ಪೋಷಕರೇ ನಿಮ್ಮ ಮಕ್ಕಳಿಗೆ ಕ್ಯಾನ್ಸರ್ ಬರದಂತೆ ತಡೆಯಲು ಈ ಕ್ರಮಗಳನ್ನು ಪಾಲಿಸಿ..

0
1338

ಕ್ಯಾನ್ಸರ್ ವಯಸ್ಸಿನ ಅಂತರ ವಿಲ್ಲದೆ ಬರುವ ಖಾಯಿಲೆಯಾಗಿದ್ದು. ಬಹುತೇಕರು ಇದು ಕೆಟ್ಟ ಹವ್ಯಾಸಗಳಿಂದ ಬರುತ್ತದೆ ಎಂದು ತಿಳಿದಿರುತ್ತಾರೆ. ಆದರೆ ಈಗೀಗ ಈ ಖಾಯಿಲೆ ಯಾರಿಗೆ ಬರುತ್ತೆ ಹೇಗೆ ಬರುತ್ತೆ ಅಂತ ತಿಳಿಯುವುದಿಲ್ಲ. ಹಾಗೆಯೇ ಇತ್ತೀಚಿಗೆ ಎಳೆ ಮಕ್ಕಳಲ್ಲಿ ಕೂಡ ಬರುತ್ತಿರುವುದು ಬಹಳ ಆತಂಕಕಾರಿ ಎಂದು ಹೇಳಬಹುದು. ಇದರಿಂದ ವಿಶ್ವದಾದ್ಯಂತ ಕ್ಯಾನ್ಸರ್ ರೋಗಿಗಳ ಸಂಖ್ಯೆ ಹೆಚ್ಚುತ್ತಿದೆ. ಭಾರತದಲ್ಲಿ ಕೂಡ ಲಕ್ಷಾಂತರ ರೋಗಿಗಳು ಕ್ಯಾನ್ಸರ್ ನಿಂದ ಅಕಾಲಿಕ ಮರಣಕ್ಕೆ ಗುರಿಯಾಗುತ್ತಿದ್ದಾರೆ.

Also read: ಇನ್ಮುಂದೆ ಕ್ಯಾನ್ಸರ್ ಖಾಯಿಲೆಗೆ ಹೆದರಬೇಕಿಲ್ಲ; ಅಂತು ಇಂತೂ ಕ್ಯಾನ್ಸರ್‌ಗೆ ಪರಿಣಾಮಕಾರಿ ಔಷಧಿ ಕಂಡು ಹಿಡಿದ ಇಸ್ರೇಲ್ ವಿಜ್ಞಾನಿಗಳು..

ಕ್ಯಾನ್ಸರ್ ನ ಬಗ್ಗೆ ಜನರಲ್ಲಿ ಅರಿವಿಲ್ಲದ ಕಾರಣ, ರೋಗ ಪತ್ತೆಯಾಗುವುದು ವಿಳಂಬವಾಗುತ್ತಿದೆ. ಕ್ಯಾನ್ಸರ್ ಪತ್ತೆಯಾದ ನಂತರವೂ ಚಿಕಿತ್ಸಾ ಸೌಲಭ್ಯಗಳಿಲ್ಲದೆ ಅನೇಕರು ನೋವಿನಿಂದ ನರಳಿ ಅಸುನೀಗುತ್ತಿದ್ದಾರೆ. ಅದರಲ್ಲಿ ಮಕ್ಕಳು ಕೂಡ ಇದ್ದು ಪಾಲಕರು ಮಕ್ಕಳಿಗೆ ಮುನ್ನೆಚ್ಚರಿಕೆಯಾಗಿ ತಡೆಯುವುದು ದೊಡ್ಡ ಜವಾಬ್ದಾರಿಯಾಗಿದೆ. ಹಾಗಾದ್ರೆ ಕ್ಯಾನ್ಸರ್- ನಿಂದ ಮಕ್ಕಳ ರಕ್ಷಣೆ ಹೇಗೆ ಮಾಡಬೇಕು ಅಂತ ಕೆಳಗೆ ತಿಳಿಸಲಾಗಿದೆ ನೋಡಿ.

