ಮನೆಯಲ್ಲಿ ಕೂತು ಪಾರ್ಟ್ ಟೈಮ್ ನಲ್ಲಿ ಮಾಡುವ ಬ್ಯುಸಿನೆಸ್ ಗಳು ಇಲ್ಲಿವೆ ನೋಡಿ..!!

0
1729

Kannada News | kannada Useful Tips

ಮನೆಯಲ್ಲಿ ಕೂತು ಪಾರ್ಟ್ ಟೈಮ್ ನಲ್ಲಿ ಕೆಲಸ ಮಾಡಿ ಹಣ ಗಳಿಸಲು ಸಾಕಷ್ಟು ಮಾರ್ಗಗಳಿವೆ.. ಅನೇಕ ಮಹಿಳೆಯರು.. ತಮ್ಮ ತಮ್ಮ ಮನೆಯ ಕೆಲಸ ಮಾಡಿ ಬಿಡುವಿನ ಸಮಯದಲ್ಲಿ ದುಡಿಯುವ ಮನಸ್ಸಿದ್ದರೂ ದಾರಿ ಗೊತ್ತಿಲ್ಲದೇ ಸುಮ್ಮನಿರುತ್ತಾರೆ.. ವಿದ್ಯಾರ್ಥಿಗಳು ಕೂಡ ಪಾರ್ಟ್ ಟೈಮ್ ನಲ್ಲಿ ಉದ್ಯೋಗ ಮಾಡಿ ಹಣ ಗಳಿಸಿ ತಮ್ಮ ವಿದ್ಯಾಭ್ಯಾಸಕ್ಕೆ ತಾವೇ ನೆರವು ಮಾಡಿಕೊಳ್ಳುತ್ತಾರೆ.. ಅಂತವರಿಗೆ ನಮ್ಮದಿಂದಿಷ್ಟು ಸಲಹೆ ಇಲ್ಲಿದೆ ನೋಡಿ..

ನ್ಯೂಸ್ ಪೇಪರ್ ಹಾಕುವುದು

ಇದು ಬೆಂಗಳೂರಿನ ವಿದ್ಯಾರ್ಥಿಗಳಿಗೆ ಸಾಮಾನ್ಯವಾದ ವಿಷಯ.. ಇನ್ನು ರಾಜ್ಯದ ಇತರೆ ಭಾಗದ ಜನರಲ್ಲಿ ಕೆಲವರು ಇದನ್ನು ಅವಮಾನವೆಂದು ಭಾವಿಸುವುದೂ ಉಂಟು.. ಆದರೆ ಪಾರ್ಟ್ ಟೈಮ್ ಉದ್ಯೋಗ ಮಾಡಲು ಇದೊಂದು ಅತ್ಯುತ್ತಮವಾದ ದಾರಿ… ಬಂಡವಾಳದ ಅವಶ್ಯಕತೆಯೂ ಇರುವುದಿಲ್ಲ.. ಇನ್ನು ಇದನ್ನು ಅವಮಾನವೆಂದು ಭಾವಿಸಲೇ ಬೇಡಿ.. ಜನರಿಗೆ ಮಾಹಿತಿ ತಿಳಿಸುವ ಕಾರ್ಯವಿದು.. ದೇಶದ ರಾಷ್ಟ್ರಪತಿಗಳಾಗಿದ್ದ ಅಬ್ದುಲ್ ಕಲಾಮ್ ರವರು ಕೂಡ ಇದೇ ವೃತ್ತಿಯನ್ನು ಮಾಡಿ ಬೆಳೆದವರಲ್ಲವೇ.. ಬೆಳಗ್ಗಿನ ಜಾವ 2 ಘಂಟೆಯ ಕೆಲಸವಷ್ಟೆ.. ಆರೋಗ್ಯಕ್ಕೂ ಒಳ್ಳೆಯದೂ ಹಣಕಾಸಿಗೂ ಒಳ್ಳೆಯದು..

