ಪೇಜಾವರ ಶ್ರೀಗಳ ಒಂದೇ ಕರೆಗೆ ವರದಕ್ಷಿಣೆ ಮತ್ತು ದುಶ್ಚಟ ಬಿಟ್ಟ ದೇಶದ ಸಾವಿರಾರು ಯುವಜನ…!

0
441

ಉಡುಪಿಯ ಪೇಜಾವರ ಶ್ರೀಗಳು ಯಾವಾಗಲೂ ಸಮಾಜದ ಒಳಿತಿಗಾಗಿ ಏನಾದರೊಂದು ಕೆಲಸ ಮಾಡುತ್ತಲೇ ಇರುತ್ತಾರೆ. ವಯಸ್ಸು 86 ತುಂಬಿದ್ದರು ಇನ್ನು ವಿಶ್ವೇಶ ತೀರ್ಥ ಸ್ವಾಮೀಜಿಯವರಿಗೆ ಹರೆಯದ ಉತ್ಸಾಹ, ಜನರ ಕುರಿತು ಅವರಿಗೆ ಎಷ್ಟು ಕಾಳಜಿಯಿದೆ ಎಂಬುದು ಅವರ ಈ ಕಾರ್ಯದಿಂದಲೇ ತಿಳಿಯುತ್ತದೆ. ಏನದು ಕಾರ್ಯ ನೀವೇ ನೋಡಿ.

ಕೇವಲ ರಾಜ್ಯದಿಂದಲೇ ಮಾತ್ರವಲ್ಲ ದೇಶದೆಲ್ಲೆಡೆ ಲಕ್ಷಾಂತರ ಶಿಷ್ಯರನ್ನು ಮತ್ತು ಭಕ್ತಾದಿಗಳನ್ನು ಹೊಂದಿರುವ ಪೇಜಾವರ ಶ್ರೀಗಳು, ಎರಡು ವರ್ಷಗಳ ಹಿಂದೆ ದುಶ್ಚಟ ನಿವಾರಣಾ ಹುಂಡಿಯನ್ನು ಸ್ಥಾಪಿಸಿ ಅದರಲ್ಲಿ ವಿವಿಧ ದುಶ್ಚಟಗಳಿಂದ ಮುಕ್ತರಾಗಲು ಸಂಕಲ್ಪ ಪತ್ರವನ್ನು ಹಾಕಲು ತಿಳಿಸಿದ್ದರು. ಸಂಕಲ್ಪ ಪತ್ರವನ್ನು ಮಠದಿಂದ ಪಡೆದು ಅದರಲ್ಲಿ ತಮಗಿರುವ ದುಶ್ಚಟಗಳನ್ನು ಗುರುತು ಮಾಡಿ ಕೊನೆಯಲ್ಲಿ ಸಹಿ ಮಾಡಬೇಕು. ಇಷ್ಟವಿದ್ದರೆ ಮಾತ್ರ ತಮ್ಮ ಹೆಸರು, ವಿಳಾಸ ಬರೆಯಬಹುದು. ಶ್ರೀ ಗಳ ಈ ದುಶ್ಚಟ ನಿವಾರಣಾ ಹುಂಡಿ, ಸಂಕಲ್ಪ ಪಾತ್ರಗಳಿಂದ ತುಂಬಿದೆ. ಪೇಜಾವರ ಶ್ರೀ ಗಳ ಪರ್ಯಾಯ ಅವಧಿಯಲ್ಲಿ ಒಟ್ಟು 803 ಜನರು ದುಶ್ಚಟ ಮುಕ್ತರಾಗುವ ಸಂಕಲ್ಪ ಮಾಡಿದ್ದಾರೆ. ಇದರಲ್ಲಿ ರಾಜ್ಯದ ಪಾತ್ರಗಳ ಹೊರತಾಗಿ ತಮಿಳುನಾಡಿನ ಕಾಲೇಜೊಂದರ 140 ಮಂದಿ ವಿದ್ಯಾರ್ಥಿಗಳು ಸೇರಿದಂತೆ 290 ಯುವಕರು ತಾವು ವರದಕ್ಷಿಣೆ ಸ್ವೀಕರಿಸುವುದಿಲ್ಲ ಎಂದು ಸಂಕಲ್ಪ ಪತ್ರ ಬರೆದು ಹಾಕಿದ್ದಾರೆ.

ಇನ್ನು ತಂದೆ ತಾಯಿಯಿಂದ ಈ ಸಂಕಲ್ಪ ಹುಂಡಿಯ ಬಗ್ಗೆ ವಿಷಯ ತಿಳಿದು ಚಿಕ್ಕ ಮಕ್ಕಳು ಸಹ ಹೋಮ್‌ ವರ್ಕ್‌ ಮಾಡಲು ಉದಾಸೀನ, ಬಹಳ ಟಿವಿ ನೋಡುವ, ಬೆಳಗ್ಗೆ ತಡವಾಗಿ ಏಳುವ, ಅಪ್ಪ ಅಮ್ಮನಿಗೆ ಬೈಯುವ, ಹೊರಗಿನ ತಿಂಡಿಗಳನ್ನು ತಿನ್ನುವ ತಮ್ಮ ದುಶ್ಚಟವನ್ನು ಬಿಡುವುದಾಗಿ 30 ಕ್ಕೂ ಹೆಚ್ಚು ಸಂಕಲ್ಪ ಪತ್ರ ಹಾಕಿದ್ದಾರೆ. ಇನ್ನು ಈ ಪಾತ್ರಗಳು ಕನ್ನಡ, ತಮಿಳು, ಇಂಗ್ಲಿಷ್‌, ತೆಲುಗು, ಮಲಯಾಳಿ, ಹಿಂದಿಯಲ್ಲಿ ಹೀಗೆ ಹಲವು ಭಾಷೆಯಲ್ಲಿ ಬಂದಿರುವುದೇ ಪೇಜಾವರ ಶ್ರೀ ಗಳ ಕರೆ ಎಲ್ಲರ ಮನ ಮುಟ್ಟಿದೆ ಎಂಬುದಕ್ಕೆ ಪುರಾವೆಯಾಗಿದೆ. ಇನ್ನು ಕೆಲವು ಪಾತ್ರಗಳಲ್ಲಿ ತಮ್ಮ ಮನೆಯವರ ದುಶ್ಚಟ ಬಿಡಿಸಲು ತಾವು ಸಂಕಲ್ಪ ಮಾಡಿರುವುದು ತುಂಬ ತಮಾಷೆಯಾಗಿದ್ದವು.

ಒಟ್ಟಿನಲ್ಲಿ ಪೇಜಾವರ ಶ್ರೀ ಗಳ ಹಾಗೆ ಎಲ್ಲರೂ ಇಂತಹ ಕಾರ್ಯಕ್ರಮಗಳನ್ನು ಮಾಡಿದರೆ ಸಮಾಜ ದುಶ್ಚಟ ಮುಕ್ತವಾಗುದರಲ್ಲಿ ಯಾವುದೇ ಸಂದೇಹವಿಲ್ಲ….!