ಪಾಲಕರೇ ಹುಷಾರ್; ಇನ್ಮುಂದೆ 1 ರಿಂದ 8ನೇ ತರಗತಿವರೆಗಿನ ನಿಮ್ಮ ಮಕ್ಕಳನ್ನೂ ಫೇಲ್‌ ಮಾಡಬಹುದು..

0
1082

ಹಿಂದೆ ಫೇಲ್ ಆಗಿ ಶಾಲೆ ಬಿಟ್ಟವರೇ ಜಾಸ್ತಿ ಜನ ಏಕೆಂದರೆ ಸರಿಯಾಗಿ ಓದಲು ಬರೆಯಲು ಬರದ ಮಕ್ಕಳನ್ನು ಯಾವುದೇ ಅನುಮತಿ ಇಲ್ಲದೆ ಫೇಲ್ ಮಾಡಿ ಹಿಂದಿನ ತರಗತಿಗೆ ಕೂರಿಸುವ ಅಧಿಕಾರ ಶಿಕ್ಷಣ ಮಂಡಳಿಗೆ ಇತ್ತು ಆ ಕಾರಣ ಬಹಳಷ್ಟು ವಿದ್ಯಾರ್ಥಿಗಳು ಫೇಲ್ ಆಗಿ ಅದೇ ತರಗತಿಯಲ್ಲಿ ಎರಡು ಮೂರು ವರ್ಷಗಳು ಅಲ್ಲೇ ಕಲಿತ ಉದಾಹರಣೆಗಳು ತುಂಬಾ ಇವೆ, ಈ ಕಾರಣಕ್ಕೆ ಹಲವರು ಶಾಲೆ ಬಿಟ್ಟಿದಾರೆ. ಇದನ್ನು ಕಂಡು ನಂತರ ಶಿಕ್ಷಣ ಹಕ್ಕು ಕಾಯಿದೆ ಹಲವು ಬದಲಾವಣೆ ಮಾಡಿತ್ತು.

ಹೌದು ಹೆಚ್ಚಿನ ಮಕ್ಕಳು ಫೇಲ್ ಆಗುತ್ತಿದ್ದು ಇದರಿಂದ ಶಿಕ್ಷಣದ ಗುಣಮಟ್ಟ ಕುಸಿಯುತ್ತಿದೆ ಎಂದು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಶಿಕ್ಷಣ ಹಕ್ಕು ಕಾಯಿದೆ ಜಾರಿಮಾಡಿ ಬಳಿಕ ದೇಶಾದ್ಯಂತ 1ನೇ ತರಗತಿಯಿಂದ 8ನೇ ತರಗತಿವರೆಗಿನ ಯಾವುದೇ ವಿದ್ಯಾರ್ಥಿಯನ್ನು ಅನುತ್ತೀರ್ಣ ಮಾಡುವಂತಿಲ್ಲ. 6 ವರ್ಷದಿಂದ 14 ವರ್ಷದೊಳಗಿನ ಮಕ್ಕಳಿಗೆ ಯಾವುದೇ ರ್ಯಾಂಕ್ ಅಥವಾ ಮುಂದಿನ ತರಗತಿಗೆ ತೇರ್ಗಡೆ ಹೊಂದಲು ಪರೀಕ್ಷೆ ನಡೆಸುವಂತಿಲ್ಲ ಎಂದು ಸ್ಪಷ್ಟವಾಗಿ ಹೇಳಿ ಶಿಕ್ಷಣ ಮಂಡಳಿಗೆ ತಾಕಿತ್ತು ಮಾಡಿದವು.
ಈ ಕಾಯ್ದೆ ಬಂದ ನಂತರ ಪಾಲಕರು ನಿರಾಳರಾಗಿ ತಮ್ಮ ಮಕ್ಕಳು ಫೇಲ್ ಆಗೋದಿಲ್ಲ ಅಂತ ಹೆಚ್ಚು ಕಾಳಜಿ ವಹಿಸುತ್ತಿರಲಿಲ್ಲ. ಆದರೆ ಮಕ್ಕಳ ಅನುತ್ತೀರ್ಣ ನಿಯಮ ಬದಲು| 8ನೇ ತರಗತಿವರೆಗಿನ ಮಕ್ಕಳನ್ನೂ ಇನ್ನು ಫೇಲ್‌ ಮಾಡಬಹುದು| ಸಂಸತ್ತಿನ ಉಭಯ ಸದನಗಳಲ್ಲಿ ಮಹತ್ವದ ಮಸೂದೆ ಅಂಗೀಕಾರವಾಗಿದ್ದು.

