ಕಟ್ಟಡವೊಂದರ ಮಹಡಿಯಿಂದ ಸುರಿಯಿತು ಹಣದ ಮಳೆ; -2 ಸಾವಿರ, 500 ಮುಖಬೆಲೆಯ ನೋಟುಗಳನ್ನು ನೋಡಿ ಮುಗಿಬಿದ್ದು ಆರಿಸಿಕೊಂಡ ಜನ.!

0
402

ಹಣಕ್ಕಾಗಿ ಎಷ್ಟೊಂದು ಕಷ್ಟ ಪಡಬೇಕು ಎನ್ನುವುದು ಎಲ್ಲರಿಗೂ ತಿಳಿದಿರುವ ವಿಚಾರವಾಗಿದ್ದು, ಅದಕ್ಕಾಗಿ ರಸ್ತೆ ಅಥವಾ ಯಾವುದೊ ಸ್ಥಳದಲ್ಲಿ 10 ರೂ. ಸಿಕ್ಕರೂ ಎಷ್ಟೊಂದು ಆನಂದವಾಗುತ್ತೆ, ಹೀಗೆಯೇ ಒಂದು ವೇಳೆ ನೂರು ಅಥವಾ ಸಾವಿರ ಸಿಕ್ಕರೆ ಮುಗಿತು ಆವತ್ತು ಹಬ್ಬವೇ ಅನಿಸುತ್ತೆ, ಆದರೆ ಒಂದೇ ಸ್ಥಳದಲ್ಲಿ ಕಂತೆ ಕಂತೆ ಹಣ ಸಿಕ್ಕರೆ ಸಂತೋಷ ಕ್ಕಿಂತ ಆಶ್ಚರ್ಯವಾಗುತ್ತೆ, ಏಕೆಂದರೆ ಇಷ್ಟೊಂದು ಹಣ ಸಿಗುತ್ತೆ ಅಂದರೆ ಇದು ಹೇಗೆ ಸಾಧ್ಯ ಎನ್ನುವ ಭಯ ಹುಟ್ಟುವುದು ನಿಜ. ಆದರೆ ಇಂತಹದೆ ಒಂದು ಘಟನೆ ಕೋಲ್ಕತ್ತಾದ ನಡೆದಿದ್ದು ಕಟ್ಟಡವೊಂದರ ಮಹಡಿಯಿಂದ ರೂ.2000, 500, ರೂ.100 ಮುಖಬೆಲೆಯ ಕಂತೆ ಕಂತೆ ಹಣದ ಸುರಿಮಳೆ ಆಗಿದ್ದು ಜನರಲ್ಲಿ ಅಚ್ಚರಿ ಮೂಡಿದೆ.

ಹಣದ ಸುರಿಮಳೆ?

ಕೊಲ್ಕತ್ತಾದ ಖಾಸಗಿ ಕಂಪನಿಯೊಂದರಲ್ಲಿ ಅವ್ಯವಹಾರ ನಡೆದಿದೆ ಎಂಬ ದೂರು ಕೇಳಿಬಂದಿತ್ತು. ಇಂತಹ ಕಚೇರಿಯ ಮೇಲೆ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ದಾಳಿ ನಡೆಸಿ ಬಿಲ್ಡಿಂಗ್ ನಲ್ಲಿದ್ದ ಆಮದು, ರಫ್ತು ವ್ಯವಹಾರ ನಡೆಸುವ ಕಂಪನಿಯ ಮೈಲೆ ರೈಡ್ ಮಾಡಿದ್ದರು. ಈ ದಾಳಿಯಿಂದ ತಪ್ಪಿಸಿಕೊಳ್ಳಲು, ದಾಳಿಯ ದಿಕ್ಕನ್ನು ತಪ್ಪಿಸುವ ಸಲುವಾಗಿ ಹೋಕ್ ಮರ್ಚೆಂಟೈಲ್ ಪ್ರೈವೇಟ್ ಲಿಮಿಟೆಡ್ ಕಚೇರಿಯ ಸಿಬ್ಬಂದಿಗಳು ಕಚೇರಿಯ ಆರನೇ ಮಹಡಿಯಿಂದ ಕಂತೆ ಕಂತೆ ಹಣವನ್ನು ಹೊರ ಎಸೆದಿದ್ದರು. ಈ ವೇಳೆ ಕಚೇರಿಯ ಕೆಳಗಿದ್ದ ಅನೇಕರು ಸಿಕ್ಕಿಂದ್ದೇ ಸೀರುಂಡೆ ಎನ್ನುವಂತೆ ಕೈಗೆ ಸಿಕ್ಕ ನೋಟುಗಳನ್ನು ಬಾಚಿಕೊಂಡಿದ್ದರು.

ಈ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಕಟ್ಟಡದಿಂದ ಕಂತೆ ಕಂತೆ ಹಣ ಬೀಳೋದನ್ನು ನೋಡಿ ಜನರು ಅಚ್ಚರಿಗೊಂಡಿದ್ದಾರೆ. ಕೆಲವರು ಓಡೋಡಿ ಹೋಗಿ ಹಣವನ್ನ ಜೇಬಿಗೆ ಇಳಿಸಿಕೊಂಡಿದ್ದಾರೆ. ಕೂಡಲೇ ಅಧಿಕಾರಿಗಳು ಹೊರ ಎಸೆದ ಹಣವನ್ನು ವಶಕ್ಕೆ ಪಡೆದಿದ್ದಾರೆ. ಕಟ್ಟಡದ ಪರಿಶೀಲನೆ ಮುಂದುವರಿದಿದ್ದು, ದಾಳಿಗೆ ಸಂಬಂಧಿಸಿದ ಮಾಹಿತಿ ನೀಡಲು ಅಧಿಕಾರಿಗಳು ಹಿಂದೇಟು ಹಾಕಿದ್ದಾರೆ. ಆದರೆ ಮೂಲಗಳ ಪ್ರಕಾರ ಸೆಂಟ್ರಲ್ ಕೋಲ್ಕತ್ತಾದ ನಂಬರ್ 27, ಬ್ಯಾಂಟಿಕ್ ಸ್ಟ್ರೀಟ್ ನಲ್ಲಿ ಈ ಘಟನೆ ನಡೆದಿದೆ.

ಬುಧವಾರ ಮಧ್ಯಾಹ್ನ ಕಂದಾಯ ಗುಪ್ತಚರ ಇಲಾಖೆಯ ಅಧಿಕಾರಿಗಳು ಆಮದು ಮತ್ತು ರಫ್ತು ವ್ಯವಹಾರ ನಡೆಸುವ ಕಚೇರಿ (Hoque Merchantile Pvt Ltd) ಮೇಲೆ ದಾಳಿ ನಡೆಸಿದ್ದರು. ಅಧಿಕಾರಿಗಳು ಕಟ್ಟಡದ ಪರಿಶೀಲನೆಗೆ ಮುಂದಾದಾಗ ಅಲ್ಲಿಯವರು ತಮ್ಮಲ್ಲಿದ ಹಣವನ್ನು ಕಿಟಕಿ ಮೂಲಕ ಹೊರಗೆ ಎಸೆದಿದ್ದಾರೆ ಎನ್ನಲಾಗಿದೆ. ಏನೇ ಅಗಲಿ ಹಣ ಸಿಕ್ಕ ಜನರಿಗೆ ಮಾತ್ರ ಎಲಿಲ್ಲದ ಸಂತೋಷವಾಗಿದೆ.