ಕ್ಯಾನ್ಸರ್‌ ತಡೆಯಲು ಪೋಷಕರು ಕೈಗೊಳ್ಳಬೇಕಾದ ಕ್ರಮಗಳು

ಮಕ್ಕಳಿಗೆ ಕ್ಯಾನ್ಸರ್ ಎಂಬ ಮಹಾಮಾರಿ ತಗುಲುವ ಅಪಾಯ ಕಡಿಮೆ ಮಾಡಲು ಪೋಷಕರು ಅವರಿಗೆ ಆರೋಗ್ಯಕರ ಹವ್ಯಾಸವನ್ನು ರೂಢಿಸಬೇಕಾಗಿದೆ. ಮಕ್ಕಳಲ್ಲಿ ಕ್ಯಾನ್ಸರ್ ಬರುವುದಕ್ಕೂ ವಯಸ್ಕರಿಗೆ ಕ್ಯಾನ್ಸರ್ ಬರುವುದಕ್ಕೂ ವ್ಯತ್ಯಾಸಗಳಿವೆ. ದೇಹದಲ್ಲಿ ಕ್ಯಾನ್ಸರ್ ಜೀವಕೋಶಗಳ ಬೆಳವಣಿಗೆ ಹಾಗೂ ಹಲವು ಪಟ್ಟುಗಳಷ್ಟು ಹೆಚ್ಚಾಗುವುದಕ್ಕೂ ಇಬ್ಬರಲ್ಲೂ ಹಲವು ವ್ಯತ್ಯಾಸಗಳಿವೆ. ಇನ್ನು, ಮಕ್ಕಳಿಗೆ ಕ್ಯಾನ್ಸರ್ ತಗುಲಿರುವುದನ್ನು ಬೇಗ ಕಂಡು ಹಿಡಿದರೆ ಹಾಗೂ ತಡೆಗಟ್ಟುವ ಕ್ರಮಗಳಿಂದ ಮಕ್ಕಳಿಗೆ ರೋಗದಿಂದ ದೂರವಿಡಬಹುದು.

1. ಸೂಕ್ತ ಲಸಿಕೆಗಳನ್ನು ಪಡೆಯಿರಿ:

ಕೆಲವು ವೈರಸ್ ಗಳ ಸೋಂಕಿನಿಂದ ಕ್ಯಾನ್ಸರ್ ಉಂಟಾಗಬಹುದು. ವೈರಸ್ ಲಸಿಕೆಗಳಿಂದ ಅಂತಹ ಕ್ಯಾನ್ಸರ್ ಗಳನ್ನು ತಡೆಗಟ್ಟಬಹುದಾಗಿದೆ. ಹೆಪಟೈಟಿಸ್ ಬಿ (Hepatitis B) ಲಸಿಕೆಯಿಂದ ಲಿವರ್ ಕ್ಯಾನ್ಸರ್ ನ್ನು ತಡೆಗಟ್ಟಲು ಸಾಧ್ಯ. ಪ್ರತಿ ನವಜಾತ ಶಿಶುವಿಗೆ ಈ ಲಸಿಕೆ ಅತ್ಯಗತ್ಯ. ಹ್ಯೂಮನ್ ಪಾಪಿಲೋಮ ವೈರಸ್ (Human Papilloma Virus) ಲಸಿಕೆಯಿಂದ ಗರ್ಭ ಕೊರಳಿನ ಕ್ಯಾನ್ಸರ್ (cervical cancer)ನ್ನು ತಡೆಗಟ್ಟ ಬಹುದು.9 ವರ್ಷ ತುಂಬಿದ ಎಲ್ಲಾ ಹೆಣ್ಣು ಮಕ್ಕಳಿಗೆ ಇದೊಂದು ಉಪಯುಕ್ತ ಲಸಿಕೆ.

2. ದೈಹಿಕ ಕಸರತ್ತು:

ಮೊಬೈಲ್ ಹಾಗೂ ವೀಡಿಯೋ ಗೇಮ್‌ಗಳ ಈ ಕಾಲಮಾನದಲ್ಲಿ ಮಕ್ಕಳು ದೈಹಿಕವಾಗಿ ಚಟುವಟಿಕೆಯಿಂದ ಇರಲು ನೋಡಿಕೊಳ್ಳಬೇಕಾದುದು ಅಗತ್ಯವಾಗಿದೆ. ದೈಹಿಕ ಚಟುವಟಿಕೆ ಹಾಗೂ ವ್ಯಾಯಾಮದಿಂದ ದೇಹವನ್ನು ಸರಿಯಾಗಿ ನಿಯಂತ್ರಣದಲ್ಲಿಡಬಹುದು ಹಾಗೂ ಆರೋಗ್ಯಕರವಾಗಿರಬಹುದು. ಕ್ಯಾನ್ಸರ್ ಸೇರಿದಂತೆ ಹಲವು ರೋಗಗಳು ದೈಹಿಕ ಚಟುವಟಿಕೆಯಿಂದ ಬರುವ ಅಪಾಯ ತಗ್ಗುತ್ತದೆ.