8ನೇ ತರಗತಿ ವರೆಗಿನ ಮಕ್ಕಳನ್ನು ಅನುತ್ತೀರ್ಣಗೊಳಿಸಬಾರದು ಎಂಬ ನಿಯಮವನ್ನು ರದ್ದುಪಡಿಸುವ ಮಸೂದೆಯೊಂದಕ್ಕೆ ಸಂಸತ್ತು ಗುರುವಾರ ಅನುಮೋದನೆ ನೀಡಿದೆ. ಹೀಗಾಗಿ ಪರೀಕ್ಷೆಗಳಲ್ಲಿ ಉತ್ತಮ ಸಾಧನೆ ಮಾಡದ ವಿದ್ಯಾರ್ಥಿಗಳನ್ನು ಇನ್ನು ಮುಂದೆ ರಾಜ್ಯ ಸರ್ಕಾರದ ಶಾಲೆಗಳು ಅನುತ್ತೀರ್ಣಗೊಳಿಸಬಹುದಾಗಿದೆ. ಆದಕಾರಣ ಪಾಲಕರು ಮಕ್ಕಳ ಅಭ್ಯಾಸದ ಬಗ್ಗೆ ಹೆಚ್ಚು ಖಾಳಜಿವಹಿಸುವುದು ಉತ್ತಮವಾಗಿದೆ.

ಶಿಕ್ಷಣ ಹಕ್ಕು ಕಾಯಿದೆ ಬಗ್ಗೆ ಶಿಕ್ಷಣ ತಜ್ಞರ ಮಾತು:

2009ರಲ್ಲಿಯೇ ಸೂಚ್ಯವಾಗಿ ಗಮನಿಸಿದ್ದ ಶಿಕ್ಷಣ ತಜ್ಞರು, ಕಡ್ಡಾಯ ಶಿಕ್ಷಣದ ಹೆಸರಲ್ಲಿ ಗುಣಮಟ್ಟ ಹಾಳುಮಾಡಲಾಗುತ್ತಿದೆ ಎಂದು ಎಚ್ಚರಿಸಿದ್ದರು. ಆದರೆ ಕೇಂದ್ರ ಸರ್ಕಾರ ಕಾಯಿದೆಯ ಹೆಗ್ಗಳಿಕೆ ಪಡೆಯುವುದರ ಬಗ್ಗೆ ಮಾತ್ರ ಗಮನ ಕೇಂದ್ರೀಕರಿಸಿತ್ತು. ಇದರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ಇಳಿಕೆಯಾಗಿ ಒಂದನೇ ತರಗತಿಯಿಂದ 8ನೇ ತರಗತಿವರೆಗಿನ ವಿದ್ಯಾರ್ಥಿಗಳ ಶೈಕ್ಷಣಿಕ ಗುಣಮಟ್ಟ ವರ್ಷದಿಂದ ವರ್ಷಕ್ಕೆ ಕುಂಠಿತವಾಗುತ್ತಿದೆ. 8ನೇ ತರಗತಿಗೆ ಬರುತ್ತಿರುವ ವಿದ್ಯಾರ್ಥಿಗಳಲ್ಲಿ ಅರ್ಧಕ್ಕೂ ಅಧಿಕರು ಗಣಿತ ಹಾಗೂ ವಿಜ್ಞಾನ ವಿಷಯಗಳಲ್ಲಿ ಉತ್ತೀರ್ಣರಾಗಲು ಸಾಧ್ಯವಾಗದ ಪರಿಸ್ಥಿತಿಯಿದೆ. ಇಂತಹ ಪರೀಕ್ಷಾ ಪದ್ಧತಿಯಿಂದ ವಿದ್ಯಾರ್ಥಿಗಳು ವಿಜ್ಞಾನ ವಿಷಯದಲ್ಲಿ ಪರಿಣಿತರಾಗಲು ಸಾಧ್ಯವಾಗುತ್ತಿಲ್ಲ. ಎಂದು ಎಚ್ಚರಿಸಿತ್ತು.

25 ರಾಜ್ಯಗಳ ಬೇಡಿಕೆ ಇದೆ ಆಗಿತ್ತು:

ಶಿಕ್ಷಣ ಗುಣಮಟ್ಟಕುಸಿತವಾಗುತ್ತಿರುವುದರಿಂದ ನಿಯಮವನ್ನು ಬದಲಾಯಿಸುವಂತೆ 25 ರಾಜ್ಯಗಳು ಕೇಂದ್ರಕ್ಕೆ ಬೇಡಿಕೆ ಇಟ್ಟಿದ್ದವು. ಇದೇ ವೇಳೆ, ವಿದ್ಯಾರ್ಥಿಗಳ ಸಮಗ್ರ ಮೌಲ್ಯಮಾಪನದ ದೃಷ್ಟಿಯಿಂದ ಮಸೂದೆಯನ್ನು ಅಂಗೀಕರಿಸಲಾಗಿದೆ. ಆದಾಗ್ಯೂ ಈ ನಿಯಮವನ್ನು ಪಾಲಿಸುವ ಅಥವಾ ಪಾಲಿಸದೇ ಇರುವ ಅಧಿಕಾರ ರಾಜ್ಯಸರ್ಕಾರಗಳಿಗೆ ಬಿಟ್ಟಿದ್ದು. ಈ ಕ್ರಮ ಶಾಲೆಯಿಂದ ಹೊರಗೆ ಉಳಿಯುವ ಮಕ್ಕಳ ಪ್ರಮಾಣದ ಏರಿಕೆಗೆ ಕಾರಣವಾಗುವುದಿಲ್ಲ ಎಂದು ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ್‌ ಜಾವಡೇಕರ್‌ ಹೇಳಿದ್ದಾರೆ.