ಪರಂಗಿ ಹಣ್ಣಿನ ಪ್ರಯೋಜನಗಳು ಗೊತ್ತಾದ್ರೆ ರಾತ್ರಿ ಊಟದ ಬದ್ಲು ಈ ಹಣ್ಣು ಸೇವಿಸೋಕೆ ಶುರು ಮಾಡ್ತೀರಾ…

0
3305

ಪರಂಗಿ ಹಣ್ಣು ಉತ್ತಮ ಜೀರ್ಣಕಾರಕ, ಉತ್ತಮ ವಿರೇಚಕ. ಊಟದ ನಂತರ ಪರಂಗಿ ಹಣ್ಣನ್ನು ತಿಂದಲ್ಲಿ ಉಂಡ ಆಹಾರ ಚೆನ್ನಾಗಿ ಜೀರ್ಣವಾಗುವುದಲ್ಲದೆ ಹೊಟ್ಟೆಯಲ್ಲಿರುವ ಜಂತುಗಳು ನಶಿಸುವುದು.

1. ಪರಂಗಿ ಕಾಯಿಯ ಹೋಳುಗಳಿಗೆ ಜೀರಿಗೆ ಪುಡಿ, ಕಾಳು ಮೆಣಸಿನ ಪುಡಿ ಮತ್ತು ಉಪ್ಪು, ನಿಂಬೆ ರಸ ಬೆರೆಸಿ ಸೇವಿಸುವುದರಿಂದ ಮಲಬದ್ಧತೆ, ಅಜೀರ್ಣ ದೂರವಾಗುವುದು, ಎದೆ ಹಾಲು ವೃದ್ಧಿಯಾಗುವುದು.

2. ಹಾಲು ಜೇನುತುಪ್ಪ ಮತ್ತು ಪರಂಗಿ ಹಣ್ಣಿನ ಮಿಶ್ರಣ ಸೇವಿಸಿದ್ದಲ್ಲಿ ಹೃದಯ ಮತ್ತು ನಾರಾ ದೌರ್ಬಲ್ಯ ನಿವಾರಣೆಯಾಗುವುದು.

ಮುದ್ರಾ ಯೋಗದಿಂದ ಆರೋಗ್ಯ ಹೇಗೆ ವೃದ್ಧಿ ಯಾಗುವುದೆಂದು ಈ ವಿಡಿಯೋ ನೋಡಿ

3. ಮೂಲವ್ಯಾಧಿ, ಯಕೃತ್ತ,ಗುಲ್ಮ ಸಮಬಂಧಿ ರೋಗಗಳಿಂದ ನರಳುವವರಿಗೆ ಪಪಾಯಿ ಅತ್ಯುತ್ತಮ ಔಷಧಿ.

4. ಒಂದು ಹೋಳು ಪರಂಗಿ ಹಣ್ಣಿನಿಂದ ಚರ್ಮವನ್ನು ತಿಕ್ಕುತ್ತಿದ್ದರೆ ಕಲೆಗಳು ನಿವಾರಣೆಯಾಗುವುದು.

5. ಹಾಲು ಕುಡಿಸುವ ತಾಯಂದಿರು ಪರಂಗಿ ಹಣ್ಣನ್ನು ಸೇವಿಸುತ್ತಿದ್ದರೆ ನಿಶ್ಯಕ್ತಿ ದೂರವಾಗುತ್ತದೆ.

6. ಈ ಹಣ್ಣನ್ನು ಮಲೇರಿಯಾ, ಡೆಂಗೀ ಮತ್ತು ಕಣ್ಣು ಬೇನೆಯಿಂದ ನರಳುತ್ತಿರುವ ರೋಗಿಗಳು ತಿನ್ನುವುದರಿಂದ ರೋಗ ಉಲ್ಬಣ ವಾಗುವುದಿಲ್ಲ..

MRR ನ್ಯೂಲೈಫ್
ನ್ಯೂ ನಂ 7 , ಎರಡನೇ ಮಹಡಿ, 50 ಅಡಿ ರಸ್ತೆ,
ಹನುಮಂತನಗರ, ಬೆಂಗಳೂರು 50
ದೂರವಾಣಿ ಸಂಖ್ಯೆ: 9071904622 , 8217224840