ಪೇಟಿಎಂ ಈಗ ಕೇವಲ ಮೊಬೈಲ್ ಆಪ್ ಮಾತ್ರ ಅಲ್ಲ, ಹೊಸ ಪೇಟಿಎಂ ಕಾರ್ಡ್-ನಿಂದ ATM ಗಳಲ್ಲಿ ಹಣಾನು ಡ್ರಾ ಮಾಡಬಹುದು, ಹೇಗೆ ಗೊತ್ತಾ?

0
697

ಇ-ವ್ಯಾಲೆಟ್ ದಿಗ್ಗಜ ಪೇಟಿಎಂ ತನ್ನ ಗ್ರಾಹಕರಿಗೆ ಇನ್ನಷ್ಟು ಆಧುನಿಕ ಸೌಲಭ್ಯಗಳನ್ನು ಒದಗಿಸುವ ದಿಸೆಯಲ್ಲಿ ಹೆಜ್ಜೆ ಇಟ್ಟಿದೆ. ನೋಟು ನಿಷೇಧದ ಬಳಿಕ ಹೆಚ್ಚು ಚಾಲ್ತಿಗೆ ಬಂದಿದ್ದ ಪೇಟಿಎಂ ಪೇಮೆಂಟ್ಸ್ ಇದೀಗ ತನ್ನ ಗ್ರಾಹಕರಿಗೆ ಎಟಿಎಂ ಕಾರ್ಡ್ ನೀಡಲು ಮುಂದಾಗಿದೆ.

ಈಗಾಗಲೆ ಪೇಟಿಎಂಗೆ 21.8 ಕೋಟಿ ಮಂದಿ ಗ್ರಾಹಕರಿದ್ದಾರೆ. ಗ್ರಾಹಕರಿಗೆ ಉತ್ತಮ ಸೇವೆ ನೀಡಲು ಇದೆ ಮೊದಲನೇ ಬಾರಿ ಪೇಟಿಎಂ ಪೇಮೆಂಟ್ಸ್ ಬ್ಯಾಂಕ್ ಲಿಮಿಟೆಡ್‌ ಎಟಿಎಂ ಕಾರ್ಡ್ ಬಿಡುಗಡೆ ಮಾಡುತ್ತಿದೆ. ತಿಂಗಳ ಹಿಂದೆ ಅಷ್ಟೇ ಪೇಟಿಎಂ ತನ್ನ LOS ಆಯಪ್ ನಲ್ಲಿ UPIಅನ್ನು ಲಾಂಚ್ ಮಾಡಲಾಗಿತ್ತು. ಗ್ರಾಹಕರು ತಮ್ಮದೇ ಆದ ಪೇಟಿಎಂ UPI ID ಗಳನ್ನ ಹೊಂದಲು ಅವಕಾಶ ಕಲ್ಪಿಸಿತ್ತು. ಈ ಪೇಟಿಎಂ ಡೆಬಿಟ್ ಕಾರ್ಡ್ ಮೂಲಕ ಯಾವುದೇ ಬ್ಯಾಂಕ್ ಎಟಿಎಂನಿಂದ ಹಣವನ್ನು ಹಿಂತೆಗೆದುಕೊಳ್ಳಲು ಮತ್ತು ಭಾರತದ ಭೌತಿಕ ಮಳಿಗೆಗಳಲ್ಲಿ ಶಾಪಿಂಗ್ ಮಾಡಲು ಬಳಸಬಹುದಾಗಿದೆ.

ಇದರಿಂದ ಗ್ರಾಹಕರಿಗೆ ಮತ್ತಷ್ಟು ಅನುಕೂಲವಾಗಲಿದೆ. ಉದಾಹರಣೆಗೆ ನಿಮ್ಮ ಸೇವಿಂಗ್ಸ್ ಬ್ಯಾಂಕ್ ಖಾತೆಯನ್ನೂ ಇದಕ್ಕೆ ಲಿಂಕ್ ಮಾಡಬಹುದಾಗಿದೆ. ನೇರವಾಗಿ ಬ್ಯಾಂಕ್ ಖಾತೆಗೆ ಹಣ ಪಡೆಯಬಹುದು ಮತ್ತು ಸೆಂಡ್ ಕೂಡ ಮಾಡಬಹುದಾಗಿದೆ. ಪೇಟಿಎಂನಲ್ಲಿ ಸೇವಿಂಗ್ಸ್ ಬ್ಯಾಂಕ್ ಖಾತೆ ತೆರೆದ ಗ್ರಾಹಕರು ಎಟಿಎಂ ಕಾರ್ಡ್ ಅನ್ನು ತುಂಬಾ ಸರಳವಾಗಿ ಪಡೆಯಬಹುದಾಗಿದೆ.

ಎಲ್ಲಿಯಾದರೂ ಹಣ ಪಡೆಯಲು ಬಳಸಬಹುದಾದ ಪೇಟಿಎಂ ಡಿಜಿಟಲ್ ಡೆಬಿಟ್‌ಕಾರ್ಡ್ ಅನ್ನು ಹೇಗೆ ಪಡೆಯುವುದು ಅಂತ ಯೋಚಿಸುತ್ತಿದ್ದೀರಾ…? ಮೊದಲು Paytm ಅಪ್ಲಿಕೇಶನ್ ಅನ್ನು ಓಪನ್ ಮಾಡಿ ಅದರ ಬಲಭಾಗದಲ್ಲಿರುವ ಬ್ಯಾಂಕ್ ಐಕಾನ್ ಅನ್ನು ಕ್ಲಿಕ್ ಮಾಡಿ. ನಂತರ ಡೆಬಿಟ್ ಮತ್ತು ಎಟಿಎಂ ಕಾರ್ಡ್ ಆಯ್ಕೆಯನ್ನು ಆರಿಸಲು ಕೆಳಗೆ ಸ್ಕ್ರಾಲ್ ಮಾಡುತ್ತ ಹೋಗಿ ಅಲ್ಲಿ ಸಿಗುವ ಎಟಿಎಂ ಕಾರ್ಡ್ ಅನ್ನು ವಿನಂತಿಸಿ ಆಯ್ಕೆಯನ್ನು ಸೆಲೆಕ್ಟ್ ಮಾಡಿಕೊಳ್ಳಿ. ಈಗ ಡೆಲಿವರಿ ವಿಳಾಸವನ್ನು ಆಯ್ಕೆಮಾಡಿ ಮತ್ತು ಪಾವತಿಸಲು ಮುಂದುವರಿಯಿರಿ ಕ್ಲಿಕ್ ಮಾಡಿ. ನಂತರ ಪಾವತಿ ಪೂರ್ಣಗೊಳಿಸಿ ಮತ್ತು ಕಾರ್ಡ್‌ ವಿತರಣಾ ಸ್ಥಿತಿಯನ್ನು ಟ್ರ್ಯಾಕ್ ಮಾಡೋದನ್ನು ಮರಿಯಬೇಡಿ.