3. ಪಾಲಕರ ಜೀವನಶೈಲಿ:

ನಿಮ್ಮನ್ನು ನೋಡಿ ಮಕ್ಕಳು ಬೆಳೆಯುತ್ತಾರೆ. ಹೀಗಾಗಿ, ನೀವು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಸಹ ಪ್ರಮುಖವಾಗಿದೆ. ಇದರಿಂದ ತಮ್ಮ ಜೀವನದಲ್ಲಿ ತಮ್ಮ ಮಕ್ಕಳೂ ಸಹ ಅದನ್ನು ಅಳವಡಿಸಿಕೊಳ್ಳುತ್ತಾರೆ. ಬೇಗ ಏಳುವುದು, ಸಮಯಕ್ಕೆ ತಕ್ಕಂತೆ ನಿದ್ದೆ ಮಾಡುವುದು, ಧೂಮಪಾನ ಮಾಡದಿರುವುದು, ಹೆಚ್ಚು ಕುಡಿಯುವುದನ್ನು ತ್ಯಜಿಸುವುದು ಮುಂತಾದವುಗಳನ್ನು ನೀವು ಮಾಡಿ ನಿಮ್ಮ ಮಕ್ಕಳಿಗೂ ಅಭ್ಯಾಸ ಮಾಡಿಸಬೇಕಾಗಿದೆ. ಇದರಿಂದ ನಿಮ್ಮ ಮಕ್ಕಳು ಖುಷಿಯಾಗಿ ಹಾಗೂ ಆರೋಗ್ಯಕರವಾಗಿ ಜೀವನ ಮಾಡುತ್ತಾರೆ.

4. ಸರಿಯಾದ ಆರೋಗ್ಯ ತಪಾಸಣೆ:

ರೇಡಿಯೇಷನ್ ಮುಂತಾದ ಪರಿಸರದ ಅಂಶಗಳಿಂದ ಬಾಲ್ಯದಲ್ಲಿ ಕ್ಯಾನ್ಸರ್ ಬರುವ ಸಾಧ್ಯತೆ ಇದೆ. ಈ ರೀತಿಯ ಕ್ಯಾನ್ಸರ್ ತಡೆಯುವುದಕ್ಕೆ ಏನೂಮಾಡಲು ಸಾಧ್ಯವಿಲ್ಲ ಎಂದು ಅಮೆರಿಕದ ಕ್ಯಾನ್ಸರ್ ಸೊಸೈಟಿ ಹೇಳುತ್ತದೆ. ಆದರೆ, ನಿಮ್ಮ ಮಕ್ಕಳನ್ನು ನಿಯಮಿತವಾಗಿ ಆರೋಗ್ಯ ತಪಾಸಣೆ ಮಾಡಿಸುವುದರಿಂದ ಈ ರೀತಿಯ ಕ್ಯಾನ್ಸರ್‌ ಗುಣಪಡಿಸುವ ಸಾಧ್ಯತೆ ಹೆಚ್ಚಿರುತ್ತದೆ.

5. ಹಾನಿಕಾರಕ ಕಿರಣಗಳಿಂದ ರಕ್ಷಣೆ:

Also read: ನಾವ್ ಹೇಳಿದಂತೆ ಈ ರೀತಿ ಮಾಡ್ತಾ ಬನ್ನಿ ನಿಮಗೆ ಬಾಯಿ ಕ್ಯಾನ್ಸರ್ ಬರುವ ಪ್ರಮೇಯ ಶೇಕಡ 50% ಕಮ್ಮಿಯಾಗುತ್ತೆ!!

ಅಸುರಕ್ಷಿತವಾಗಿ ಸೂರ್ಯನಿಗೆ ಒಡ್ಡಿಕೊಳ್ಳುವುದರಿಂದ ಕ್ಯಾನ್ಸರ್ ಬರಬಹುದು. ಹೀಗಾಗಿ ಸೂರ್ಯನ ಹಾನಿಕಾರಕ ಕಿರಣಗಳಿಂದ ನಿಮ್ಮ ಮಕ್ಕಳನ್ನು ತಡೆಯದಂತೆ ಮಾಡುವುದು ತುಂಬ ಪ್ರಮುಖವಾಗಿದೆ. ಮಕ್ಕಳ ಚರ್ಮದ ತ್ವಚೆ ಮೃದುವಾಗಿರುತ್ತೆ ಹಾಗೂ ದುರ್ಬಲವಾಗಿರುತ್ತೆ. ಹೀಗಾಗಿ, ಉಡುಪು ಹಾಗೂ ಸನ್‌ಸ್ಕ್ರೀನ್‌ನಿಂದ ತಡೆಯುವುದು ಅಗತ್ಯವಾಗಿದೆ.