ಹೊಲಿಗೆ ಕೆಲಸ

ಇದು ಪಾರ್ಟ್ ಟೈಮ್ ಅಷ್ಟೇ ಅಲ್ಲ ಫುಲ್ ಟೈಮ್ ನಲ್ಲಿ ಮಾಡಿದರೂ ಕೈ ತುಂಬಾ ಹಣ ಗಳಿಸಬಹುದು.. ಹೌದು ಈಗಂತೂ ಟೈಲರ್ ಗಳಿಗೆ ಬೇಡಿಕೆ ಹೆಚ್ಚು.. ಅದರಲ್ಲೂ ಸರಿಯಾದ ಸಮಯಕ್ಕೆ ಹೊಲಿದು ಕೊಡುವ ಟೈಲರ್ ಗಳು ಈಗ ಸಿಗುವುದೇ ಇಲ್ಲ ಬಿಡಿ.. ಒಂದೆರೆಡು ತಿಂಗಳುಗಳ ಕಾಲ ತರಬೇತಿ ಪಡೆದು ಶುರು ಮಾಡಿ.. ಹೆಣ್ಣು ಮಕ್ಕಳಿಗಂತು ಇದು ಮನೆಯಲ್ಲೇ ಕೆಲಸ ಮಾಡಿ ಸಂಪಾದಿಸಲು ಹೇಳಿ ಮಾಡಿಸಿದ ಕೆಲಸವಾಗಿದೆ..

ಅಡುಗೆ ತರಬೇತಿ

ಇನ್ನು ನಿಮಗೆ ಬೇರೆ ಯಾವ ಕಲೆಯೂ ತಿಳಿದಿಲ್ಲವೆಂದರೆ.. ಅಡುಗೆಯಲ್ಲಿ ನಿಪುಣರಾಗಿದ್ದರೆ ಸಾಕು.. ಆದರೆ ಈ ಕೆಲಸ ಪಟ್ಟಣವಾಸಿಗಳಿಗೆ ಹೇಳಿ ಮಾಡಿಸಿದಂತೆ ಇದೆ.. ಈಗಾಗಲೇ ಪಟ್ಟಣ ದಲ್ಲಿ ವಾಸ ಮಾಡುವ ಎಷ್ಟೋ ಮಂದಿ ಬಿಡುವಿನ ವೇಳೆಯಲ್ಲಿ ಅಡುಗೆ ತರಬೇತಿಯನ್ನು ನೀಡಿ ಹಣವನ್ನು‌ ಗಳಿಸುತ್ತಿದ್ದಾರೆ..

ಬ್ಯೂಟಿಷಿಯನ್

ಹೆಣ್ಣು ಮಕ್ಕಳಿಗೆ ಇದೂ ಕೂಡ ಪಾರ್ಟ್ ಟೈಮ್ ನಲ್ಲಿ ಮಾಡಲು ಒಂದು ಒಳ್ಳೆಯ ಕೆಲಸ.. ಇದಕ್ಕೂ ಕೂಡ ಒಂದೆರೆಡು ತಿಂಗಳ ತರಬೇತಿಯ ಅವಶ್ಯಕತೆ ಇರುತ್ತದೆ ಅಷ್ಟೆ.. ಅದನ್ನು ಪಡೆದು ಕೆಲಸ ಮಾಡಬಹುದು..

ಮನೆಯ ಪಾಠ

ವಿಧ್ಯಾರ್ಥಿಗಳಾಗಿರಬಹುದು.. ಅಥವಾ ಮನೆಯ ಗೃಹಿಣಿಯಾಗಿರಬಹುದು.. ನೀವು ವಿದ್ಯೆ ಕಲಿತಿದ್ದರೆ ಅಷ್ಟೇ ಸಾಕು ಈ ಕೆಲಸ ಮಾಡಲು.. ಶಾಲೆಯಲ್ಲಿ ಓದುವ ಸಣ್ಣ ಸಣ್ಣ ಮಕ್ಕಳಿಗೆ ಮನೆಯ ಪಾಠ ಮಾಡುವ ಮೂಲಕ ಹಣವನ್ನೂ ಗಳಿಸಬಹುದು..‌ಜೊತೆಗೆ ವಿದ್ಯಾದಾನ ಮಾಡಿದ ಪುಣ್ಯವೂ ಲಭಿಸಲಿದೆ..

ಶೇರ್ ಮಾಡಿಕೊಳ್ಳಿ ಮುಂದೆ ಉಪಯೋಗವಾಗಬಹುದು..

Also Read: ಪರೀಕ್ಷಾ ತಯಾರಿ ಮತ್ತು ಓದುವ ಸಮಯ ಹೀಗಿರಲಿ