ಇಬ್ಬರು ಹೆಣ್ಣು ಮಕ್ಕಳನ್ನು ಅಕ್ರಮ ಬಂಧನದಲ್ಲಿಟ್ಟುಕೊಂಡ ಆರೋಪ, ನಿತ್ಯಾನಂದ ವಿರುದ್ಧ ಕೋರ್ಟ್ ಮೆಟ್ಟಿಲೇರಿದ ದಂಪತಿಗಳು.!

0
229

ಸದಾ ಒಂದಿಲ್ಲದೊಂದು ಸುದ್ದಿಯಲ್ಲಿರುವ ನಿತ್ಯಾನಂದ ಸ್ವಘೋಷಿತ ದೇವಮಾನವ ನಿತ್ಯಾನಂದ ಸ್ವಾಮೀಜಿ ವಿರುದ್ಧ ಮತ್ತೊಂದು ಆರೋಪ ಬಂದಿದ್ದು, ಇಬ್ಬರು ಹೆಣ್ಣು ಮಕ್ಕಳನ್ನು ಅಕ್ರಮ ಬಂಧನದಲ್ಲಿಟ್ಟುಕೊಂಡಿದ್ದು, ಅವರನ್ನು ರಕ್ಷಣೆ ಮಾಡಬೇಕೆಂದು ಕೋರಿ ಬೆಂಗಳೂರು ಮೂಲದ ದಂಪತಿಗಳು ಗುಜರಾತ್ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಅದರಂತೆ ಬಂಧದಲ್ಲಿರುವ ಹೆಣ್ಣು ಮಕ್ಕಳನ್ನು ನಿತ್ಯಾನಂದನ ಅಹಮದಾಬಾದ್ ಧ್ಯಾನಪೀಕ್ಕೆ ಕರೆದೊಯ್ದು ಇರಿಸಲಾಗಿದೆ ಎಂದು ಕೋರ್ಟ್ ಮೊರೆ ಹೋಗಿದ್ದಾರೆ.

ಹೌದು ಬಿಡದಿ ಆಶ್ರಮದ ನಿತ್ಯಾನಂದ ಸ್ವಾಮೀಜಿ ವಿರುದ್ಧ ಮತ್ತೊಂದು ಆರೋಪ ಬಂದಿದ್ದು, ತಮ್ಮ ನಾಲ್ವರು ಪುತ್ರಿಯರನ್ನು ನಿತ್ಯಾನಂದ ಅಕ್ರಮ ಬಂಧನದಲ್ಲಿರಿಸಿದಿದ್ದಾರೆ ಎಂದು ದಂಪತಿ ದೂರು ದಾಖಲಿಸಿದ್ದಾರೆ. ಜನಾರ್ದನ ಶರ್ಮಾ ಎಂಬುವರೇ ನಿತ್ಯಾನಂದ ನಿತ್ಯಾನಂದ್ ವಿರುದ್ಧ ಆರೋಪ ಮಾಡಿದ್ದು, 2013ರಲ್ಲಿ 7 ವರ್ಷದಿಂದ 15 ವರ್ಷದವರೆಗಿನ ತಮ್ಮ ನಾಲ್ವರು ಮಕ್ಕಳನ್ನು ನಿತ್ಯಾನಂದ ಅವರು ನಿರ್ವಹಿಸುವ ಶಿಕ್ಷಣ ಸಂಸ್ಥೆಗಳಲ್ಲಿ ವಿದ್ಯಾಭ್ಯಾಸಕ್ಕಾಗಿ ಸೇರಿಸಿದ್ದೆವು. ಆದರೆ, ಹೆಣ್ಣು ಮಕ್ಕಳು ಅಹಮದಾಬಾದ್’ನಲ್ಲಿರುವ ದೆಹಲಿ ಪಬ್ಲಿಕ್ ಶಾಲೆಯ ಆವರಣದಲ್ಲಿರುವ ನಿತ್ಯಾನಂದನ ಧ್ಯಾನಪೀಠವಾಗಿರುವ ಯೋಗಿನಿ ಸರ್ವಜ್ಞಾನಪೀಠಂ ಎಂಬಲ್ಲಿಗೆ ವರ್ಗಾಯಿಸಲಾಗಿದೆ ಎಂದಿದ್ದಾರೆ.

