ಅಹಿಂಸಾತ್ಮಕ ಕಂಬಳ ನಡೆಸುವಂತೆ ಪೇಜಾವರ ಸ್ವಾಮೀಜಿ ಮನವಿ

0
732

ಉಡುಪಿ :ಕಂಬಳ ಕ್ರೀಡೆ ಹಿಂಸಾರಹಿತವಾಗಿ ನಡೆಯಬೇಕು. ಯಾವ ಪ್ರಾಣಿಗೂ ಕ್ರೀಡೆಯಲ್ಲಿ ಹಿಂಸೆ ನೀಡಬಾರದು. ಓಟದ ವೇಳೆ ಕೋಣ, ಎತ್ತುಗಳಿಗೆ ಹೊಡೆಯುವವುದಕ್ಕೆ ವಿರೋಧವಿದೆ ಎಂದು ಉಡುಪಿ ಪೇಜಾವರ ಮಠದ ವಿಶ್ವೇಶತೀರ್ಥ ಸ್ವಾಮೀಜಿ ಹೇಳಿದ್ದಾರೆ.

ಮನುಷ್ಯರ ಓಟದ ಸ್ಪರ್ಧೆಯಂತೆ ಕೋಣಗಳ ಓಟ ಇರಬೇಕು. ಮನುಷ್ಯರ ಓಟದ ಸ್ಪರ್ಧೆಯಲ್ಲಿ ಹೊಡೆಯುವುದಿಲ್ಲ. ಇದೇ ಮಾದರಿಯಲ್ಲಿಯೇ ಕಂಬಳ ಕ್ರೀಡೆ ನಡೆಯಬೇಕು, ಬೆತ್ತದಿಂದ ಹೊಡೆಯುವುದಕ್ಕೆ ವಿರೋಧಿಸುತ್ತೇನೆ ಎಂದು ತಿಳಿಸಿದ್ದಾರೆ.

dsc_6733

ಜಲ್ಲಿಕಟ್ಟು ಕ್ರೀಡೆಯ ಹಿಂಸೆ ಕಂಬಳಕ್ಕೆ ಹೊಲಿಸಲಾಗದು, ಓಟದ ವೇಳೆ ಕೋಣ, ಎತ್ತುಹಳಿಗೆ ಹೊಡೆಯುವುದಕ್ಕೆ ವಿರೋಧವಿದೆ ಹಾಗೂ ಯಾವ ಪ್ರಾಣಿಗೂ ಕ್ರೀಡೆಯಲ್ಲಿ ಹಿಂಸೆ ನೀಡಬಾರದು ಕಂಬಳ ಕ್ರೀಡೆ ಹಿಂಸಾರಹಿತವಾಗಿ ನಡೆಯಬೇಕು ಎಂದು ಅಹಿಂಸಾತ್ಮಕ ಕಂಬಳಕ್ಕೆ ನಡೆಸುವಂತೆ ಕಂಬಳ ಹೋರಾಟಗಾರರಲ್ಲಿ ಉಡುಪಿಯಲ್ಲಿ ಪೇಜಾವರ ವಿಶ್ವೇಶತೀರ್ಥ ಸ್ವಾಮೀಜಿ ಮನವಿಮಾಡಿಕೊಂಡಿದ್ದಾರೆ.