೇಶನ ಪಡೆಯಲು ಅರ್ಜಿ, ಆಸ್ತಿ ತೆರಿಗೆ ಪಾವತಿ, ಭೂಪರಿವರ್ತನೆ ಕೋರಿಕೆ ಅರ್ಜಿ, ನೀರಿನ ಶುಲ್ಕ ಪಾವತಿ, ಟ್ರೇಡ್ ಲೈಸನ್ಸ್ ನವೀಕರಣ, ಜಾಹಿರಾತು ಪರವನಾಗಿ, ವಿದ್ಯಾರ್ಥಿಗಳಿಗೆ ದೂರ ಪ್ರಮಾಣಪತ್ರ, ಬೀದಿದೀಪ ನಿರ್ವಹಣೆ ಸೇರಿ ಒಟ್ಟು 40 ಗ್ರಾಮೀಣವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಸೇವೆಗಳು ಈ ಕೇಂದ್ರಗಳಲ್ಲಿ ಸಿಗಲಿವೆ.

*ಬಿಲ್ ಮಾವತಿಗೂ ಅವಕಾಶ

ಜೀವ ವಿಮೆ, ವಾಹನ ವಿಮೆ, ವಿದ್ಯುತ್ ಬಿಲ್, ಮೊಬೈಲ್ ಮತ್ತು ಡಿಟಿಎಚ್ ರಿಚಾರ್ಜ್, ಬಸ್ – ರೈಲು- ವಿಮಾನ ಬುಕ್ಕಿಂಗ್, ಪಡಿತರ ಕಾರ್ಡ್ ಅರ್ಜಿ, ಆಧಾರ್ ಕಾರ್ಡ್ ತಿದ್ದುಪಡಿ, ಹಣ ವರ್ಗಾವನಣೆ, ವಿದ್ಯಾರ್ಥಿ ವೇತನಕ್ಕೆ ಅರ್ಜಿ ಸೇರಿ 17 ಸೇವೆಗಳೂ ಇಲ್ಲಿಸಿಗಲಿವೆ.