ಮುಚ್ಚುವ ಹಂತಕ್ಕೆ ಬಂದ ಅತ್ಯಂತ ರಾಜಧಾನಿಯ ದೊಡ್ಡ ಕೈಗಾರಿಕಾ ಪ್ರದೇಶ ಪೀಣ್ಯ; ಕೆಲಸ ಕಳೆದುಕೊಳ್ಳುವ ಸ್ಥಿತಿಯಲ್ಲಿ ಲಕ್ಷಾಂತರ ಕಾರ್ಮಿಕರು!

0
586

ಲಕ್ಷಾಂತರ ಜನರಿಗೆ ಉದ್ಯೋಗ ನೀಡಿರುವ ಬೆಂಗಳೂರು ಈಗ ಅರ್ಥಿಕ ಸಂಕಷ್ಟಕ್ಕೆ ಸಿಲುಕಿದೆ ಎನ್ನುವ ಮಾಹಿತಿ ಕಳೆದ ವರ್ಷದಿಂದ ಕೇಳಿ ಬರುತ್ತಿತ್ತು, ಈ ಬೆನ್ನೆಲೆಯಲ್ಲಿ ಹಲವು ಕೈಗಾರಿಕೆಗಳು ಮುಚ್ಚುವ ಸ್ಥಿತಿಗೆ ಬಂದಿದ್ದು ಅದೇ ಕೆಲಸವನ್ನು ನಂಬಿಕೊಂಡಿರುವ ಕಾರ್ಮಿಕರು ಕೆಲಸ ಕಳೆದುಕೊಳ್ಳುವ ಭಯದಲ್ಲಿದ್ದಾರೆ. ಅದರಂತೆ ದಕ್ಷಿಣಾ ಏಷ್ಯಾದಲ್ಲೇ ಅತ್ಯಂತ ದೊಡ್ಡ ಕೈಗಾರಿಕಾ ಪ್ರದೇಶ ಎಂಬ ಹೆಗ್ಗಳಿಕೆಗೆ ಪಾತ್ರವಾಗಿರುವ ಪೀಣ್ಯ 45 ಚ.ಕಿಲೋ ಮೀಟರ್ ವಿಸ್ತೀರ್ಣದ ಕೈಗಾರಿಕಾ ಪ್ರದೇಶದಲ್ಲಿ ಆಟೋ ಮೊಬೈಲ್​ನಿಂದ ಗಾರ್ಮೆಂಟ್ಸ್​ ವರೆಗೆ 10 ಸಾವಿರ ಕಾರ್ಖಾನೆಗಳಿವೆ. 12 ಲಕ್ಷ ಕಾರ್ಮಿಕರು ನಂಬಿಕೊಂಡಿದ್ದಾರೆ. ಆದರೆ, ದೇಶದ ಆರ್ಥಿಕ ಮುಗ್ಗಟ್ಟಿನಿಂದಾಗಿ ಈ ಎಲ್ಲಾ ಕೈಗಾರಿಕೆಗಳು ಏದುಸಿರು ಬಿಡುತ್ತಿದ್ದು ಇದೀಗ ಮುಚ್ಚುವ ಹಂತಕ್ಕೆ ಬಂದು ನಿಂತಿವೆ.

ಮುಚ್ಚಲಿವೇ ಪೀಣ್ಯ ಕೈಗಾರಿಕೆಗಳು?

