ಶತಕೋಟಿ ಒಡೆಯರ ಪಟ್ಟಿಗೆ ಪತಾಂಜಲಿ ಬಾಲಕೃಷ್ಣ

0
568

ನೋಟ್‍ ಬ್ಯಾನ್ ನಂತರ ಭಾರತದ ಮಾರುಕಟ್ಟೆಯಲ್ಲಿ ಏರುಪೇರು ಆಗಿದ್ದರೂ ಭಾರತದಲ್ಲಿನ ಶ್ರೀಮಂತರ ಸಂಖ್ಯೆ ಶೇ.16ರಷ್ಟು ಏರಿಕೆಯಾಗಿದೆ. 132 ಶ್ರೀಮಂತರ ಒಟ್ಟು ಆಸ್ತಿ 392 ಶತಕೋಟಿ ಡಾಲರ್‍ ಆಗಿದೆ.

ಫ್ಲಿಪ್‍ಕಾರ್ಟ್‍ ಮುಖ್ಯಸ್ಥ ಸಚಿನ್ ಮತ್ತು ಬಿನ್ನಿ ಬನ್ಸಾಲ್‍ ಶತಕೋಟಿ ಒಡೆಯರ ಪಟ್ಟಿಯಿಂದ ಹೊರಬಿದ್ದಿದ್ದಾರೆ. ಆದರೆ ಪತಾಂಜಲಿ ಆಯುರ್ವೇದ ಉತ್ಪನ್ನಗಳ ಸಂಸ್ಥೆಯ ಆಚಾರ್ಯ ಬಾಲಕೃಷ್ಣ 3.6 ಶತಕೋಟಿ ಆಸ್ತಿಯೊಂದಿಗೆ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ.

ಕ್ರಾಂಪ್ಟನ್‍ ಗ್ರೇವಿಸ್ ನ ಗೌತಮ್‍ ಥಾಪರ್‍, ಡಿವಿಸ್‍ ಲ್ಯಾಬ್ಸ್‍ನ ನೀಲಿಮಾ ಮೊಟಾಪರ್ತಿ, ಅಪೋಲೋ ಆಸ್ಪತ್ರೆಯ ಪ್ರತಾಪ್‍ ಸಿ ರೆಡ್ಡಿ ಮತ್ತು ಕುಟುಂಬ ಮತ್ತು ಇನ್ಫೋಸಿಸ್‍ನ ಸಂಸ್ಥಾಪಕ ನಂದನ್‍ ನೀಲಕೇಣಿ ದೇಶದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ಸ್ಥಾನ ಉಳಿಸಿಕೊಂಡಿದ್ದಾರೆ.

ಶ್ರೀಮಂತರ ಪಟ್ಟಿಯಲ್ಲಿ ಹೊಸದಾಗಿ 27 ಮಂದಿ ಸೇರ್ಪಡೆಗೊಂಡಿದ್ದಾರೆ. ಇದರಲ್ಲಿ ಪತಾಂಜಲಿ ಸಂಸ್ಥೆಯ ಆಚಾರ್ಯ ಬಾಲಕೃಷ್ಣ (3.6 ಶತಕೋಟಿ ಡಾಲರ್‍) ಮತ್ತು ಪೇಟಿಯಮ್‍ನ ಸಂಸ್ಥಾಪಕ ವಿಜಯ್‍ ಶೇಖರ್‍ ಶರ್ಮ ಶತಕೋಟಿ ಒಡೆಯರ ಪಟ್ಟಿಗೆ ಈ ಬಾರಿ ಸೇರ್ಪಡೆಯಾಗಿರುವುದು ಹೊಸ ಬೆಳವಣಿಗೆಯಾಗಿದೆ. ಉಳಿದಂತೆ ನಾದಿರ್‍ ಬಿ ಗೋದ್ರೆಜ್‍, ಸ್ಮಿತಾ ವಿ.ಕೃಷ್ಣ ಇತರರು.