ಮನೆಯಲ್ಲೇ ಸುಲಭವಾಗಿ ತಯಾರಿಸಬಹುದಾದ ಪಾನಿ ಪೂರಿ

0
7228

ಬೇಕಾಗುವ ಸಾಮನು:

ಬೆಲ್ಲ, ಹುಣಸೆ, ಖರ್ಜುರ, ಜೀರಿಗೆ, ಜಲಜೀರ ಪುಡಿ, ಬೆಳ್ಳುಳ್ಳಿ, ಹಸಿರು ಮೆಣಸು, ಕೊತ್ತಂಬರಿ ಸೊಪ್ಪು, ಕಾಳು ಮೆಣಸು, ಲಿಂಬೆ, ಉಪ್ಪು, ಕಾರೆಟ್, ನೀರುಳ್ಳಿ, ಆಲೂ ಗೆಡ್ಡೆ, ಬಟಾಣಿ, ಅಂಗಡಿಯಿಂದ ತಂದ ಪೂರಿ.

ಸ್ವೀಟ್ ಮಾಡುವುದು ಹೇಗೆ?

ಕಪ್ ಬೆಲ್ಲ ಹಾಗು ೧/೨ ಕಪ್ ಹುಣಸೆ, ಸ್ವಲ್ಪ ಖರ್ಜುರ ಮೂರನ್ನು ಸೇರಿಸಿ, ತಕ್ಕ ಮಟ್ಟಿಗೆ ನೀರು ಹಾಕಿ ಕುದಿಸಿ. ಅದನ್ನು ಸೋಸಬೇಕು.

ಪಾನಿ ಮಾಡುವುದು ಹೇಗೆ?

1 ೧/2 ಚಮಚ ಜಲಜೀರ ಪುಡಿ( ಮನೆಯಲ್ಲಿ ತಯರಿಸಿದ್ದಾದರೆ ಉತ್ತಮ)
1 ಚಮಚ ಜೀರಿಗೆ
೪ ಹಸಿರು ಮೆಣಸು
೧ ಕೊತ್ತಂಬರಿ ಸೊಪ್ಪು
೫ ಬೆಳ್ಳುಳ್ಳಿ
೧ ಚಮಚ ನಿಂಬೆ ರಸ
೧/೨ ಚಮಚ ಕಾಳು ಮೆಣಸು
ಉಪ್ಪು ರುಚಿಗೆ ತಕ್ಕಷ್ಟು.

ಈ ಮೇಲಿನವುಗಳನ್ನು mixerನಲ್ಲಿ ತಿರುವಿ, ೭-೮ ಕಪ್ ನೀರು ಸೇರಿಸಿ, ಬಡಿಸುವ ೩ ಗಂಟೆ ಮುಂಚಿತವಾಗಿ ತಯಾರಿಸಬೇಕು.

೨ ದೊಡ್ಡ ಗಾತ್ರದ ಆಲೂ ಗೆಡ್ಡೆ ಹಾಗು ೧ ಕಪ್ ಬಟಾಣಿ – ಇವುಗಳನ್ನು cookerನಲ್ಲಿ ಬೇಯಿಸುವುದು.

೨ ಈರುಳ್ಳಿ, ಸ್ವಲ್ಪ ಕೊತ್ತಂಬರಿ ಸೊಪ್ಪು ಸಣ್ಣದಾಗಿ ಹೆಚಿಕೊಂಡಿರಬೇಕು.

ಬೇಯಿಸಿರುವ ಆಲೂ ಗೆಡ್ಡೆ ಹಾಗು ಬಟಾಣಿಯನ್ನು ಪೋರಿಯನ್ನು ಸ್ವಲ್ಪ ಒಡೆದು ಅದರಲ್ಲಿ ಹಾಕಿ ಹೆಚ್ಚಿದ ಈರುಳ್ಳಿ , ಕೊತ್ತಂಬರಿ ಮತ್ತು ಸ್ವಲ್ಪ ಚಾಟ್ ಮಸಾಲಾ ಮತ್ತು ಉಪ್ಪುನ್ನು ಹಾಕಿ ಪಾನಿಯನ್ನು ಬೆರೆಸಿ ತಿನ್ನಿ.