ರುಚಿಕರವಾದ ಪಾವ್ ಬಾಜಿ ಮಸಾಲಾ ದೋಸ ಮಾಡುವ ಸಿಂಪಲ್ ವಿಧಾನ..!!

0
1627

ದೋಸೆ ಒಂದು ದಕ್ಷಿಣ ಭಾರತೀಯ ತಿನಿಸು. ಇದು ಬೆಳಗಿನ ತಿಂಡಿಯಾಗಿ ಸರ್ವೇಸಾಮಾನ್ಯ. ಮನೆಯಲಿ ಸಾಮಾನ್ಯವಾಗಿ ಪ್ಲೇನ್ ದೋಸೆ ಅಥವಾ ಮಸಾಲಾ ದೋಸೆಯನ್ನು ಮಾಡಿ ನೀವು ಸವಿಯುತ್ತೀರಾ..ಹಾಗಾದರೆ ಬನ್ನಿ ಮನೆಯಲ್ಲಿ ರುಚಿರುಚಿಕರವಾದ ಪಾವ್ ಬಾಜಿ ಮಸಾಲಾ ದೋಸ ಹೇಗೆ ಮಾಡುವುದು ಎಂದು ತಿಳಿಯೋಣ. ಆರೋಗ್ಯಕ್ಕೂ ಒಳ್ಳೆಯದು ಮತ್ತು ತುಂಬಾ ರುಚಿಕರವಾಗಿರುತ್ತದೆ.

ಬೇಕಾಗುವ ಪದಾರ್ಥಗಳು:

 • 1 ಕಪ್ ದೋಸೆ ಹಿಟ್ಟು (ಸಿದ್ಧವಾದ ಹಿಟ್ಟು)
 • 3 ಟೀಸ್ಪೂನ್ ಎಣ್ಣೆ
 • 1 ಈರುಳ್ಳಿ ಸಣ್ಣದಾಗಿ ಹೆಚ್ಚಿಕೊಳ್ಳಿ
 • 3 ಟೀಸ್ಪೂನ್ ಕ್ಯಾಪ್ಸಿಕಮ್ ಸಣ್ಣದಾಗಿ ಹೆಚ್ಚಿಕೊಳ್ಳಿ
 • 1 ಟೊಮೆಟೊ, ಸಣ್ಣದಾಗಿ ಹೆಚ್ಚಿಕೊಳ್ಳಿ
 • 6 ಟೇಬಲ್ಸ್ಪೂನ್ ಬೇಯಿಸಿದ ತರಕಾರಿಗಳು (ಬಟಾಣಿ, ಆಲೂಗಡ್ಡೆ, ಹೂಕೋಸು)
 • 6 ಟೀಸ್ಪೂನ್ ಟೊಮೆಟೊ ಸಾಸ್
 • 3 ಟೀಸ್ಪೂನ್ ತೆಂಗಿನಕಾಯಿ ಚಟ್ನಿ
 • 6 ಟೀ ಚಮಚ ಚಿಲ್ಲಿ ಸಾಸ್
 • 1½ ಟೀಸ್ಪೂನ್ ಪಾವ್ ಬಾಜಿ ಮಸಾಲಾ ಪುಡಿ
 • ರುಚಿಗೆ ಉಪ್ಪು
 • 3 ಟೀಸ್ಪೂನ್ ಬೆಣ್ಣೆ
 • 2 ಚಮಚ ಕೊತ್ತಂಬರಿ ಸೊಪ್ಪು, ಸಣ್ಣದಾಗಿ ಹೆಚ್ಚಿಕೊಳ್ಳಿ

ಮಾಡುವ ವಿಧಾನ:

ಮೊದಲನೆಯದಾಗಿ ದೋಸಾ ಹಂಚನ್ನು ಒಲೆಯಮೇಲೆ ಇಟ್ಟು ಬಿಸಿಯಾಗಲು ಬಿಡಬೇಕು. ಬಿಸಿಯಾದ ನಂತರ ಒಂದು ಟೀಸ್ಪೂನ್ ಎಣ್ಣೆ ಯನ್ನು ದೋಸಾ ಹಂಚಿಗೆ ಸವರಬೇಕು.

