ಕಡಲೆಕಾಯಿ ಬಾಯಿಗೆ ರುಚಿ, ದೇಹಕ್ಕೂ ಹಿತ.! ಹಾಗಾದರೆ ಕಡಲೆಕಾಯಿ ಬೀಜದ ಚಿಕ್ಕಿ ಇಂದೇ ಮಾಡಿ ಸವಿಯಿರಿ..!!

0
1735

ಚಿಕ್ಕಿ ಸಾಮಾನ್ಯವಾಗಿ ಕಡಲೆಕಾಯಿ ಮತ್ತು ಬೆಲ್ಲದಿಂದ ತಯಾರಿಸಲಾದ ಒಂದು ಸಾಂಪ್ರದಾಯಿಕ ಭಾರತೀಯ ಮಿಠಾಯಿ.

  • 2 ಬಟ್ಟಲು ಕಡಲೆಕಾಯಿ ಬೀಜ
  • 1½ ಬಟ್ಟಲು ಬೆಲ್ಲ
  • 2 ಟೀಸ್ಪೂನ್ ನೀರು

ಮಾಡುವ ವಿಧಾನ

ಮೊದಲನೆಯದಾಗಿ, ಬಾಣಲೆ ತೆಗೆದುಕೊಂಡು ಒಲೆಯ ಮೇಲಿಟ್ಟು ಕಡಲೆಬೀಜವನ್ನು ಚೆನ್ನಾಗಿ ಉರಿಯಬೇಕು. ನಂತರ ಬೀಜದ ಮೇಲಿನ ಹೊಟ್ಟನ್ನು ಸಂಪೂರ್ಣವಾಗಿ ತೆಗೆದಿಟ್ಟುಕೊಳ್ಳಬೇಕು.

ಕಡಲೆಕಾಯಿ ಬೀಜದ ಸಿಪ್ಪೆಯನ್ನು ತೆಗೆದುಕೊಂಡು ಬದಿಗಿರಿಸಿ.

ಬಳಿಕ ಇದೇ ಬಾಣಲೆಗೆ 1½ ಕಪ್ ಬೆಲ್ಲವನ್ನು, 2 ಟೀಸ್ಪೂನ್ ನೀರು ಹಾಕಿ ಬೆಲ್ಲವನ್ನು ಸಣ್ಣ ಉರಿಯಲ್ಲಿ ಕೈಯಾಡಿಸುತ್ತಿರಬೇಕು. ಬೆಲ್ಲ ಕರಗುವ ತನಕ ಚೆನ್ನಾಗಿ ಬೆರೆಸಿ. ಬೆಲ್ಲ ಗಟ್ಟಿಯಾಗುವವರೆಗೂ ಉರಿಯಬೇಕು.

ಬಳಿಕ ಸಣ್ಣ ಬಟ್ಟಲಿನಲ್ಲಿ ನೀರು ತೆಗೆದುಕೊಂಡು ಅದಕ್ಕೆ ಉರಿದುಕೊಂಡ ಬೆಲ್ಲದ ಪಾಕದ ಒಂದು ಹನಿಯನ್ನು ಹಾಕಿ. ಬೆಲ್ಲ ಗಟ್ಟಿಯಾದರೆ ಪಾಕ ಸಿದ್ಧವಾಗಿದೆ ಎಂದರ್ಥ. ನಂತರ ಕಡಲೆಕಾಯಿ ಬೀಜವನ್ನು ಹಾಕಿ 2 ನಿಮಿಷ ಚೆನ್ನಾಗಿ ಮಿಶ್ರಣ ಮಾಡಿಕೊಳ್ಳಬೇಕು.

ತಕ್ಷಣ ಕಡಲೆಕಾಯಿ ಬೀಜ ಮತ್ತು ಬೆಲ್ಲದ ಮಿಶ್ರಣವನ್ನು ಬೆಣ್ಣೆ ಕಾಗದವನ್ನು ಮುಚ್ಚಿದ ತಟ್ಟೆಗೆ ಸುರಿಯಿರಿ. ನಂತರ ಮೇಲ್ಭಾಗವನ್ನು ಮೃದುಗೊಳಿಸಲು ಸಣ್ಣ ಕಪ್ ನಿಂದ ಹರಡಿಸಿ (ಪ್ಯಾಟ್ ಮಾಡಿ).

ಒಂದು ನಿಮಿಷ ತಣ್ಣಗಾಗಲು ಬಿಡಿ. ನಂತರ ಚೌಕಾಕ್ರದಲ್ಲಿ ಕತ್ತರಿಸಿ

ಕಡಲೆಕಾಯಿ ಬೀಜದ ಚಿಕ್ಕಿ ಸವಿಯಲು ಸಿದ್ದ

ಕೃಪೆ: hebbars kitchen