ಮಕ್ಕಳನ್ನು ಭೇಟಿ ಮಾಡಲು ಹೋದರೆ ಅದಕ್ಕೆ ಅವಕಾಶ ನೀಡುತ್ತಿಲ್ಲ. ಆದರೆ ಮಕ್ಕಳ ವಿಡಿಯೋವನ್ನು ಆಗಾಗ ಹರಿಯಬಿಡಲಾಗುತ್ತಿದೆ. ಹೀಗಾಗಿ ನಮಗೆ ಅನುಮಾನವಿದೆ. ಎಲ್ಲೋ ಏನೋ ತಪ್ಪಿದೆ ಅನಿಸುತ್ತಿದೆ ಹೀಗಾಗಿ ನಾಮು ಗುಜರಾತ್ ಕೋರ್ಟ್ ಮೊರೆ ಹೋಗಿದ್ದೇವೆ ಎಂದು ದಂಪತಿಗಳು ಹೇಳಿಕೊಂಡಿದ್ದಾರೆ. ಸಂಸ್ಥೆಯಲ್ಲಿದ್ದ ನಾಲ್ವರು ಮಕ್ಕಳಲ್ಲಿ ಇಬ್ಬರು ಅಪ್ರಾಪ್ತ ಹೆಣ್ಣು ಮಕ್ಕಳನ್ನು ಪೊಲೀಸರ ಸಹಾಯದಿಂದ ಕರೆತರುವಲ್ಲಿ ದಂಪತಿಗಳು ಯಶಸ್ವಿಯಾಗಿದ್ದಾರೆ. ಆದರೆ ಅವರ ಹಿರಿಯ ಪುತ್ರಿಯರಾದ ಲೋಪಮುದ್ರ ಜನಾರ್ಧನ ಶರ್ಮಾ (21) ಮತ್ತು ನಂದಿತಾ (18) ತಂದೆ – ತಾಯಿ ಜೊತೆ ಬರಲು ನಿರಾಕರಿಸಿದ್ದಾರೆ.

ತಮ್ಮ ಇಬ್ಬರು ಕಿರಿಯ ಪುತ್ರಿಯರನ್ನು ಎರಡು ವಾರಗಳ ಕಾಲ ಅಕ್ರಮ ದಿಗ್ಬಂಧನದಲ್ಲಿರಿಸಿ ನಿದ್ದೆ ಮಾಡಲೂ ಬಿಟ್ಟಿರಲಿಲ್ಲ. ಇಬ್ಬರು ಹಿರಿಯ ಪುತ್ರಿಯರನ್ನು ಕಾಪಾಡಬೇಕು. ಅವರನ್ನು ತಮ್ಮ ವಶಕ್ಕೆ ಒಪ್ಪಿಸಲು ಶಿಕ್ಷಣ ಸಂಸ್ಥೆಗೆ ಸೂಚಿಸಿ ಎಂದು ಕೋರ್ಟ್ ಗೆ ಮನವಿ ಸಲ್ಲಿಸಿದ್ದಾರೆ. ಆದರೆ ಕೆಲ ದಿನಗಳ ಹಿಂದಷ್ಟೇ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋವೊಂದು ಹರಿದಾಡುತ್ತಿತ್ತು. ಇದರಲ್ಲಿ ದಂಪತಿಗಳ ಪುತ್ರಿ ಎಂದು ಹೇಳಲಾಗುತ್ತಿರುವ ನಿತ್ಯಾನಂದಿತಾ ಮಾತನಾಡಿದ್ದಳು. ಸ್ವಇಚ್ಛೆಯಿಂದಲೇ ನಾನು ಆಶ್ರಮದಲ್ಲಿದ್ದೇನೆಂದು ಹೇಳಿದ್ದಳು.

ಕಳೆದ 6 ವರ್ಷಗಳಿಂದ ನಾನು ಆಶ್ರಮದಲ್ಲಿದ್ದೇನೆ. ಇಲ್ಲಿ ಸಂತೋಷವಾಗಿಯೇ ಇದ್ದೇನೆ. ಸ್ವಇಚ್ಛೆಯಿಂದ ನಾನು ಈ ದಾರಿಯನ್ನು ಆರಿಸಿಕೊಂಡಿದ್ದೇನೆ. ಸನ್ಯಾಸಿನಿಯಾಗಿ ನಾನಿಲ್ಲಿದ್ದೇನೆ. ಈ ಮಾರ್ಗದಿಂದ ಸ್ವಾಮೀಜಿಗಳ ಸಂದೇಶಗಳನ್ನು ಹಂಚಿಕೊಳ್ಳುತ್ತೇನೆ. ಪೋಷಕರಾಗಲೀ, ಯಾರೇ ಆದರೂ ನಾನು ಯಾರನ್ನೂ ಭೇಟಿಯಾಗಲು ಇಚ್ಛಿಸುವುದಿಲ್ಲ. ನಾನಿಲ್ಲಿ ಸುರಕ್ಷಿತವಾಗಿದ್ದೇನೆ. ಸನ್ಯಾಸಿನಿಯಾಗಿ ನಾನಿಲ್ಲಿ ಮುಂದುವರೆಯಲು ಇಚ್ಛಿಸಿದ್ದೇನೆ. ಇಲ್ಲಿರುವವರು ನನ್ನನ್ನು ಬಹಳ ಚೆನ್ನಾಗಿ ನೋಡಿಕೊಳ್ಳುತ್ತಿದ್ದಾರೆಂದು ಹೇಳಿಕೊಂಡಿರುವುದು ವಿಡಿಯೋದಲ್ಲಿ ಕಂಡು ಬಂದಿದೆ. ಆದರೆ ಇದರ ಸುತ್ತ ಹಲವು ಅನುಮಾನಗಳು ಮೂಡಿದ್ದು ಹಲವರು ತನಿಖೆಗೆ ಮಾಡಲಿ ಎನ್ನುತ್ತಿದ್ದಾರೆ.