6. ಜಂಕ್ ಫುಡ್ ಹಿಡಿತ ಗೊಳಿಸುವುದು:

ಮಕ್ಕಳ ಕ್ಯಾನ್ಸರ್ ಖಾಯಿಲೆಗೆ ಬಾಲ್ಯದಲ್ಲಿ ಬೊಜ್ಜು ಬರದಂತೆ ತಡೆಯಿರಿ ಜಂಕ್ ಫುಡ್ ಬದಲು ಹೆಚ್ಚು ತರಕಾರಿ ಮತ್ತು ಹಣ್ಣುಗಳಿರಲಿ. ಹಣ್ಣು, ತರಕಾರಿಗಳಲ್ಲಿರುವ ನಾರಿನಂಶ(), ಅನೇಕ ಕ್ಯಾನ್ಸರ್ ಉಂಟು ಮಾಡುವ ರಸಾಯನಿಕಗಳನ್ನು ನಿಮ್ಮ ದೇಹದಿಂದ ಹೊರದೂಡುತ್ತವೆ. ಅತಿಯಾದ ಕೊಬ್ಬಿನಂಶವಿರುವ ಸಿಹಿ ತಿಂಡಿಗಳು, ಕರಿದ ತಿಂಡಿಗಳು, ಪಾನೀಯಗಳು, ಅತಿಯಾದ ಮಾಂಸಾಹಾರ ಬೊಜ್ಜು ಉಂಟು ಮಾಡುತ್ತವೆ. ಆದರಿಂದ ಮಕ್ಕಳಿಗೆ ಆರೋಗ್ಯಕರ ಹಾಗೂ ಅಧಿಕ ಪೌಷ್ಠಿಕಾಂಶಗಳುಳ್ಳ ಆಹಾರ ನೀಡಲು ಆದ್ಯತೆ ನೀಡಿ. ಈ ಮೂಲಕ ನಿಮ್ಮ ಮಕ್ಕಳ ತೂಕವನ್ನು ನಿಭಾಯಿಸಬಹುದು. ಅಷ್ಟೇ ಅಲ್ಲದೆ ಬೊಜ್ಜು ಮೈ ಕ್ಯಾನ್ಸರ್ ಮುಂತಾದ ಕಾಯಿಲೆಗಳಿಗೆ ಕಾರಣವಾಗುತ್ತದೆ.

7. ಮನೆಯಲ್ಲಿ ಮದ್ಯಪಾನವನ್ನು ತ್ಯಜಿಸಿ.

ತಂಬಾಕು ಧೂಮಪಾನ ಮತ್ತು ಮದ್ಯದಲ್ಲಿರುವ ಕ್ಯಾನ್ಸರ್ ಉಂಟು ಮಾಡುವ ರಸಾಯನಿಕಗಳು (ಕಾರ್ಸಿನೋಜನ್) ಆರೋಗ್ಯವಂತ ಜೀವಕೋಶಗಳಿಗೆ ಹಾನಿ ಮಾಡಿ, ಕ್ಯಾನ್ಸರ್ ಉಂಟಾಗುವಂತೆ ಪ್ರೇರೇಪಿಸುತ್ತವೆ. ಇದರಿಂದ ಶ್ವಾಸಕೋಶ, ಬಾಯಿ, ಗಂಟಲು, ಅನ್ನ ನಾಳ ಇನ್ನಿತರ ಕ್ಯಾನ್ಸರ್ ಗಳು ಉಂಟಾಗುತ್ತವೆ. ಇದು ಬರಿ ಸೇವನೆ ಮಾಡುವರಿಗೆ ಮಾತ್ರವಲ್ಲದೆ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬಿರುತ್ತೆ. ಉದಾಹರಣೆಗೆ ಸಿಗರೆಟ್ ನಿಂದ ಬರುವ ಹೋಗೆ ಮಕ್ಕಳಲ್ಲಿ ನೇರವಾಗಿ ಅಪಾಯ ತರುತ್ತದೆ ಆದರಿಂದ ಮನೆಯಲ್ಲಿ ಇವುಗಳ ಸೇವನೆ ಬಗ್ಗೆ ಎಚ್ಚರವಹಿಸಿ.

Also read: ಟಿವಿ ಪ್ರಿಯರೆ ಎಚ್ಚರ; ಹೆಚ್ಚು ಹೊತ್ತು ಟಿವಿ ನೋಡಿದರೆ ಬರಿ ಕಣ್ಣಿಗೆ ಅಪಾಯವಲ್ಲ ಕ್ಯಾನ್ಸರ್ ಕೂಡ ಬರುತ್ತೆ..