ನಂತರ ಬಿಸಿಯಾದ ಮೇಲೆ ನೀರನ್ನು ಸಿಂಪಡಿಸಿ ಬಟ್ಟೆಯಿಂದ ವರಸಬೇಕು. (ಇದು ಹಂಚನ್ನು ಲ್ಪವಾಗಿ ತಣ್ಣಗಾಗಲು ಸಹಾಯ ಮಾಡುತ್ತದೆ ಮತ್ತು ದೋಸೆಗೆ ಗರಿಗರಿಯಾದ ಗೋಲ್ಡನ್ ಬಣ್ಣವನ್ನು ಪಡೆಯುತ್ತದೆ.)

ಈಗ ದೋಸೆ ಹಿಟ್ಟನ್ನು ಸ್ಪೂನ್ ನಿಂದಲೇ ಅಥವಾ ಒಂದು ಲೋಟದಿಂದಲೋ ತೆಗೆದುಕೊಂಡು ಹಂಚಿನಮೇಲೆ ಸುರಿಯಿರಿ ಮತ್ತು ನಿಧಾನವಾಗಿ ಹರಡಿ. (ಗ್ಯಾಸ್ ಅನ್ನು ಸಣ್ಣ ಉರಿಯಲ್ಲಿ ಇಟ್ಟುಕೊಳ್ಳಿ)

2 ಟೀಸ್ಪೂನ್ ಕತ್ತರಿಸಿದ ಈರುಳ್ಳಿ, 1 ಟೀಸ್ಪೂನ್ ಕತ್ತರಿಸಿದ ಕ್ಯಾಪ್ಸಿಕಮ್ ಮತ್ತು 2 ಟೀಸ್ಪೂನ್ ಕತ್ತರಿಸಿದ ಟೊಮೆಟೊ ವನ್ನು ದೋಸೆಯಮೇಲೆ ಹಾಕಿಕೊಳ್ಳಿ.

2 ಟೀಸ್ಪೂನ್ ಬೇಯಿಸಿದ ತರಕಾರಿಗಳನ್ನು ಕೂಡಾ ಸೇರಿಸಿ (ಬೇಯಿಸಿದ ಬಟಾಣಿ, ಆಲೂಗಡ್ಡೆ ಮತ್ತು ಹೂಕೋಸು ಅನ್ನು ಹಿಸುಕಿಕೊಂಡಿರಿ) ನಂತರ ಅದಕ್ಕೆ 2 ಟೀಸ್ಪೂನ್ ಟೊಮೆಟೊ ಸಾಸ್, 1 ಟೀಸ್ಪೂನ್ ತೆಂಗಿನಕಾಯಿ ಚಟ್ನಿ ಮತ್ತು 2 ಟೀಸ್ಪೂನ್ ಚಿಲ್ಲಿ ಸಾಸ್ ಸೇರಿಸಿ. ½ ಟೀಸ್ಪೂನ್ ಪಾವ್ ಬಾಜಿ ಮಸಾಲಾ ಪುಡಿ ಮತ್ತು ರುಚಿಗೆ ಉಪ್ಪು ಸೇರಿಸಿ.

ಹೆಚ್ಚುವರಿಯಾಗಿ 1 ಟೀಸ್ಪೂನ್ ಬೆಣ್ಣೆಯನ್ನು ಸೇರಿಸಿ ಚೆನ್ನಾಗಿ ದೋಸೆಯ ಸುತ್ತಲೂ ಹರಡಿಸಿಕೊಳ್ಳಿ .

2 ನಿಮಿಷದ ನಂತರ ಕತ್ತರಿಸಿದ ಈರುಳ್ಳಿ ಮತ್ತು ಕೊತ್ತಂಬರಿ ಸೊಪ್ಪನ್ನು ಹಾಕಿ 1 ನಿಮಿಷ ಬೇಯಲು ಬಿಡಿ (ದೋಸೆ ಕೆಂಪು ಬಣ್ಣಕ್ಕೆ ಬರುವ ವರೆಗು)

ಈಗ ಪಾವ್ ಬಾಜಿ ಮಸಾಲಾ ದೋಸ ಸಿದ್ಧವಾಗಿದೆ ಇದನ್ನು ತೆಂಗಿನಕಾಯಿ ಚಟ್ನಿ ಅಥವಾ ಬೆಣ್ಣೆಯೊಂದಿಗೆ ಸವಿಯಿರಿ.

ಕೃಪೆ: hebbars kitchen