ಪಾನಿಯಲ್ಲಿ ಟಾಯ್ಲೆಟ್ ಕ್ಲೀನರ್ ಬಳಸಿದ್ದಕ್ಕೆ ಮಾರಾಟಗಾರನಿಗೆ 6 ತಿಂಗಳ ಜೈಲು ಶಿಕ್ಷೆ

0
770

ಅಹಮದಾಬಾದ್: ಪಾನಿಪೂರಿಯಲ್ಲಿ ಶೌಚಾಲಯ ಕ್ಲೀನರ್ ಮಿಶ್ರಣ ಮಾಡಿ ಪಾನಿಪೂರಿ ಮಾರಾಟ ಮಾಡುತ್ತಿದ್ದವನಿಗೆ ವಿಶೇಷ ಕೋರ್ಟ್ 6 ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಿದೆ. ಆರೋಗ್ಯಕ್ಕೆ ಗಂಭೀರ ಹಾನಿಯುಂಟು ಮಾಡುವ ಮಿಕ್ಸ್ ಮಾಡಿದ ಪರಿಣಾಮ ಕೋರ್ಟ್ ಸರಿಯಾದ ದಂಡನೆ ನೀಡಿದೆ.

ನಗರದ ಲಾಲ್ ದರ್ವಾಜ ಬಳಿ ಚೇತನ್ ನಂಜಿ ಎಂಬ ಪಾನಿಪೂರಿ ವ್ಯಾಪಾರಿ ತನ್ನ ಚಾಟ್ಸ್ ಐಟಂಗಳಲ್ಲಿ ಟಾಯ್ಲೆಟ್ ಕ್ಲೀನರ್ ಬಳಸುತ್ತಿದ್ದ. ಈ ಬಗ್ಗೆ ಅಹಮದಾಬಾದ್ ಮುನ್ಸಿಪಾಲ್ ಕಾರ್ಪೋರೇಷನ್’ಗೆ ಬಂದಿದ್ದ ದೂರು ಆಧರಿಸಿ ಪ್ರಯೋಗಾಲಯದಲ್ಲಿ ಪರೀಕ್ಷಿಸಿದಾಗ ಟಾಯ್ಲೆಟ್ ಕ್ಲೀನರ್’ನಲ್ಲಿರುವ ಒಕ್ಸಾಲಿಕ್ ಆಸಿಡ್ ಪತ್ತೆಯಾಗಿದೆ. 2009 ರಿಂದಲೂ ಈತ ಈ ಕೃತ್ಯ ಮಾಡುತ್ತಾ ಬಂದಿದ್ದಾನೆ.ವಿಚಾರಣೆ ನಡೆಸಿದ ನ್ಯಾಯಾಲಯವು 6 ತಿಂಗಳು ಶಿಕ್ಷೆ ವಿಧಿಸಿದೆ.

ಲಾಲ್ ದರ್ವಾಜಾ ಪ್ರದೇಶದ ನಿವಾಸಿಗಳು ಮಾರ್ವಾಡಿ ವಿರುದ್ಧ ದೂರು ನೀಡಿದ್ದರು. ಆತ ಪಾನಿಪೂರಿ ನೀರಿಗೆ ಶೌಚಾಲಯ ಕ್ಲೀನರ್ ಮಿಶ್ರಣ ಮಾಡುತ್ತಿರುವುದಾಗಿ ದೂರು ನೀಡಿದ್ದರು. ಈ ದೂರಿನ ಅನ್ವಯ ಮಾರ್ವಾಡಿ ವಿರುದ್ಧ ದೂರು ದಾಖಲಿಸಿದ್ದ ಎಎಂಸಿ ಪಾನಿಪೂರಿ ನೀರಿನ ಮಾದರಿಗಳನ್ನು ಆಹಾರ ಪರೀಕ್ಷೆ ಪ್ರಯೋಗಾಲಯಕ್ಕೆ ಕಳುಹಿಸಿತ್ತು. ಪರೀಕ್ಷೆಯಿಂದ ಆಘಾತಕಾರಿ ವಿಷಯವೊಂದು ತಿಳಿದುಬಂದಿದ್ದು, ಮಾರ್ವಾಡಿ ಪಾನಿಪೂರಿ ನೀರಿನ ಜತೆ ಆಕ್ಸಾಲಿಕ್ ಆಸೀಡ್ ಮಿಶ್ರಣ ಮಾಡಿರುವುದು ಬೆಳಕಿಗೆ ಬಂದಿತ್ತು. ಏಳು ವರ್ಷಗಳ ವಿಚಾರಣೆ ಬಳಿಕ ವಿಶೇಷ ಕೋರ್ಟ್ ಪಾನಿಪುರಿ ಮಾರಾಟಗಾರನಿಗೆ  ಆರು ತಿಂಗಳ ಜೈಲು ಶಿಕ್ಷೆ ವಿಧಿಸಿದೆ.