ಹೌದು ಪೀಣ್ಯ ಕೈಗಾರಿಕಾ ಪ್ರದೇಶದಲ್ಲಿ ದೇಶ ವಿದೇಶದ ನಾನಾ ಭಾಗಗಳಿಗೆ ಇಲ್ಲಿ ತಯಾರಾಗುವ ಆಟೋ ಮೊಬೈಲ್ ಬಿಡಿ ಭಾಗಗಳು, ಪೌಡರ್ ಕೋಟಿಂಗ್, ಫ್ಯಾಬ್ರಿಕೇಷನ್, ಪ್ಯಾಕೇಜಿಂಗ್ ಇಂಡಸ್ಟ್ರಿ, ಎಲೆಕ್ಟ್ರೋ ಪ್ಲೇಟಿಂಗ್, ಸಿಎನ್​ಸಿ ಮೆಷಿನ್ ಜಾಬ್ ವರ್ಕ್, ಮಷಿನ್ ಟೂಲ್ ಕಾಂಪೊನೆಂಟ್ ಸಪ್ಲೇಯರ್ಸ್, ವಿದ್ಯುತ್ ಟ್ರಾನ್ಸ್​ಫಾರ್ಮರ್​ ಬಿಡಿ ಭಾಗಗಳನ್ನು ತಯಾರಿಸುವ ಕಾರ್ಖಾನೆಗಳು ಇಲ್ಲಿದ್ದು ಬೆಂಗಳೂರಿನ ಪ್ರಮುಖ ಆದಾಯ ಹಾಗೂ ಆರ್ಥಿಕತೆಯ ಮೂಲ ಇದೇ ಪೀಣ್ಯ ಕೈಗಾರಿಕಾ ಪ್ರದೇಶ ಎನ್ನಲಾಗುತ್ತೆ. ಅದರಂತೆ ಒಂದು ಅಂದಾಜಿನ ಪ್ರಕಾರ ಪೀಣ್ಯಾ ಕೈಗಾರಿಕಾ ಪ್ರದೇಶದ ಒಂದು ತಿಂಗಳ ವಹಿವಾಟು ಸುಮಾರು 2,500 ಕೋಟಿಗೂ ಅಧಿಕವಿದ್ದು.

ಇನ್ನೂ ಪ್ರತಿ ಕೈಗಾರಿಕೆಯಲ್ಲಿ ದಿನಕ್ಕೆ 12 ರಿಂದ 15 ಲಕ್ಷ ವಹಿವಾಟು ನಡೆಯುತ್ತಿತ್ತು. ಹೀಗಾಗಿ ಇಲ್ಲಿನ ಎಲ್ಲಾ ಕೈಗಾರಿಕೆಗಳು 24 ಗಂಟೆಯೂ ಚಾಲ್ತಿಯಲ್ಲಿರುತ್ತಿದ್ದವು, ಎಲ್ಲರಿಗೂ ಕೈತುಂಬಾ ಕೆಲಸವಿತ್ತು. ವಾರಾಂತ್ಯದ ರಜೆಯಲ್ಲೂ ಓವರ್ ಟೈಮ್ ಕೆಲಸ ಮಾಡುತ್ತಿದ್ದ ಕಾರ್ಮಿಕರು ಒಳ್ಳೆಯ ದುಡಿಮೆ ಮಾಡಿಕೊಳ್ಳುತ್ತಿದ್ದರು. ಆದರೆ, ಈಗಿನ ಪರಿಸ್ಥಿತಿ ನೋಡಿದರೆ ಕೆಲ ಕಾರ್ಖಾನೆಗಳ ಮಾರಾಟ ಶೇ. 60 ರಷ್ಟು ಕುಸಿದಿದ್ದರೆ, ಸಣ್ಣ ಮತ್ತು ಅತಿ ಸಣ್ಣ ಕೈಗಾರಿಕೆಗಳಲ್ಲಿ ಶೇ.90 ರಷ್ಟು ಮಾರಾಟ ತಗ್ಗಿದೆ. ಬಿಎಫ್​ಡಬ್ಲ್ಯೂ, ಎಎಂಎಸ್, ಎಸಿಇ ಡಿಸೈನರ್ಸ್​ನಂತಹ ದೊಡ್ಡ ಕಂಪೆನಿಗಳು ತಿಂಗಳಿಗೆ 250 ಯಂತ್ರಗಳನ್ನು ತಯಾರಿಸಿ ಮಾರಾಟ ಮಾಡುತ್ತಿದ್ದವು. ಆದರೆ, ಈಗ ಈ ಕಂಪೆನಿಯ ಗೋದಾಮಿನಲ್ಲಿ ತಲಾ ಒಂದು ಸಾವಿರಕ್ಕೂ ಅಧಿಕ ಯಂತ್ರಗಳು ಧೂಳು ಹಿಡಿಯುತ್ತಿವೆ. ಇದಕ್ಕೆ ಕಾರಣ ಹೇಳುತ್ತಿರುವ ಕಾರ್ಖಾನೆ ಮಾಲೀಕರು ದೇಶದ ಕೈಗಾರಿಕ ವಲಯದ ಮೇಲೆ ಎರಗಿರುವ ಆರ್ಥಿಕ ಹಿಂಜರಿತವೇ ಇದಕ್ಕೆಲ್ಲ ಕಾರಣ ಎನ್ನುತ್ತಾರೆ.

