ತಪ್ಪು ಜಾಹೀರಾತು ನೀಡಿದ ಪತಂಜಲಿ ರಾಮ್ ದೇವ್ ಸಂಸ್ಥೆಗೆ 11 ಲಕ್ಷ ದಂಡ

0
1504

ಹರಿದ್ವಾರ: ಯೋಗ ಗುರು ಬಾಬಾ ರಾಮದೇವ್ ಅವರ ಮಾಲಕತ್ವದ ಪತಂಜಲಿ ಆಯುರ್ವೇದ ಸಂಸ್ಥೆಗೆ ಸ್ಥಳೀಯ ನ್ಯಾಯಾಲಯವೊಂದು ದಂಡ ವಿಧಿಸಿದೆ. ಜನರಿಗೆ ದಾರಿ ತಪ್ಪಿಸುವ ರೀತಿಯಲ್ಲಿ ಜಾಹೀರಾತುಗಳನ್ನು ನೀಡುತ್ತಿದೆ ಎಂಬ ಕಾರಣಕ್ಕೆ ಪತಂಜಲಿ ಸಂಸ್ಥೆಯ ಮೇಲೆ ಸ್ಥಳೀಯ ನ್ಯಾಯಾಲಯ 11 ಲಕ್ಷ ರೂ. ದಂಡವನ್ನು ವಿಧಿಸಿದೆ.

ಉತ್ಪನ್ನಗಳನ್ನು ಬೇರೆ ಕಡೆ ತಯಾರಿಸಿ ತನ್ನ ಸ್ವಂತ ಉತ್ಪಾದನಾ ಘಟಕದಲ್ಲಿ ತಯಾರಿಸಿದ್ದೆಂದು ಲೇಬಲ್ ಅಂಟಿಸಿ ಮಾರಾಟ ಮಾಡಲಾಗುತ್ತಿದೆ ಎಂದು ನ್ಯಾಯಾಲಯ ಹೇಳಿದೆ. ಈ ಹಿನ್ನೆಲೆಯಲ್ಲಿ ಹರಿದ್ವಾರದ ಹೆಚ್ಚುವರಿ ಜಿಲ್ಲಾ ಮ್ಯಾಜಿಸ್ಟ್ರೇಟ್ ಕೋರ್ಟ್ ರಾಮದೇವ್ ಅವರ ಸಂಸ್ಥೆಗೆ 11 ಲಕ್ಷ ದಂಡ ವಿಧಿಸಿ ತೀರ್ಪು ಹೊರಡಿಸಿದೆ.

ಪತಂಜಲಿ ಸಂಸ್ಥೆಯು ಒಂದು ತಿಂಗಳೊಳಗೆ ದಂಡವನ್ನು ಪಾವತಿಸಬೇಕಾಗಿದೆ. ಅಷ್ಟೇ ಅಲ್ಲ, ಪತಂಜಲಿ ಹೆಸರಿನಡಿಯಲ್ಲಿರುವ ಉತ್ತನ್ನಗಳಲ್ಲಿ ಸುಧಾರಣೆ ಕಾಣದೇ ಇದ್ದರೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಹರಿದ್ವಾರದ ಜಿಲ್ಲಾ ಆಹಾರ ಸುರಕ್ಷಾ ಇಲಾಖೆಗೆ ಕೋರ್ಟ್ ಆದೇಶಿಸಿದೆ.

2012ರ ಆಗಸ್ಟ್ 16ರಂದು ಜೇನುತುಪ್ಪ, ಉಪ್ಪು, ಸಾಸಿವೆ ಎಣ್ಣೆ, ಜ್ಯಾಮ್, ಕಡಲೆಹಿಟ್ಟುಇತ್ಯಾದಿ ಪತಂಜಲಿ ಉತ್ತನ್ನಗಳ ಮೇಲೆ ಉತ್ತರಾಖಂಡ್’ನ ರುದ್ರಾಪುರದ ಲ್ಯಾಬ್’ನಲ್ಲಿ ಪರೀಕ್ಷೆ ನಡೆಸಲಾಗಿತ್ತು. ಇವುಗಳ ಗುಣಮಟ್ಟವು ನಿಗದಿತ ಮಟ್ಟದಲ್ಲಿಲ್ಲವೆಂದು ಲ್ಯಾಬ್’ನ ವರದಿ ತಿಳಿಸಿತ್ತು. ಆಗ, ಪತಂಜಲಿ ಸಂಸ್ಥೆಯ ಮೇಲೆ ನ್ಯಾಯಾಲಯದಲ್ಲಿ ಪ್ರಕರಣ ದಾಖಲಾಗಿ ಇಷ್ಟು ದಿನಗಳವರೆಗೆ ವಿಚಾರಣೆ ನಡೆದಿತ್ತು.

ವಿಚಾರಣೆ ನಡೆಸಿದ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶ ಲಲಿತ್ ನಾರಾಯಣ್ ಮಿಶ್ರಾ ಒಂದು ತಿಂಗಳೊಳಗೆ 5 ಲಕ್ಷ ರೂ.

ದಂಡವನ್ನು ಪಾವತಿಸಬೇಕೆಂದು ಆದೇಶಿಸಿದ್ದಾರೆ.

ಉತ್ಪನ್ನವು ಸೆಕ್ಷನ್ 52-53 (ಆಹಾರ ಭದ್ರತಾ ಗುಣಮಟ್ಟ), ಸೆಕ್ಷನ್ 23.1 (5) ಆಹಾರ ಭದ್ರತೆ ಮತ್ತು ಗುಣಮಟ್ಟ (ಪ್ಯಾಕೇಜಿಂಗ್ ಮತ್ತು ಲೇಬಲಿಂಗ್) ಕಾಯ್ದೆಯನ್ನು ಉಲ್ಲಂಘಿಸಿದೆ.