ಇದರ ಪರಿಣಾಮ ಬಹುತೇಕ ಕಾರ್ಖಾನೆಗಳು ಮುಚ್ಚುವ ಹಂತಕ್ಕೆ ಬಂದು ನಿಂತಿವೆ. ದಿನಕ್ಕೆ 24 ಗಂಟೆ ಮೂರು ಪಾಳಿಯಲ್ಲಿ ಕೆಲಸ ನೀಡುತ್ತಿದ್ದ ಕಾರ್ಖಾನೆಗಳು ಈಗ ದಿನಕ್ಕೆ 5 ರಿಂದ 6 ಗಂಟೆ ಮಾತ್ರ ಕೆಲಸ ನಿರ್ವಹಿಸುತ್ತಿವೆ. ಪತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಈ ಕೈಗಾರಿಕೆಗಳನ್ನೇ ನಂಬಿದ್ದ ಲಕ್ಷಾಂತರ ಜನ ಇದೀಗ ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗಿ ಬೀದಿಗೆ ಬೀಳುವಂತಾಗಿದೆ. ಎಂದು ಈ ಕುರಿತು ಈಗಾಗಲೇ ಟ್ವೀಟ್ ಮೂಲಕ ತನ್ನ ಕಷ್ಟವನ್ನು ಹಂಚಿಕೊಂಡಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್, ಕೈಗಾರಿಕಾ ಪ್ರದೇಶ ಪೀಣ್ಯ. ಶೇ.70 ರಷ್ಟು ವಹಿವಾಟು ಕುಸಿತದೊಂದಿಗೆ 10 ಸಾವಿರಕ್ಕೂ ಹೆಚ್ಚು ಕಾರ್ಖಾನೆಗಳು (ಐಸಿಯು) ತೀವ್ರ ನಿಗಾ ಘಟಕದಲ್ಲಿವೆ. 12 ಲಕ್ಷಕ್ಕೂ ಹೆಚ್ಚು ಕಾರ್ಮಿಕರು ಕೈತುಂಬಾ ಕೆಲಸವಿಲ್ಲದೆ ಸಂಕಷ್ಟಕ್ಕೊಳಗಾಗಿ, ಕೆಲಸ ಕಳೆದುಕೊಳ್ಳುವ ಸ್ಥಿತಿಯಲ್ಲಿದ್ದಾರೆ ಎಂದು ಬರೆದುಕೊಂಡಿದೆ.

Also read: ಬಿಗ್ ಬ್ರೇಕಿಂಗ್; ಸಂಜೆಯೊಳಗೆ ರಾಜ್ಯದ ರೈತರ ಮೇಲೆ ದಾಖಲಾಗಿರುವ ಕೇಸ್‌ ವಾಪಾಸ್ ಪಡೆಯುವಂತೆ ಸಿಎಂ ಯಡಿಯೂರಪ್ಪ ಆದೇಶ.!